ಭೂಕಂಪನ ಜ್ವಾಲಾಮುಖಿ ಮತ್ತು ಸುನಾಮಿ
ಭೂಕಂಪನ
ಭೂಮಿಯ ಒಳಗಿನ ಶಿಲಾಫಲಕಗಳ ಅಲುಗಾಡುವಿಕೆಯಿಂದ ಭೂಕಂಪನಗಳು ಉಂಟಾಗುತ್ತವೆ. ಭೂಕಂಪನವನ್ನು ಭೂಕಂಪಲೇಖಿಯಲ್ಲಿ (ಸಿಸ್ಮೋಗ್ರಾಫ್) ಅಳೆಯುವರು. ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ ರಿಕ್ಟರ್ ಮಾಪಕ.
ಭೂಕಂಪನದ ಅಲೆಗಳು
ಭಾರತದಲ್ಲಿರುವ ಪ್ರಮುಖ ಭೂಕಂಪನ ಕೇಂದ್ರಗಳು
ಕರ್ನಾಟಕ – ಗೌರಿಬಿದನೂರು (ಚಿಕ್ಕಬಳ್ಳಾಪುರ) ಮತ್ತು ಚಿಂಚೊಳ್ಳಿ (ಕಲುಬುರ್ಗಿ)
ಮಹಾರಾಷ್ಟ್ರ - ಪುಣೆ ಮತ್ತು ಕೊಲಾಬ
ತಮಿಳುನಾಡು – ಕೊಡೈಕೆನಾಲ್
ಪ. ಬಂಗಾಳ – ಕಲ್ಕತ್ತಾ
ತೆಲಂಗಾಣ - ಹೈದ್ರಾಬಾದ್
ಉತ್ತರಾಖಂಡ – ಡೆಹ್ರಾಡೂನ್
ಜ್ವಾಲಾಮುಖಿ
ಅಂತರಾಳದಲ್ಲಿ ಶಿಲಾಸಮೂಹಗಳೊಡನೆ ಥೋರಿಯಂ, ಯುರೇನಿಯಂ, ಪ್ಲುಟೋನಿಯಂ ಇತ್ಯಾದಿ ವಿದ್ಯುತ್ ವಿಕಿರಣಶಕ್ತಿಯುಳ್ಳ ಖನಿಜಗಳು ಸಂಗ್ರಹವಾಗಿರುತ್ತವೆ.
ಷೀಲ್ಡ್ ಜ್ವಾಲಾಮುಖಿಗಳು
ಹವಾಯ್ ಮತ್ತು ಐಲ್ಯಾಂಡ್ ಗಳಲ್ಲಿ ಜ್ವಾಲಾಮುಖಿಗಳು ಕಲ್ಲಿನಂಶ ಹೆಚ್ಚಾಗಿರುವ ಲಾವಾವನ್ನು ಉಗುಳುತ್ತವೆ. ಈ ಕಲ್ಲು ಮತ್ತು ಮಣ್ಣಿನಂಶ ಕ್ರಮೇಣ ಸಂಗ್ರಹವಾಗುತ್ತ ಪರ್ವತದ ರೂಪವನ್ನು ತಾಳುತ್ತದೆ. ಈ ಜ್ವಾಲಾಮುಖಿಗಳ ಲಾವಾ ಅತಿ ಬಿಸಿಯಾಗಿದ್ದು ದ್ರವರೂಪದಲ್ಲಿರುತ್ತದೆ. ಇಂತಹ ಜ್ವಾಲಾಮುಖಿಗಳನ್ನು ಷೀಲ್ಡ್ ಜ್ವಾಲಾಮುಖಿಗಳೆಂದು ಕರೆಯಲಾಗುತ್ತದೆ. ಹವಾಯ್ ದ್ವೀಪದ ಮೌನಾಲೋವಾ ಅತಿ ಎತ್ತರದ ಷೀಲ್ಡ್ ಜ್ವಾಲಾಮುಖಿಯಾಗಿದೆ.
ಸಿಂಡರ್ ಕೋನ್ಸ್
ಕೆಲವು ಜ್ವಾಲಾಮುಖಿಗಳು ಲಾವಾಗಳಿಗಿಂತ ಹೆಚ್ಚಾಗಿ ಕಾದ ಕಬ್ಬಿಣದ ಮತ್ತು ಕಲ್ಲಿನ ಸಣ್ಣಸಣ್ಣ ತುಣುಕುಗಳನ್ನು ಹೊರಗೆಸೆಯುತ್ತವೆ. ಈ ತುಣುಕುಗಳು ಕೆಂಡದಂತಿರುವುದರಿಂದ ಇಂತಹ ಜ್ವಾಲಾಮುಖಿಗಳಿಗೆ ಸಿಂಡರ್ ಕೋನ್ಸ್ ಅಥವಾ ಕೆಂಡದ ಶಂಕುಗಳೆನ್ನುವರು. ಈ ತುಣುಕುಗಳು ಜ್ವಾಲಾಮುಖಿಯ ಬಾಯಿಯ ಸುತ್ತ ಸಂಗ್ರಹವಾಗತೊಡಗಿ ಸಣ್ಣ ಗುಡ್ಡಗಳನ್ನು ಸೃಷ್ಟಿಸುತ್ತವೆ. ಮೆಕ್ಸಿಕೋದ ಪರಿಕ್ಯುಟಿನ್ ಜ್ವಾಲಾಮುಖಿ ಮತ್ತು ಅರಿಜೋನಾದ ಸನ್ಸೆಂಟ್ ಜ್ವಾಲಾಮುಖಿ ಸಿಂಡರ್ ಕೋನ್ ಜ್ವಾಲಾಮುಖಿಗಳಿಗೆ ಉದಾಹರಣೆಗಳು.
ಸ್ಟ್ರಾಟೋ ಜ್ವಾಲಾಮುಖಿಗಳು
ಇವಕ್ಕೆ ಕಾಂಪೊಸಿಟ್ ಜ್ವಾಲಾಮುಖಿಗಳೆಂದು ಇನ್ನೊಂದು ಹೆಸರು ಇದೆ. ಇವುಗಳಲ್ಲಿ ಲಾವಾ, ಕೆಂಡ ಮತ್ತು ಬೂದಿಗಳು ಬೇರೆಬೇರೆ ಹಂತದಲ್ಲಿ ಹೊರಬೀಳುವುವು. ಮೊದಲು ಬೂದಿ ಮತ್ತು ಕೆಂಡಗಳು ಉಗಿಯಲ್ಪಟ್ಟು ಒಂದು ಪದರವನ್ನು ರಚಿಸುವುವು. ಈ ಪದರದ ಮೇಲೆ ಲಾವಾ ಹರಿಯುತ್ತದೆ. ಈ ಲಾವಾ ಒಣಗಿ ಮತ್ತು ತಣ್ಣಗಾಗಿ ಮತ್ತೊಂದು ಪದರ ಸೃಷ್ಟಿಸುವುದು. ಈ ಕ್ರಿಯೆ ಮತ್ತೆಮತ್ತೆ ಪುನರಾವರ್ತನೆಯಾಗುವುದು. ಜಪಾನ್ ನ ಫ್ಯೂಜಿಯಾಮ ಪರ್ವತ, ಫಿಲಿಪ್ಪೀನ್ಸ್ ನ ಮೇಯನ್ ಪರ್ವತ ಮತ್ತು ಇಟಲಿಯ ವೆಸೂವಿಯಸ್ ಪರ್ವತಗಳು ಸ್ಟ್ರಾಟೋ ಜ್ವಾಲಾಮುಖಿಗಳಿಗೆ ಉದಾಹರಣೆಗಳು.
ಸೂಪರ್ ಜ್ವಾಲಾಮುಖಿಗಳು
ಅತ್ಯಂತ ದೊಡ್ಡದಾಗಿದ್ದು ಬೃಹತ್ ಬಾಯುಳ್ಳ ಜ್ವಾಲಾಮುಖಿಗಳಾಗಿವೆ. ಕೆಲವೊಮ್ಮೆ ಇವು ಸ್ಫೋಟಿಸಿದಾಗ ಅಪಾರ ಹಾನಿಯಾಗುತ್ತದೆ. ಇಂತಹ ಜ್ವಾಲಾಮುಖಿಗಳನ್ನು ಸೂಪರ್ ಜ್ವಾಲಾಮುಖಿಗಳೆಂದು ಕರೆಯುವರು. ಇವು ಒಮ್ಮೆ ಸ್ಫೋಟಿಸಿದ ನಂತರ ಜಾಗತಿಕ ತಾಪಮಾನವು ಹಲವು ವರ್ಷಗಳವರೆಗೆ ಕಡಿಮೆಯಾಗುತ್ತದೆ ಕಾರಣ ಬೃಹತ್ ಪ್ರಮಾಣದಲ್ಲಿ ಬೂದಿ ಮತ್ತು ಗಂಧಕಗಳು ಹೊರಗೆಸೆಯಲ್ಪಡುವುದರಿಂದ ಸೂರ್ಯನ ಕಿರಣಗಳು ಭೂಮಿಗೆ ತಲುಪದೆ ಭೂಮಿಯ ಮೇಲಿನ ಉಷ್ಣಾಂಶ ಕಡಿಮೆಯಾಗುತ್ತದೆ. ಇಂತಹ ಜ್ವಾಲಾಮುಖಿಗಳು ಅತಿ ಅಪಾಯಕಾರಿಯಾದವು. ಉದಾಹರಣೆ ಯು.ಎಸ್.ಎ ನ ಯೆಲ್ಲೋಸ್ಟೋನ್ ಅಗ್ನಿಪರ್ವತ, ನ್ಯೂಜಿಲೆಂಡ್ ನ ಲೇಕ್ ಟೌಪೋ, ಇಂಡೋನೇಷ್ಯಾದ ಲೇಕ್ ಟೋಬಾ.
ಸಾಗರದಾಳದ ಜ್ವಾಲಾಮುಖಿಗಳು
ಭೂಮಿಯ ಮೇಲಿರುವುದಕ್ಕಿಂತ ಅತಿ ಹೆಚ್ಚು ಜ್ವಾಲಾಮುಖಿಗಳು ಸಾಗರದಾಳದಲ್ಲಿವೆ. ನೀರಿನಾಳ ಕಡಿಮೆಯಿರುವಲ್ಲಿ ಈ ಜ್ವಾಲಾಮುಖಿಗಳು ಆವಿ ಮತ್ತು ಕಲ್ಲುಮಣ್ಣುಗಳನ್ನು ನೀರಿನಿಂದ ಮೇಲಕ್ಕೆ ಉಗಿಯುತ್ತಿರುತ್ತವೆ.
ಹಿಮನದಿಯ ಅಡಿಯಲ್ಲಿನ ಜ್ವಾಲಾಮುಖಿಗಳು
ಇವು ಹಿಮದ ಪದರದಡಿಯಲ್ಲಿ ರಚನೆಯಾಗುತ್ತವೆ. ಹಿಮದ ಅಡಿಯಲ್ಲಿ ಸ್ಫೋಟ ಸಂಭವಿಸಿ ಸಮತಟ್ಟಾದ ಲಾವಾ ಹರಿಯುವುದರಿಂದ ಈ ಜ್ವಾಲಾಮುಖಿಗಳು ರಚನೆಯಾಗುತ್ತವೆ. ಮೇಲ್ಭಾಗದ ಹಿಮದ ಹೊದಿಕೆ ಕರಗಿದಾಗ ಲಾವಾ ಸಹ ಕುಸಿದು ಸಮತಟ್ಟಾದ ಶಿಖರವುಳ್ಳ ಅಗ್ನಿಪರ್ವತ ಸೃಷ್ಟಿಯಾಗುತ್ತದೆ. ಐಲ್ಯಾಂಡ್ ಮತ್ತು ಬ್ರಿಟಿಷ್ ಕೊಲಂಬಿಯಗಳಲ್ಲಿ ಇಂತಹ ಜ್ವಾಲಾಮುಖಿಗಳು ಕಾಣಬರುತ್ತವೆ.
ಜ್ವಾಲಾಮುಖಿಗಳ ಇತರ ಪ್ರಕಾರಗಳು
ಜಾಗೃತ ಜ್ವಾಲಾಮುಖಿಗಳು : ಆಗಿಂದಾಗ್ಗೆ ಸ್ಫೋಟಗೊಳ್ಳುತ್ತಲೇ ಇರುತ್ತವೆ.
ಉದಾ.. ಮೌಂಟ್ ವೆಸುವಿಯಸ್ – ಇಟಲಿ
ಮೌನಾಲೋವಾ - ಹವಾಯಿ ದ್ವೀಪಗಳು
ಕೋಟೋಪಾಕ್ಸಿ – ಈಕ್ವೆಡಾರ್
ಸ್ಟ್ರಾಂಬೋಲಿ - ಮೆಡಿಟರೇನಿಯನ್ ಸಮುದ್ರದ ಬಳಿಯ ಲಿಪಾರಿ ದ್ವೀಪ
ಮೌಂಟ್ ಎಟ್ನಾ - ಸಿಸಿಲಿ ದ್ವೀಪ (ಇಟಲಿ)
ಪಾರಿಕುಟಿನ್ – ಮೆಕ್ಸಿಕೊ
ಸುಪ್ತ/ನಿದ್ರಿತ ಜ್ವಾಲಾಮುಖಿಗಳು : ಹಲವು ಸಾವಿರ ವರ್ಷಗಳಿಗೊಮ್ಮೆ ಸ್ಫೋಟಿಸುವ ಜ್ವಾಲಾಮುಖಿಗಳು.
ಉದಾ.. ಪ್ರೊಪೊಕಟೆಪುಟಿ – ಮೆಕ್ಸಿಕೊ
ಮೌಂಟ್ ರೇನಿಯರ್ – ಮಡಗಾಸ್ಕರ್
ಹಲಿಯಾಕೌಲಾ - ಹವಾಯಿ
ಲಾಸ್ಸನ್ – ಅಮೇರಿಕಾ
ಮೌಂಟ್ ಫ್ಯೂಜಿಯಾಮ – ಜಪಾನ್
ಲುಪ್ತ/ನಂದಿತ ಜ್ವಾಲಾಮುಖಿಗಳು : ಸತ್ತಿರುವ ಅಂದರೆ ಎಂದಿಗೂ ಸ್ಫೋಟಗೊಳ್ಳದ ಜ್ವಾಲಾಮುಖಿಗಳು.
ಉದಾ.. ಮೌಂಟ್ ಪೋಪ್ – ಮಯನ್ಮಾರ್ (ಬರ್ಮಾ)
ಕಿಲಿಮಂಜಾರೋ – ತಾಂಜಾನಿಯಾ
ಜಿಂಬೊರಾಸೊ - ಪೆರು
ಜಿಂಜೊರಾಸೊ – ಅರ್ಜೆಂಟೈನಾ
ಪ್ರಪಂಚದ ಅತಿ ಹೆಚ್ಚು ಜ್ವಾಲಾಮುಖಿಗಳು ಪೆಸಿಫಿಕ್ ಸಾಗರದ ತೀರಾ ಪ್ರದೇಶದಲ್ಲಿ ಕಂಡುಬರುತ್ತವೆ
ಜ್ವಾಲಾಮುಖಿಯಿಂದ ಉಂಟಾಗುವ ಭೂಸ್ವರೂಪಗಳು
ಅಂತಸ್ಸರಣ ಭೂಸ್ವರೂಪಗಳು : ಭೂಮಿಯ ಒಳಗೆ ಉಂಟಾಗುವ ಭೂಸ್ವರೂಪ. ಹಲಗೆ ಹಲ್ಲು, ಮೋಟು ಶಿಲೆ, ಪ್ಯಾಕೋಲಿತ್, ಬ್ಯಾತೋಲಿತ್, ಲೋಪೋಲಿತ್ ಮುಂತಾದವು
ಬಹಿಸ್ಸರಣ ಭೂಸ್ವರೂಪಗಳು : ಭೂಮಿಯ ಹೊರಗೆ ಉಂಟಾಗುವ ಭೂಸ್ವರೂಪ. ಕಿಟ್ಟ (ಬೂದಿ), ಶಂಕು, ಮಹಾಕುಂಡ, ಸರೋವರಗಳು ಇತ್ಯಾದಿ.
ಸುನಾಮಿ
ಸುನಾಮಿಗಳು ದೀರ್ಘ ತರಂಗ ಅಂತರವನ್ನು ಹೊಂದಿರುವ ಸಮುದ್ರದ ಅಲೆಗಳಾಗಿದ್ದು ಬೃಹತ್ ಪ್ರಮಾಣಗಳ ನೀರಿನ ಒಂದು ಹಠಾತ್ ಚಲನೆಯಿಂದ ಹುಟ್ಟಿಕೊಳ್ಳುತ್ತವೆ. ಹಲವೊಮ್ಮೆ ಸಾಗರದಲ್ಲಿ ಈ ಅಲೆಯ ತುದಿಗಳ ನಡುವಿನ ಅಂತರವು 100 ಕಿಲೋಮೀಟರ್‌ಗಿಂತಲೂ ಹೆಚ್ಚಾಗಿರುತ್ತದೆ. ನೀರಿನ ಆಳವನ್ನು ಅವಲಂಬಿಸಿ ಇಂಥಾ ಸುನಾಮಿಗಳು ಪ್ರತಿ ಗಂಟೆಗೆ 600-800 ಕಿಲೋಮೀಟರುಗಳಷ್ಟು ದೂರಕ್ಕೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ಸಾಧಾರಣವಾಗಿ ರಿಕ್ಟರ್ ಮಾಪಕದಲ್ಲಿ 7.5 ಪ್ರಮಾಣಕ್ಕಿಂತ ಕಡಿಮೆ ಇರುವ ಭೂಕಂಪಗಳು ಸುನಾಮಿಗಳನ್ನು ಸೃಷ್ಟಿಸುವುದು ಅತಿ ಕಡಿಮೆ. 7.5ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಭೂಕಂಪಗಳಿಂದ ಅತಿ ವಿಧ್ವಂಸಕಾರಕ ಸುನಾಮಿಗಳು ಸಂಭವಿಸುತ್ತವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ