ಭೂಮಿ
ಭೂಮಿ
ಭೂಮಿ
ಸೂರ್ಯನಿಂದ 14,90,00,000ದೂರದಲ್ಲಿದೆ
ಭೂಮಿಯು
ತನ್ನ ಅಕ್ಷದ ಮೇಲೆ 23.5 ಡಿಗ್ರಿ ವಾಲಿಕೊಂಡಿದೆ ಇದನ್ನು ನತಿಕೋನ ಎನ್ನುವರು.
ಭೂಮಿಯು
ಕೆಲವೊಮ್ಮೆ ಸೂರ್ಯನಿಗೆ ಹತ್ತಿರವಾಗುತ್ತದೆ ಕೆಲವೊಮ್ಮೆ ದೂರವಾಗುತ್ತದೆ. ಹಾಗೆ ಭೂಮಿಯು
ಸೂರ್ಯನಿಗೆ ದೂರವಿದ್ದಾಗ ಆ ಸ್ಥಾನವನ್ನು ಅಪೀಲಿಯನ್ (ಉಚ್ಛಸ್ಥಾನ) ಎಂತಲೂ, ಹತ್ತಿರವಿದ್ದಾಗ
ಪೆರಿಲಿಯನ್ (ನೀಚಸ್ಥಾನ) ಎಂತಲೂ ಕರೆಯುವರು. ಅಪಿಲಿಯನ್ ದೂರ 15,20,98,000 ಕಿ.ಮೀಗಳು ಮತ್ತು ಪೆರಿಲಿಯನ್ ದೂರ 14,70,97,800 ಕಿ.ಮೀಗಳು
ಭೂಮಿಯ
ಒಟ್ಟು ವಿಸ್ತೀರ್ಣ 510 ದಶಲಕ್ಷ ಚ.ಕಿ.ಮೀಗಳು. ಸಮಭಾಜಕ ವೃತ್ತದ ಬಳಿ ಭೂಮಿಯ ಸುತ್ತಳತೆ 40.077
ಕಿ.ಮೀಗಳು, ಮತ್ತು ಧ್ರುವಪ್ರದೇಶಗಳನ್ನು ಬಳಸಿ ಸುತ್ತಳತೆ ಮಾಡಿದಾಗ 40,009
ಕಿ.ಮೀಗಳು ಇದೆ.
ಭೂಮಿಯ ವ್ಯಾಸ ಸಮಭಾಜಕ ವೃತ್ತದ ಬಳಿ 12,757 ಕಿ.ಮೀ ಹಾಗೂ ಒಂದು ಧ್ರುವದಿಂದ ಇನ್ನೊಂದು ಧ್ರುವಕ್ಕೆ ಇರುವ ದೂರ 12,714 ಕಿ.ಮೀಗಳು. ಭೂಮಿಯ ತ್ರಿಜ್ಯವು 6378 ಕಿಮೀ ಇದೆ.
ಅಕ್ಷಾಂಶ (latitude) ಮತ್ತು ರೇಖಾಂಶ (Longtitude)
ಅಕ್ಷ : ಒಂದು ಆಕಾಶಕಾಯದ ಉತ್ತರ
ದಕ್ಷಿಣವಾಗಿ ಸೇರುವ ರೇಖೆ
ಕಕ್ಷ : ಒಂದು ಆಕಾಶಕಾಯದ ಪೂರ್ವ ಪಶ್ಚಿ,ಮವಾಗಿ ಸೇರುವ ರೇಖೆ
ಭ್ರಮಣ : ಒಂದು ಆಕಾಶಕಾಯವು ತನ್ನ ಸುತ್ತ ತಾನೇ ತಿರುಗುವುದು
ಪರಿಭ್ರಮಣ : ಒಂದು ಆಕಾಶಕಾಯವು ಇನ್ನೊಂದು ಆಕಾಶಕಾಯದ ಸುತ್ತಲೂ ಸುತ್ತುವುದಾಗಿದೆ.
ಅಕ್ಷಾಂಶಗಳು
ಭೂಮಿಯ ಮೇಲೆ ಪೂರ್ವ ಪಶ್ಚಿಮಾಭಿಮುಖವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳನ್ನು ಅಕ್ಷಾಂಶಗಳೆನ್ನುವರು.
ಪ್ರಮುಖ ಅಕ್ಷಾಂಶಗಳು
0 ಡಿಗ್ರಿ ಅಕ್ಷಾಂಶ - ಸಮಭಾಜಕ ವೃತ್ತ
23.5 ಡಿಗ್ರಿ ಉತ್ತರ ಅಕ್ಷಾಂಶ - ಕರ್ಕಾಟಕ ಸಂಕ್ರಾಂತಿ
ವೃತ್ತ
23.5 ಡಿಗ್ರಿ ದಕ್ಷಿಣ ಅಕ್ಷಾಂಶ – ಮಕರ
ಸಂಕ್ರಾಂತಿ ವೃತ್ತ
66.5 ಡಿಗ್ರಿ ಉತ್ತರ ಅಕ್ಷಾಂಶ – ಆರ್ಕಟಿಕ್
ವೃತ್ತ
66.5 ಡಿಗ್ರಿ ದಕ್ಷಿಣ ಅಕ್ಷಾಂಶ – ಅಂಟಾರ್ಟಿಕ ವೃತ್ತ
ರೇಖಾಂಶಗಳು
ಭೂಮಿಯ ಮೇಲೆ ಉತ್ತರ ದಕ್ಷಿಣವಾಗಿ ಎಳೆಯಲಾದ ಕಾಲ್ಪನಿಕ ರೇಖೆಗಳನ್ನು ರೇಖಾಂಶಗಳೆನ್ನುವರು. ರೇಖಾಂಶಗಳು ಸಮಯದ ಸೂಚಕಗಳಾಗಿದ್ದು ಇವುಗಳನ್ನು ಮದ್ಯಾಹ್ನದ ರೇಖೆಗಳು ಎನ್ನುವರು. ಇವು ಒಟ್ಟು 360 ಇವೆ. ಇವುಗಳಲ್ಲಿ ಪ್ರಧಾನ ರೇಖಾಂಶ ಬ್ರಿಟನ್ ರಾಜಧಾನಿ ಲಂಡನ್ ನಗರದ ಮೇಲೆ ಹಾದುಹೋಗುತ್ತದೆ. ಇದನ್ನು ಗ್ರೀನ್‍ವಿಚ್ ರೇಖಾಂಶ ಎಂತಲೂ ಕರೆಯುವರು.
ಪ್ರೈಮ್ ಮೆರಿಡಿಯನ್ (ಪ್ರಧಾನ
ರೇಖಾಂಶ)
ರೇಖಾಂಶಗಳನ್ನು ದಿನ ನಿರ್ಧಾರಕ ರೇಖೆಗಳು, ಸಮಯ ನಿರ್ಧಾರಕ ರೇಖೆಗಳು ಎನ್ನುವರು. ಒಂದು ರೇಖಾಂಶವು
ಯಾವುದೇ ಎರಡು ಸ್ಥಳಗಳ ಮೇಲೆ ಹಾದುಹೋಗಿದ್ದು ಆ ಸ್ಥಳಗಳು ಎಷ್ಟೇ ದೂರವಿದ್ದರೂ ಆ ಎರಡೂ
ಸ್ಥಳಗಳಲ್ಲಿ ಸಮಯ ಒಂದೇ ಆಗಿರುತ್ತದೆ.
ಒಂದು
ರೇಖಾಂಶದಿಂದ ಇನ್ನೊಂದು ರೇಖಾಂಶದ ನಡುವಿನ
ಅಂತರ 4 ನಿಮಿಷಗಳಾಗಿರುತ್ತದೆ. ಅಂದರೆ ಒಬ್ಬ ವ್ಯಕ್ತಿ
ಒಂದಾದಮೇಲೊಂದರಂತೆ 15 ರೇಖಾಂಶಗಳನ್ನು ಕ್ರಮಿಸಲು ಒಂದು ಗಂಟೆ ಸಮಯ
ಹಿಡಿಯುತ್ತದೆ. ಒಬ್ಬ ವ್ಯಕ್ತಿಯು ಪಶ್ಚಿಮದಿಂದ ಪೂರ್ವಕ್ಕೆ ಚಲಿಸುವಾಗ ಒಂದು ರೇಖಾಂಶ
ಎದುರಿಗೆ ಬಂದಾಗ 4 ನಿಮಿಷಗಳನ್ನು ಸೇರಿಸಬೇಕು. ಅದೇ ವ್ಯಕ್ತಿ
ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಾಗ ಒಂದು ರೇಖಾಂಶ ಎದುರಿಗೆ ಬಂದಾಗ 4 ನಿಮಿಷಗಳನ್ನು
ಕಳೆಯಬೇಕು.
ಪ್ರಪಂಚದಲ್ಲಿ 24 ವೇಳಾವಲಯಗಳಿವೆ ಅತಿ ಹೆಚ್ಚು ವೇಳಾವಲಯಗಳನ್ನು ಹೊಂದಿರುವ ದೇಶಗಳೆಂದರೆ ಫ್ರಾನ್ಸ್ 12, ರಷ್ಯಾ ಮತ್ತು ಅಮೆರಿಕಾ 11, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್ಡಮ್‍ಗಳು 9, ಕೆನಡಾ 6, ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್‍ಗಳು 5 ವೇಳಾವಲಯಗಳನ್ನು ಹೊಂದಿವೆ.
ಭೂಮಿಯ ಚಲನೆ
ದೈನಂದಿನ ಚಲನೆ (ಭ್ರಮಣೆ)
ಭೂಮಿಯು ತನ್ನ ಸುತ್ತ ತಾನು ತಿರುಗುವುದನ್ನು ದೈನಂದಿನ ಚಲನೆ ಅಥವಾ ಭ್ರಮಣೆ ಎನ್ನುವರು. ಭೂಮಿಯ ದೈನಂದಿನ ಚಲನೆಯಿಂದ ಹಗಲು ರಾತ್ರಿಗಳುಂಟಾಗುತ್ತವೆ.
ವಾರ್ಷಿಕ ಚಲನೆ (ಪರಿಭ್ರಮಣೆ)
ಭೂಮಿಯು ಸೂರ್ಯನ ಸುತ್ತ ತಿರುಗುವುದನ್ನು ವಾರ್ಷಿಕ
ಚಲನೆ ಅಥವಾ ಪರಿಭ್ರಮಣೆ ಎನ್ನುವರು. ಭೂಮಿಯು ಸೂರ್ಯನ ಒಂದು ಸುತ್ತು ಹಾಕಲು 5.48X4 = 21.92 ಗಂಟೆಗಳು
(ಸರಾಸರಿ ಒಂದು ದಿನ). ಈ ಉಳಿದ ಒಂದು ದಿನವೇ ಅಧಿಕ ವರ್ಷದ ಸಮಯದಲ್ಲಿ ಫೆಬ್ರವರಿ 29 ಆಗಿ
ಸೇರ್ಪಡೆಯಾಗುತ್ತದೆ.
ವಾರ್ಷಿಕ ಚಲನೆಯ ಪರಿಣಾಮಗಳು
- ಹಗಲು
ರಾತ್ರಿಗಳಲ್ಲಿ ವ್ಯತ್ಯಾಸಗಳಾಗುತ್ತವೆ.
- ಭೂಮಿಯ
ಮೇಲೆ ಋತುಮಾನಗಳು ಸಂಭವಿಸುತ್ತವೆ. (ಬಿಸಿಲುಗಾಲ, ಚಳಿಗಾಲ, ಮಳೆಗಾಲ)
- ಮಧ್ಯರಾತ್ರಿಯಲ್ಲಿ ಸೂರ್ಯೋದಯವಾಗುತ್ತದೆ. (ನಾರ್ವೆ ದೇಶ)
- ವಿಷುವತ್ಸಂಕ್ರಾಂತಿ ಮತ್ತು ಆಯನ ಸಂಕ್ರಾಂತಿ ಸಂಭವಿಸುತ್ತವೆ.
ವಿಷುವತ್ಸಂಕ್ರಾಂತಿ ಎಂದರೆ ಸೆಪ್ಟೆಂಬರ್ 23 ಮತ್ತು
ಮಾರ್ಚ್ 21 ರಂದು ಭೂಮಿಯ ಸಮಭಾಜಕ ವೃತ್ತದ ಮೇಲೆ ಸೂರ್ಯನ ಕಿರಣಗಳು
ನೇರವಾಗಿ ಬೀಳುವ ಅವಧಿಯಾಗಿದೆ.
ಆಯನ ಸಂಕ್ರಾಂತಿ ಎಂಬುದು ಸೂರ್ಯನ
ಕಿರಣಗಳು ಸಮಭಾಜಕ ವೃತ್ತದ ಮೇಲೆ ಓರೆಯಾಗಿ ಬಿದ್ದು ಭೂಮಿಯ ಉತ್ತರ ಅಥವಾ ದಕ್ಷಿಣಾರ್ಧ ಗೋಳದ ಮೇಲೆ
ನೇರವಾಗಿ ಬೀಳುವ ಅವಧಿಯಾಗಿದೆ.
ಜೂನ್ 21
ರಂದು ಭೂಮಿಯ ಉತ್ತರಾರ್ಧ ಗೋಳದಲ್ಲಿ ದೀರ್ಘ ಹಗಲು ಇದ್ದು ದಕ್ಷಿಣಾರ್ಧ ಗೋಳದಲ್ಲಿ ದೀರ್ಘ ರಾತ್ರಿ
ಇರುತ್ತದೆ. ಹಾಗೆಯೇ ಡಿಸೆಂಬರ್ 22 ರಂದು ಭೂಮಿಯ ದಕ್ಷಿಣಾರ್ಧ ಗೋಳದಲ್ಲಿ ದೀರ್ಘ ಹಗಲು ಇದ್ದು
ಉತ್ತರಾರ್ಧ ಗೋಳದಲ್ಲಿ ದೀರ್ಘ ಕತ್ತಲು ಇರುತ್ತದೆ.
ಮಾರ್ಚ್ 21
ಮತ್ತು ಸೆಪ್ಟೆಂಬರ್ 23 ರಂದು ಸೂರ್ಯನ ಕಿರಣಗಳು ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುತ್ತವೆ. ಆ
ಸಮಯದಲ್ಲಿ ಹಗಲು ಮತ್ತು ರಾತ್ರಿ ಸಮನಾಗಿರುತ್ತವೆ.
ಸೂರ್ಯನ ಕಿರಣಗಳು ಮಾರ್ಚ್ 21 ಮೇಷ ಸಂಕ್ರಾಂತಿ, ಸೆಪ್ಟೆಂಬರ್ 23 ತುಲಾ ಸಂಕ್ರಾಂತಿ, ಜೂನ್ 21 ಕರ್ಕಾಟಕ ಸಂಕ್ರಾಂತಿ, ಡಿಸೆಂಬರ್ 22 ಮಕರ ಸಂಕ್ರಾಂತಿಯ ಮೇಲೆ ನೇರವಾಗಿ ಬೀಳುತ್ತವೆ.
ಪ್ರಮುಖ ರೇಖೆಗಳು
ಐಸೋಬಾತ್ : ಸಾಗರದ ತಳದಲ್ಲಿ ಒಂದೇ ಸಮತಟ್ಟಾದ
ತಳದಲ್ಲಿರುವ ಪ್ರದೇಶಗಳನ್ನು ಜೋಡಿಸುವ ರೇಖೆ.
ಐಸೋಬಾರ್ : ಒಂದೇ ರೀತಿಯ ಗಾಳಿಯ ಒತ್ತಡವಿರುವ
ಪ್ರದೇಶಗಳನ್ನು ಜೋಡಿಸುವ ರೇಖೆ.
ಐಸೊ
ಹೆಲಾಯಿನ್ಸ್ : ಒಂದೇ ರೀತಿಯ
ಸಮ ಪ್ರಮಾಣದ ಲವಣಾಂಶವನ್ನು ಹೊಂದಿರುವ ಸಾಗರದ ನೀರಿನ ಪ್ರದೇಶಗಳನ್ನು ಜೋಡಿಸುವ ರೇಖೆ
ಐಸೋಹೈಟ್ಸ್ : ಒಂದೇ ರೀತಿಯ ಪ್ರಮಾಣದ ಮಳೆಯನ್ನು
ಪಡೆಯುವ ಪ್ರದೇಶಗಳನ್ನು ಜೋಡಿಸುವ ರೇಖೆ
ಐಸೋ ಸಿಸ್ಮಲ್
ಲೈನ್ಸ್ : ಒಂದೇ ರೀತಿಯ
ಭೂಕಂಪನ ತೀವ್ರತೆಯುಳ್ಳ ಪ್ರದೇಶಗಳನ್ನು ಜೋಡಿಸುವ ರೇಖೆ
ಕಾಂಟೂರ್
ಲೈನ್ಸ್ : ಭೂಮಿಯ ಮೇಲೆ
ಸಮವಾಗಿ ಒಂದೇ ರೀತಿಯ ಎತ್ತರವುಳ್ಳ ಪ್ರದೇಶಗಳನ್ನು ಜೋಡಿಸುವ ರೇಖೆ






ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ