ಭಾರತದ ಪರ್ವತ ಶ್ರೇಣಿಗಳು

ಭಾರತದ ಪರ್ವತ ಶ್ರೇಣಿಗಳು

ಉತ್ತರ ಭಾರತದ ಪರ್ವತ ಶ್ರೇಣಿಗಳು

ಕಾರಾಕೊರಂ ಪರ್ವತ ಶ್ರೇಣಿ

ಕಾರಾಕೊರಂ ಪರ್ವತ ಶ್ರೇಣಿ ಭಾರತಪಾಕಿಸ್ತಾನ ಮತ್ತು ಚೀನಾ ದೇಶಗಳ ಸರಹದ್ದಿನಲ್ಲಿ ಹಾದು ಹೋಗುವ ಅತಿ ದೊಡ್ಡ ಪರ್ವತ ಶ್ರೇಣಿಯಾಗಿದೆ. ಕಾರಾಕೊರಂ ಎಂದರೆ ಟರ್ಕಿಕ್ ಭಾಷೆಯಲ್ಲಿ ಕಪ್ಪು ಕಲ್ಲಿನ ರಾಶಿ ಎಂದರ್ಥ

ಸ್ಥಳೀಯವಾಗಿ ಇವನ್ನು ಲಡಾಖ್ ಮತ್ತು ಜಾಸ್ಕರ್ ಶ್ರೇಣಿ ಎನ್ನುವರು

ವಿಶ್ವದ ಎರಡನೇ ಅತ್ಯಂತ ಎತ್ತರದ ಶಿಖರ ಕೆ2 ಅಥವಾ ಮೌಂಟ್ ಗಾಡ್ವಿನ್ ಆಸ್ಟಿನ್ (8611 ಮೀ) ಕಂಡುಬರುವುದು ಇಲ್ಲಿಯೇ.

ವಿಶ್ವದ 2 ಮತ್ತು 3ನೇ ಅತಿ ದೊಡ್ಡ ಹಿಮನದಿಗಳು ಎನಿಸಿದ ಸಿಯಾಚಿನ್ ಮತ್ತು ಬಿಯಾಫೋ ಇಲ್ಲಿವೆ.

ಪ್ರಪಂಚದ ಅತ್ಯುನ್ನತ ಯುದ್ಧಭೂಮಿಯಾದ ಸಿಯಾಚಿನ್ ಕಾರಾಕೋರಂ ಸರಣಿಯಲ್ಲಿದೆ.

ಇಲ್ಲಿನ ತಾರ್ಕುಗನ್ ಮತ್ತು ಪಾಮಿರ್ ವೆಟ್‍ಲ್ಯಾಂಡ್ ರಾಷ್ಟ್ರೀಯ ಸಂರಕ್ಷಿತಾ ತಾಣಗಳು ಯುನೆಸ್ಕೋ ಪಟ್ಟಿಗೆ ಸೇರಿವೆ.

ಲಡಾಖ್ ಶ್ರೇಣಿ

ಭಾರತದ ಅತ್ಯುನ್ನತ ಪ್ರಸ್ಥಭೂಮಿಯಾಗಿದ್ದು ಲಡಾಖ್ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಹರಡಿದೆ. ಇದು ಸಮುದ್ರಮಟ್ಟದಿಂದ ಸು.400 ಮೀ ಎತ್ತರವಿದೆ. ಎಂ.ಟಿ ಕಾಮೆಟ್ ಅಥವಾ ರಾಪಾಕ್ಷಿ (7,788 ಮೀ) ಇಲ್ಲಿನ ಎತ್ತರದ ಪರ್ವತವಾಗಿದೆ.

ಇಲ್ಲಿ ಪಶ್ಮಿನಾ ಎಂಬ ಉಣ್ಣೆಬಟ್ಟೆ ತಯಾರಿಕಾ ಕೇಂದ್ರವಿದೆ.

ಧೌಲಾಧರ್ ಶ್ರೇಣಿ

ಈ ಶ್ರೇಣಿಗೆ ನಾಗತಿಜ, ಮಸ್ಸೂರಿ ಶ್ರೇಣಿ ಎಂತಲೂ ಕರೆಯುವರು. ಕೈಲಾಶ್, ಗಾರ್ಜುಂಡಾ, ಥೋರಲ್, ಡ್ರೋಮ್‍ಡೇರಿ ಇಲ್ಲಿನ ಪ್ರಮುಖ ಪರ್ವತ ಶ್ರೇಣಿಗಳು

ಪಿರ್ ಪಂಜಾಲ್ ಶ್ರೇಣಿ

ಇಲ್ಲಿ ಪ್ರಸಿದ್ಧವಾದ ಲಾಹುಲ್ ಕಣಿವೆಗಳು ಕಂಡುಬರುತ್ತವೆ. ಈ ಶ್ರೇಣಿಯಲ್ಲಿನ ಪರ್ವತಗಳು ಆರ್ಥೋಕ್ಲೈನ್ ಮಡಿಕೆ ಪರ್ವತಗಳಾಗಿವೆ.

ಭಾರತದ ಅತಿದೊಡ್ಡ ಸಿಹಿನೀರಿನ ಸರೋವರ ವೂಲಾರ್ ಜಮ್ಮುವಿನಲ್ಲಿ ಕಂಡುಬರುತ್ತದೆ. ಈ ಸರೋವರವು ಝೀಲಂ ನದಿಯಿಂದ ಉಂಟಾಗಿದೆ.

ಕೃಷ್ಣಗಂಗಾಝೀಲಂ ಮತ್ತು ಚೀನಾಬ್ ಇಲ್ಲಿ ಹರಿಯುವ ಪ್ರಮುಖ ನದಿಗಳು

ಶಿವಾಲಿಕ್ ಬೆಟ್ಟಗಳು

ಶಿವಾಲಿಕ್ ಪರ್ವತ ಶ್ರೇಣಿಯು ಕೆಳ ಹಿಮಾಲಯ ಎನಿಸಿದ್ದು ಇದನ್ನು ಹಿಮಾಲಯದ ಪಾದಬೆಟ್ಟಗಳೆಂತಲೂ ಕರೆಯುವರು. ಶಿವಾಲಿಕ್ ಪರ್ವತ ಶ್ರೇಣಿಗಳಲ್ಲಿ ಕಂಡುಬರುವ  ಜಯಂತಿಯಾ ಬೆಟ್ಟಗಳ ವಲಯವನ್ನು ಸ್ಥಿತ್ಯಂತರ ವಲಯ (ಟ್ರಾನ್ಸಿಷಿನಲ್ ಜೋನ್) ಎನ್ನುವರು. ಇದು ಜೂರ್ ಮಡಿಕೆ ಪರ್ವತಗಳಿಗೆ ಉದಾಹರಣೆಯಾಗಿದೆ. ಈ ಬೆಟ್ಟ ಪ್ರದೇಶವನ್ನು ತೆರಾಯಿ ಮಣ್ಣಿನ ಭೂಮಿ ಎನ್ನುವರು.

ಸಾತ್ಪುರ ಪರ್ವತ ಶ್ರೇಣಿ

ಸಾತ್ಪುರ ಪರ್ವತ ಶ್ರೇಣಿಯು ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್‍ಘರ್‍ಗಳಲ್ಲಿ ಕಂಡುಬರುತ್ತದೆ. ದೂಪ್‍ಗರ್ ಇಲ್ಲಿನ ಎತ್ತರದ ಪರ್ವತವಾಗಿದೆ. ಈ ಪರ್ವತವನ್ನು ಸೂರ್ಯ ಮುಳುಗುವ ಸ್ಥಳ ಎಂದು ಕರೆಯುತ್ತಾರೆ.

ನರ್ಮದಾ ಮತ್ತು ತಪತಿ ಇಲ್ಲಿನ ಪ್ರಮುಖ ನದಿಗಳಾಗಿವೆ.

ವಿಂಧ್ಯ ಪರ್ವತ ಶ್ರೇಣಿ

ವಿಂಧ್ಯ ಪರ್ವತ ಶ್ರೇಣಿಯು ಸ್ವಲ್ಪಮಟ್ಟಿಗೆ ಗುಜರಾತ್, ರಾಜಸ್ತಾನಗಳಲ್ಲಿ ಮತ್ತು ಹೆಚ್ಚಾಗಿ ಮಧ್ಯಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಪರ್ವತ ಶ್ರೇಣಿಯು ಅವಶೇಷ ಪರ್ವತಗಳಿಗೆ ಉದಾಹರಣೆಯಾಗಿದೆ.

ಬಾಂಧವಗರ್ ಮತ್ತು ಪನ್ನಾ ಇಲ್ಲಿನ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಾಗಿವೆ. ಇಲ್ಲಿ ದೊರೆಯುವ ಕೆಂಪು ಕಲ್ಲಿನ ಮರಳು ಇದರ ಮತ್ತೊಂದು ವಿಶೇಷ.

ಪಾಲಿಸಿನ್ಬೆಟ್ವಾಪರ್ಪಾತಿಕೆನ್ತಮಸಾ ಮತ್ತು ಸನ್ ಇಲ್ಲಿನ ಪ್ರಮುಖ ನದಿಗಳಾಗಿವೆ.

ಭಾರತದ ಪ್ರಸಿದ್ಧ ವಜ್ರದ ಗಣಿ ಪನ್ನಾ ಇಲ್ಲಿ ಕಂಡುಬರುತ್ತದೆ.

ಅರಾವಳಿ ಪರ್ವತ ಶ್ರೇಣಿ

ಅರಾವಳಿ ಪರ್ವತ ಶ್ರೇಣಿಯನ್ನು ಶಿಖರಗಳ ಸಾಲು ಎನ್ನುವರು. ಇವು ಸ್ಥರಭಂಗದಿಂದ ರೂಪುಗೊಂಡಿದ್ದು ಭಾರತದ ಅತ್ಯಂತ ಪ್ರಾಚೀನ ಮಡಿಕೆ ಪರ್ವತಗಳಾಗಿವೆ.

ರಾಜಸ್ತಾನಹರ್ಯಾಣಗುಜರಾತ್ ಮತ್ತು ಪಾಕಿಸ್ತಾನದ ಪಂಜಾಬ್ ಹಾಗೂ ಸಿಂಧ್ ಪ್ರಾಂತ್ಯಗಳಲ್ಲಿ ಕಂಡುಬರುತ್ತವೆ.

ಈ ಪರ್ವತ ಶ್ರೇಣಿಯನ್ನು ಸ್ಥಳೀಯವಾಗಿ ಮೇವಾತ್ ಬೆಟ್ಟಗಳೆನ್ನುತ್ತಾರೆ. ಇಲ್ಲಿನ ಮೌಂಟ್ ಅಬುವಿನಲ್ಲಿರುವ ಗುರುಶಿಖರ ಅತ್ಯಂತ ಎತ್ತರದ ಶಿಖರವಾಗಿದೆ. ಈ ಶಿಖರದ ಮೇಲೆ ಮೌಂಟ್ ಅಬು ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಲಾಗಿದೆ.

ಬನಾಸ್, ಲೂನಿ, ಸಾಕಿ, ಸಬರಮತಿ ಇಲ್ಲಿನ ಪ್ರಮುಖ ನದಿಗಳಾಗಿವೆ. ಈ ಶ್ರೇಣಿಯಲ್ಲಿ ಸಾಂಬಾರ್ ಎಂಬ ಉಪ್ಪುನೀರಿನ ಸರೋವರವಿದೆ (ರಾಜಸ್ತಾನ).

ಗೊರಾನ್ ಘಾಟ್ ಮತ್ತು ಹಾಲ್ದಿ ಘಾಟ್ ಇಲ್ಲಿನ ಪ್ರಮುಖ ಘಾಟ್‍ಗಳಾಗಿದ್ದು, ಗೊರಾನ್ ಘಾಟ್ ಗುರುಶಿಖರ ಮತ್ತು ಮೌಂಟ್ ಅಬುಗಳನ್ನು ಸಂಪರ್ಕಿಸುತ್ತದೆ.

ಮೈಕಲಾ ಪರ್ವತ ಶ್ರೇಣಿಗಳು

ಮೈಕಲಾ ಪರ್ವತ ಶ್ರೇಣಿಗಳು ಮಧ್ಯಪ್ರದೇಶದಲ್ಲಿ ಸ್ಥಾಪಿತವಾಗಿವೆ. ಅಮರಕಂಟಕ ಇಲ್ಲಿನ ಎತ್ತರದ ಶಿಖರವಾಗಿದ್ದು ಇದು ತಪತಿ ಮತ್ತು ಮಹಾನದಿಗಳ ಜಲಾನಯನ ಪ್ರದೇಶಗಳನ್ನು ಬೇರ್ಪಡಿಸುತ್ತದೆ.

ನರ್ಮದಾಸೋನ್ಮಾಹಾನದಿ ಮತ್ತು ವೇನ್‍ಗಂಗಾ ಇಲ್ಲಿನ ಪ್ರಮುಖ ನದಿಗಳಾಗಿವೆ.

ಇಲ್ಲಿ ಕನ್ಹಾ ರಾಷ್ರ್ಟೀಯ ಉದ್ಯಾನವನವಿದೆ.

ರಾಜಮಹಲ್ ಬೆಟ್ಟಗಳು

ಝಾರ್ಖಾಂಡ್ ರಾಜ್ಯದಲ್ಲಿ ಕಂಡುಬರುವ ಈ ಬೆಟ್ಟಗಳು ಬಸಾಲ್ಟ್ ಶಿಲೆಯಿಂದ ರೂಪುಗೊಂಡಿವೆ. ಈ ಬೆಟ್ಟಗಳನ್ನು ಸಸ್ಯದ ಅವಶೇಷಗಳ ಪಳೆಯುಳಿಕೆ ಮನೆ ಎಂದು ಕರೆಯುವರು.

ಸಂತಾಲ ಬುಡಕಟ್ಟು ಜನಾಂಗ ಇಲ್ಲಿ ವಾಸವಾಗಿದೆ.

ಖೈಮೂರ್ ಶ್ರೇಣಿ

ಮಧ್ಯಪ್ರದೇಶಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಹರಡಿವೆ. ಇಲ್ಲಿ ಪ್ರಸಿದ್ಧ ಪೂರ್ವಾ ಜಲಪಾತ ಮತ್ತು ಒಡ್ಡಾ ಜಲಪಾತಗಳನ್ನು ನೋಡಬಹುದು

ಮಹಾದೇವೋ ಬೆಟ್ಟಗಳು

ಮಧ್ಯಪ್ರದೇಶದಲ್ಲಿ ಕಂಡುಬರುವ ಮಹಾದೇವೋ ಬೆಟ್ಟಗಳಲ್ಲಿ ಪ್ರಸಿದ್ಧ ಪಚಮರಿ ಗಿರಿಧಾಮವಿದೆ.

 

ದಕ್ಷಿಣ ಭಾರತದ ಪರ್ವತ ಶ್ರೇಣಿಗಳು

ಪಶ್ಚಿಮ ಘಟ್ಟಗಳು

ಸು 1600 ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ. ಪಶ್ಚಿಮ ಘಟ್ಟಗಳು ಒಟ್ಟು 1,60,000 ಚದರ ಕಿ.ಮೀ. ಪ್ರದೇಶವನ್ನು ಆವರಿಸಿವೆ.

ಈ ಪರ್ವತ ಶ್ರೇಣಿಯು ಸಿನೋಜೋಯಿಕ್ ಯುಗಕ್ಕೆ ಸೇರಿದ್ದಾಗಿದೆ. ಇವು ಮೆಸ್ತಾ ಮತ್ತು ಇನ್ಸೆಲ್‍ಬರ್ಗ್ ಸ್ವರೂಪದಿಂದ ರಚಿತವಾದ ಬೆಟ್ಟಗಳಾಗಿವೆ. ಪಶ್ಚಿಮ ಘಟ್ಟಗಳನ್ನು ಭಾರತದ ಅತ್ಯಂತ ಕಡಿದಾದ ಇಳಿಜಾರು ಶ್ರೇಣಿ (ದ ಗ್ರೇಟ್ ಎಸ್ಕಾರ್ಪ್‍ಮೆಂಟ್ ಆಫ್ ಇಂಡಿಯಾ) ಎನ್ನಲಾಗಿದೆ.

ಪಶ್ಚಿಮ ಘಟ್ಟಗಳನ್ನು ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಸಹ್ಯಾದ್ರಿ ಎಂತಲೂತಮಿಳನಾಡಿನಲ್ಲಿ ಅಣ್ಣಾಮಲೈಪಳನಿ ಹಾಗೂ ನೀಲಗಿರಿ ಬೆಟ್ಟಗಳು ಎಂತಲೂಕೇರಳದಲ್ಲಿ ಕಾರ್ಡಮಮ್ ಮತ್ತು ಅಣ್ಣಾಮಲೈ ಬೆಟ್ಟಗಳೆಂತಲೂ ಕರೆಯುವರು. ಪಶ್ಚಿಮ ಘಟ್ಟಗಳಲ್ಲಿನ ಪರ್ವತಗಳು ಹೆಚ್ಚು ಎತ್ತರವಾಗಿವೆ ಮತ್ತು ಬೆಟ್ಟಗಳ ಮಧ್ಯದಲ್ಲೆಲ್ಲೂ ಸ್ಥಳಾವಕಾಶವಿಲ್ಲದೆ ನಿರಂತರವಾಗಿವೆ.

ಪಶ್ಚಿಮ ಘಟ್ಟಗಳನ್ನು ವಿಶ್ವದ 8 ಹಾಟ್‍ಸ್ಪಾಟ್‍ಗಳಲ್ಲಿ ಒಂದು ಎಂದು ಗುರ್ತಿಸಿ 2012 ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.

ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಭಾರತದ ನೌಕಾಸೇನೆ ಐ.ಎನ್.ಎಸ್ ಸಹ್ಯಾದ್ರಿ (ಎಫ್49) ಯೋಜನೆಯನ್ನು ಆರಂಭಿಸಿದೆ.

ಗ್ರಾನೈಟ್ಬೋಂಡಾಲೈಟ್ಚಾರ್ನೋಲೈಟ್ ಇಲ್ಲಿ ಕಂಡುಬರುವ ಪ್ರಮುಖ ಶಿಲೆಗಳಾಗಿವೆ.

ಕೇರಳದಲ್ಲಿ ವಿಶೇಷವಾಗಿ ಪರ್ವತಗಳ ಮಧ್ಯದ ಹುಲ್ಲುಗಾವಲಿನಲ್ಲಿ ಬೆಳೆದ ಶೋಲಾಕಾಡುಗಳನ್ನು ಕಾಣಬಹುದು.

 

ಪಶ್ಚಿಮ ಘಟ್ಟಗಳ ಪ್ರಮುಖ ಪರ್ವತ ಸರಣಿಗಳು

ಅಣ್ಣಾಮಲೈ

ತಮಿಳನಾಡು ಹಾಗೂ ಕೇರಳದಲ್ಲಿ ಕಂಡುಬರುವ ಅಣ್ಣಾಮಲೈ ಬೆಟ್ಟಗಳಲ್ಲಿ ಎರ್ವಿಕುಲಂ ರಾಷ್ಟ್ರೀಯ ಉದ್ಯಾನವನಚಿನ್ನಾರ್ ವನ್ಯಜೀವಿ ತಾಣಪಾರಂಬಿಕುಲಂ ವನ್ಯಜೀವಿ ತಾಣಅಣ್ಣಾಮಲೈ ಹುಲಿ ಸಂರಕ್ಷಣಾ ತಾಣಗಳು ಕಂಡುಬರುತ್ತವೆ.

ಅಣ್ಣಾಮಲೈ ಶ್ರೇಣಿಯಲ್ಲಿ ಕಂಡುಬರುವ ಅನೈಮುಡಿ ಶಿಖರ (2695 ಮೀ) ದಕ್ಷಿಣ ಭಾರತದಲ್ಲಿಯೇ ಅತ್ಯುನ್ನತ ಶಿಖರವಾಗಿದೆ. 

ಚಿನ್ನಾರ್ಅಪಾಂಬಾರ್ನೀರಾರ್ಪಂಬಾರ್ಪರಾಂಬಿಕುಲಂ ಇಲ್ಲಿ ಹರಿಯುವ ಪ್ರಮುಖ ನದಿಗಳು.

ಪಳನಿ

ತಮಿಳನಾಡಿನಲ್ಲಿ ಕಂಡುಬರುವ ಈ ಸರಣಿಯಲ್ಲಿ ಪ್ರಸಿದ್ಧ ಕೊಡೈಕೆನಾಲ್ ಪ್ರವಾಸಿ ತಾಣವಿದೆ.

ಈಳಾಮಲೈ

ಈಳಾಮಲೈ ಬೆಟ್ಟ ಪ್ರದೇಶವನ್ನು ಮೆಣಸಿನ ತೋಟಗಳ ವಲಯ ಎನ್ನುವರು. ಮೆಣಸನ್ನು ಕಪ್ಪುಬಂಗಾರ ಎಂದು ಕರೆಯಲಾಗುತ್ತದೆ. ಕೇರಳ ಅತಿ ಹೆಚ್ಚು ಮೆಣಸು ಬೆಳೆಯುವ ರಾಜ್ಯವಾಗಿದೆ.

ಕಾರ್ಡಮಮ್

ಕಾರ್ಡಮಮ್ ಬೆಟ್ಟಗಳು ಕೇರಳ ಮತ್ತು ತಮಿಳುನಾಡಿನಲ್ಲಿ ಕಂಡುಬರುತ್ತವೆ. ಇಲ್ಲಿ ಪ್ರಸಿದ್ಧ ಪೆರಿಯಾರ್ ಹುಲಿ ಸಂರಕ್ಷಣಾ ತಾಣವಿದೆ. ಏಲಕ್ಕಿಯನ್ನು ಹೆಚ್ಚಾಗಿ ಬೆಳೆಯುವ ಕಾರಣ ಈ ಪ್ರದೇಶಕ್ಕೆ ಕಾರ್ಡಮಮ್ ಎಂಬ ಹೆಸರು ಬಂದಿದೆ.

ಪೆರಿಯಾರ್ಮುಲ್ಲಾ ಕುಡೈಪಂಬಾ ಇಲ್ಲಿ ಹರಿಯುವ ಪ್ರಮುಖ ನದಿಗಳಾಗಿವೆ.

ಇಲ್ಲಿ ಪೆರಿಯಾರ್ ವನ್ಯಜೀವಿ ತಾಣ ಮತ್ತು ಎರ್ವಿಕುಲಮ್ ರಾಷ್ಟ್ರೀಯ ಉದ್ಯಾನವನಗಳಿವೆ.

ಪ್ರಮುಖ ಪರ್ವತಗಳು

ಆನೈಮುಡಿ ಶಿಖರ 2698 (ಮೀ) ಇಡುಕ್ಕಿ (ಕೇರಳ)

ದೊಡ್ಡಬೆಟ್ಟ 2637 (ಮೀ) ನೀಲಗಿರಿ (ತಮಿಳುನಾಡು)

ಕಲ್ಸುಬಾಯಿ 1646 (ಮೀ) ಅಹ್ಮದ್ ನಗರ (ಮಹಾರಾಷ್ಟ್ರ)


ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಪ್ರಮುಖ ಶಿಖರಗಳು

ಮುಳ್ಳಯ್ಯನಗಿರಿ 1930 (ಮೀ)  ಚಿಕ್ಕಮಗಳೂರು

ಬಾಬ ಬುಡನ್ಗಿರಿ 1895      (ಮೀ) ಚಿಕ್ಕಮಗಳೂರು

ಕುದುರೆಮುಖ 1894 (ಮೀ) ಚಿಕ್ಕಮಗಳೂರು

ಬಿಳಿಗಿರಿರಂಗನ ಬೆಟ್ಟ 1800 (ಮೀ) ಚಾಮರಾಜನಗರ

ತಡಿಯಂಡಮೋಳ್ 1748 (ಮೀ) ಕೊಡಗು

ಕುಮಾರ ಪರ್ವತ 1712 (ಮೀ) ದಕ್ಷಿಣ ಕನ್ನಡ

ಪುಷ್ಪಗಿರಿ 1712 (ಮೀ)  ಪುಷ್ಪಗಿರಿ ಅಭಯಾರಣ್ಯ

ಬ್ರಹ್ಮಗಿರಿ 1608 (ಮೀ) ಕೊಡಗು

ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಪ್ರಮುಖ ಗಿರಿಧಾಮಗಳು : ಪಚಮರಿ (ಮಧ್ಯ ಪ್ರದೇಶ)ಮಹಾಬಲೇಶ್ವರಮಾಥೆರಾನ್ (ಮಹಾರಾಷ್ಟ್ರ)ನೀಲಗಿರಿ ಬೆಟ್ಟಗಳಲ್ಲಿನ ಉದಕಮಂಡಲ/ಊಟಿ (ತಮಿಳುನಾಡು)

ಪೂರ್ವಘಟ್ಟಗಳು

ಪೂರ್ವ ಘಟ್ಟಗಳು ಒಡಿಶಾಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಕಂಡುಬರುತ್ತವೆ. ಇವುಗಳನ್ನು ಮಹೇಂದ್ರ ಪರ್ವತಗಳು ಎಂದು ಸಹ ಕರೆಯುವರು. ಇವು ಪಶ್ಚಿಮ ಘಟ್ಟಗಳಂತೆ ನಿರಂತರವಾಗಿಲ್ಲ ಕಾರಣ ಮಹಾನದಿಕೃಷ್ಣಾಗೋದಾವರಿ ಮತ್ತು ಕಾವೇರಿ ನದಿ ಕಣಿವೆಗಳಿಂದ ಮತ್ತು ನದಿ ಮುಖಜ ಭೂಮಿಗಳಿಂದ ಅಲ್ಲಲ್ಲಿ ಪ್ರತ್ಯೇಕಗೊಂಡಿವೆ. ಈ ಕಣಿವೆಗಳ ಮೂಲಕ ಸಮುದ್ರದ ನೀರು ಒಳನುಗ್ಗಿ ಲಗೂನ್‍ಗಳು ಏರ್ಪಟ್ಟಿವೆ.

ಒಡಿಶಾದಲ್ಲಿ ಕಂಡುಬರುವ ಸಿಂಪ್ಲಿಪಾಲ ಪೂರ್ವ ಘಟ್ಟಗಳಲ್ಲಿನ ಪ್ರಮುಖ ರಾಷ್ಟ್ರೀಯ ಉದ್ಯಾನವನವಾಗಿದೆ. ಸಿಮ್ಲಿಪಾಲಕಿಯೋಂಜಾರ್ ಒಡಿಶಾದಲ್ಲಿನ ಪ್ರಮುಖ ಶಿಖರಗಳಾಗಿವೆ.

ಅರ್ಮಕೊಂಡ ಪೂರ್ವಘಟ್ಟಗಳಲ್ಲಿಯೇ ಅತಿ ಎತ್ತರವಾದ ಶಿಖರವಾಗಿದ್ದು ಇದು ಆಂದ್ರಪ್ರದೇಶದಲ್ಲಿ ಕಂಡುಬರುತ್ತದೆ.

ಪೂರ್ವ ಘಟ್ಟಗಳು ಹಾಗೂ ಪಶ್ಚಿಮ ಘಟ್ಟಗಳು ತಮಿಳನಾಡಿನ ನೀಲಗಿರಿ ಬೆಟ್ಟಗಳಲ್ಲಿ ಸಂಧಿಸುತ್ತವೆ.


ಪೂರ್ವಘಟ್ಟಗಳಲ್ಲಿನ ಪ್ರಮುಖ ಶ್ರೇಣಿಗಳು

ಪಾಲ್ಕೊಂಡ ಮತ್ತು ವೆಲಿಕೊಂಡ

ಆಂಧ್ರಪ್ರದೇಶದಲ್ಲಿ ಕಾಣಬರುವ ಈ ಪರ್ವತಗಳು ಅನೇಕ ಲೋಹ ಮತ್ತು ಲೋಹೆತರ ಖನಿಜಗಳಿಂದ ಕೂಡಿವೆ. ಪಾಲ್ಕೊಂಡ ಎಂದರೆ ಹಾಲುಬೆಟ್ಟಗಳು ಎಂದರ್ಥ.

ನಲ್ಲಮಲ್ಲ ಬೆಟ್ಟಗಳು

ಆಂಧ್ರಪ್ರದೇಶದ ಕೃಷ್ಣಾ ನದಿ ಮುಖಜ ಭೂಮಿಯಲ್ಲಿ ಮತ್ತು ಕೋರಮಂಡಲ್ ತೀರದಲ್ಲಿ ಈ ಬೆಟ್ಟಗಳು ಕಂಡುಬರುತ್ತವೆ.

ಶೇಷಾಚಲಂ ಬೆಟ್ಟಗಳು

ಆಂಧ್ರಪ್ರದೇಶದಲ್ಲಿ ಕಂಡುಬರುತ್ತವೆ. ಈ ಬೆಟ್ಟಗಳ ಪ್ರದೇಶವು ಜೀವ ವೈವಿಧ್ಯ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿತವಾಗಿದೆ.

ನಾಗರಿ ಶ್ರೇಣಿ

ಆಂಧ್ರಪ್ರದೇಶದಲ್ಲಿ ಸ್ಥಾಪಿತವಾಗಿವೆ. ಕೈಲಾಸಕೋನ ಸರೋವರವು ಇಲ್ಲಿನ ಪ್ರಮುಖ ಆಕರ್ಷಣೆ

 

ಈಶಾನ್ಯ ಭಾರತದ ಪರ್ವತ ಶ್ರೇಣಿಗಳು

ಮಿಜೋ ಬೆಟ್ಟಗಳು

ಮಿಜೋರಾಂ ಮತ್ತು ತ್ರಿಪುರಾದಲ್ಲಿ ಕಂಡುಬರುತ್ತವೆ. ಲುಸಾಯಿ (ಬ್ಲೂ ಮೌಂಟೇನ್) ಇಲ್ಲಿನ ಎತ್ತರದ ಬೆಟ್ಟವಾಗಿದೆ. ಲುಶಾಯಿಸ್ (ಮಿಜೋ) ಮತ್ತು ಕೋಗ್ನೈಟ್ ಬುಡಕಟ್ಟು ಜನಾಂಗಗಳು ಇಲ್ಲಿ ವಾಸಮಾಡುತ್ತಿದ್ದಾರೆ. ಇವುಗಳನ್ನು ಲೂಶೈ ಬೆಟ್ಟಗಳೆಂದು ಸಹ ಕರೆಯುವರು.

ಖಾಸಿ ಬೆಟ್ಟಗಳು

ಮೇಘಾಲಯ ರಾಜ್ಯದಲ್ಲಿ ಸ್ಥಾಪಿತವಾಗಿವೆ. ಖಾಸಿ ಇಲ್ಲಿ ಕಂಡುಬರುವ ಬುಡಕಟ್ಟು ಜನಾಂಗವಾಗಿದೆ. ಜಗತ್ತಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಮೌಸಿನ್‍ರಾಂ ಖಾಸಿ ಬೆಟ್ಟಗಳಲ್ಲಿ ಕಂಡುಬರುತ್ತದೆ.

ಗಾರೋ ಬೆಟ್ಟಗಳು

ಮೇಘಾಲಯದಲ್ಲಿ ಕಂಡುಬರುತ್ತವೆ. ನೂಕ್ರೇಕಾ ಮತ್ತು ತುರು ಇಲ್ಲಿನ ಪ್ರಮುಖ ಶಿಖರಗಳಾಗಿವೆ. ಗಾರೋ ಇಲ್ಲಿ ಪ್ರಮುಖ ಬುಡಕಟ್ಟು ಜನಾಂಗವಾಗಿದೆ.

ನಪಾಕ್ ಸರೋವರ ಹಾಗೂ ಅತಿದೊಡ್ಡ ಗುಹೆ ಎನಿಸಿರುವ ಸಿಜು ಇಲ್ಲಿನ ಪ್ರಮುಖ ಆಕರ್ಷಣೆಗಳು.

ಜಯಂತಿಯಾ ಬೆಟ್ಟಗಳು

ಜಯಂತಿಯಾ ಬೆಟ್ಟಗಳು ಮೇಘಾಲಯ ರಾಜ್ಯದಲ್ಲಿ ನೆಲೆಸಿವೆ. ಈ ಶ್ರೇಣಿಯ ಎತ್ತರದ ಶಿಖರ ಮಾರಂಗ್‍ಖಿಶ್. ಇಲ್ಲಿನ ಕ್ರೆಮ್ ಲಿಯೆಟ್ ಗುಹೆಯು ಭಾರತದ ಅತಿ ಉದ್ದದ ಸ್ವಾಭಾವಿಕ ಗುಹೆಯೆನಿಸಿದೆ.

ನಾಗಾ ಬೆಟ್ಟಗಳು

ನಾಗಾಲ್ಯಾಂಡ್ ರಾಜ್ಯದಲ್ಲಿ ಇರುವ ಈ ನಾಗಾ ಬೆಟ್ಟಗಳಲ್ಲಿ ನಾಗಾ ಬುಡಕಟ್ಟು ಜನಾಂಗ ವಾಸವಾಗಿದೆ. ಸಾರಾಮತಿ ಇಲ್ಲಿನ ಪ್ರಮುಖ ಶಿಖರವಾಗಿದೆ. ನಾಗಾ ಬೆಟ್ಟಗಳು ಭಾರತ ಮತ್ತು ಬರ್ಮಾ ಮಧ್ಯದಲ್ಲಿ ಸ್ವಾಭಾವಿಕ ಗಡಿಗಳಂತೆ ಸ್ಥಾಪಿತವಾಗಿವೆ.

ಮಣಿಪುರ ಬೆಟ್ಟಗಳು

ಮಣಿಪುರ ರಾಜ್ಯದಲ್ಲಿ ಕಂಡುಬರುತ್ತವೆ. ನಾಗಾ ಬೆಟ್ಟಗಳಂತೆ ಇವು ಸಹ ಭಾರತ ಮತ್ತು ಬರ್ಮಾ ದೇಶದ ಮಧ್ಯ ನೈಸರ್ಗಿಕ ಗಡಿಯಂತೆ ನೆಲೆಸಿವೆ. ಇಲ್ಲಿ ತೇಲುವ ಸರೋವರ ಎನಿಸಿರುವ ಲೋಕ್‍ಟಕ್ ಸರೋವರವಿದೆ. ಬರಾಕ್ ಇಲ್ಲಿನ ಪ್ರಮುಖ ನದಿಯಾಗಿದೆ.

ಪಾಟ್ಕಾಯ್‍ಬಮ್ ಬೆಟ್ಟಗಳು

ಪಾಟ್ಕಾಯ್‍ಬಮ್ ಬೆಟ್ಟಗಳು ಸಹ ಭಾರತ ಮತ್ತು ಬರ್ಮಾ ದೇಶಗಳ ಮಧ್ಯ ನೈಸರ್ಗಿಕ ಗಡಿಗಳಂತಿವೆ.

ಬರೈಲ್ ಬೆಟ್ಟಗಳು

ಅಸ್ಸಾಂ ರಾಜ್ಯದಲ್ಲಿ ಕಂಡುಬರುತ್ತಿದ್ದು ಇಲ್ಲಿ ಬರೈಲ್ ವನ್ಯಜೀವಿ ತಾಣವಿದೆ

ಮಿಕಿರ್ ಬೆಟ್ಟಗಳು

ಆರ್ಕಿಯನ್ ರಾಕ್ಸ್ ಅಥವಾ ಪ್ರಾಚೀನ ಕಲ್ಲುಗಳಿಂದ ಕೂಡಿದ ಭೂಭಾಗ ಇದಾಗಿದ್ದು ಇಲ್ಲಿ ಮಿಕಿರಿ ಬುಡಕಟ್ಟು ಜನಾಂಗ ವಾಸವಾಗಿದೆ.

ಅಬೋರ್ ಬೆಟ್ಟಗಳು

ಅರುಣಾಚಲ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಕಾಮೆಂಟ್‌ಗಳು