ಕರ್ನಾಟಕದ ಮಣ್ಣಿನ ಪ್ರಕಾರಗಳು

 ಕರ್ನಾಟಕದ ಮಣ್ಣಿನ ಪ್ರಕಾರಗಳು

ಕೆಂಪು ಮಣ್ಣು

ಕರಾವಳಿ ಮತ್ತು ಪಶ್ಚಿಮ ಘಟ್ಟಗಳನ್ನು ಹೊರತು ಪಡಿಸಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಈ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ.

ಗ್ರಾನೈಟ್ ನೀಸ್ ಶಿಲೆಗಳ ಜೊತೆಗೆ ಇದರಲ್ಲಿ ಕಬ್ಬಿಣದ ಆಕ್ಸೈಡ್ ಅಧಿಕ ಪ್ರಮಾಣದಲ್ಲಿ ಕಂಡುಬರುವುದರಿಂದ ಈ ಮಣ್ಣು ಕೆಂಪಾಗಿ ಕಾಣುತ್ತದೆ. ಈ ಮಣ್ಣಿನಲ್ಲಿ ಸುಣ್ಣ ಮತ್ತು ಉಪ್ಪಿನಾಂಶ ಹೆಚ್ಚಿದ್ದು ಸಾರಜನಕದ ಕೊರತೆಯಿರುತ್ತದೆ.

ರಾಗಿನವಣೆಸಜ್ಜೆಜೋಳನೆಲಗಡಲೆ ಈ ಮಣ್ಣಿನಲ್ಲಿ ಬೆಳೆಯುವ ಪ್ರಮುುಖ ಬೆಳೆಗಳಾಗಿವೆ.

ಕಪ್ಪು ಮಣ್ಣು

ಕರಾವಳಿ ಮತ್ತು ಪಶ್ಚಿಮ ಘಟ್ಟಗಳನ್ನು ಹೊರತು ಪಡಿಸಿ ಕರ್ನಾಟಕದ ಉತ್ತರ ಭಾಗದಲ್ಲಿ ಈ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ.

ಈ ಮಣ್ಣಿಗೆ ರೀಗರ್ ಮಣ್ಣುಕಪ್ಪು ಮಣ್ಣುಕಪ್ಪು ಹತ್ತಿ ಮಣ್ಣುಎರೆ ಮಣ್ಣು ಎಂದೆಲ್ಲಾ ಕರೆಯುವರು. ಬಸಾಲ್ಟ್ ಶಿಲೆಗಳ ಶಿಥಿಲೀಕರಣದಿಂದ ಈ ಮಣ್ಣು ಉಂಟಾಗಿದೆ. ಮೆಗ್ನೀಷಿಯಂಅಲ್ಯೂಮಿನಿಯಂ ಮತ್ತು ಕಬ್ಬಿಣದ ಆಕ್ಸೈಡ್‍ಗಳು ಈ ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಭತ್ತಹತ್ತಿಜೋಳಸೂರ್ಯಕಾಂತಿಮೆಣಸಿನಕಾಯಿಮೆಕ್ಕೆಜೋಳಬೇಳೆಕಾಳುಗಳುಕಬ್ಬುಈರುಳ್ಳಿ ಮುಂತಾದವು ಈ ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾಗಿವೆ.

ಜಂಬಿಟ್ಟಿಗೆ/ಲ್ಯಾಟರೈಟ್ ಮಣ್ಣು

ಅಧಿಕ ಮಳೆ ಬೀಳುವ ಮತ್ತು ಅಧಿಕ ಉಷ್ಣಾಂಶ ಇರುವ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಈ ತೆರನಾದ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ.

ಈ ಮಣ್ಣಿನಲ್ಲಿ ಸುಣ್ಣ ಮತ್ತು ಸಿಲಿಕೇಟ್‍ಗಳು ಕರಗಿ ಕೆಳಪದರದಲ್ಲಿ ಉಳಿದು ಹೋಗಿ ಕರಗದೇ ಉಳಿದ ಅಲ್ಯೂಮಿನಿಯಂ ಮತ್ತು ಕಬ್ಬಿಣಗಳು ಮಣ್ಣಿನ ಮೇಲ್ಪದರದಲ್ಲಿ ಉಳಿದು ಹೋಗುತ್ತವೆ. ನಂತರ ಈ ಅಲ್ಯೂಮಿನಿಯಂ ಮತ್ತು ಕಬ್ಬಿಣಗಳ ಕಣಗಳು ಲ್ಯಾಟರೈಟ್ ಶಿಲೆಗಳಾಗಿ ಮಾರ್ಪಾಡು ಹೊಂದುತ್ತವೆ. ಈ ಲ್ಯಾಟರೈಟ್ ಶಿಲೆಗಳನ್ನು ಮನೆಕಟ್ಟಲು ಬಳಸಲಾಗುತ್ತದೆ.

ಈ ಮಣ್ಣಿನಲ್ಲಿ ಗೋಡಂಬಿ, ಕಾಫಿ, ಟೀ, ಏಲಕ್ಕಿ, ಮೆಣಸು, ರಬ್ಬರ್ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತದೆ.

ಕರಾವಳಿ ಮೆಕ್ಕಲು ಮಣ್ಣು

ಈ ಮಣ್ಣು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡಉಡುಪಿದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುತ್ತದೆ.

ನದಿಗಳು ಸಮುದ್ರವನ್ನು ಸೇರುವ ನದಿ ಮುಖಜಭೂಮಿಗಳಲ್ಲಿ ಈ ತೆರನಾದ ಮಣ್ಣು ಕಂಡುಬರುತ್ತದೆ. ಇದರಲ್ಲಿ ಮರಳು ಮತ್ತು ಜೇಡಿಮಣ್ಣು ಮಿಶ್ರವಾಗಿರುತ್ತವೆ ಅಲ್ಲದೇ ಕೊಳೆತ ಜೈವಿಕಾಂಶಗಳು ಸಮೃದ್ಧಿಯಾಗಿರುತ್ತವೆ.

ಭತ್ತಗೋಡಂಬಿತೆಂಗುಅಡಿಕೆಬಾಳೆ ಮುಂತಾದವು ಈ ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾಗಿವೆ.

ಕಾಮೆಂಟ್‌ಗಳು