ಖನಿಜ ಸಂಪನ್ಮೂಲಗಳು - ಲೋಹ ಖನಿಜಗಳು 2
ಖನಿಜ ಸಂಪನ್ಮೂಲಗಳು
ಲೋಹ ಖನಿಜಗಳು - ಕಬ್ಬಿಣೇತರ ಖನಿಜಗಳು -
ತಾಮ್ರ
ಮೃದು ಕಂದು ಬಣ್ಣದ ಲೋಹವಾದ ತಾಮ್ರವು ಅಗ್ನಿ ಶಿಲೆ, ಪದರು ಶಿಲೆ ಮತ್ತು ರೂಪಾಂತರ ಶಿಲೆಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಸೀಸ ಖನಿಜಗಳೊಂದಿಗೆ ಮಿಶ್ರಣವಾಗಿರುತ್ತದೆ.
ಗಂಧಕದೊಂದಿಗೆ ಬೆರೆತಿರುವ ತಾಮ್ರದ ಅದಿರುಗಳು - ಚಾಲ್ಕೋಪೈರೇಟ್, ಬೋರೊನೈಟ್, ಕೋವಲೈಟ್ ಮತ್ತು ಚಾಲ್ಕೋಸೈಟ್.
ಕಾರ್ಬೊನೈಟ್ ಜೊತೆಗೆ ಬೆರೆತಿರುವ ತಾಮ್ರದ ಅದಿರುಗಳು - ಅಜುರೈಟ್, ಮೆಲಕೈಟ್
ಆಕ್ಸೈಡ್ ಜೊತೆಗೆ ಬೆರೆತಿರುವ ತಾಮ್ರದ ಅದಿರುಗಳು - ಕ್ಯುಪ್ರೈಟ್
ಎಲೆಕ್ಟ್ರೋಲಿಸಿಸ್ ವಿಧಾನವನ್ನು ಬಳಸಿ ತಾಮ್ರದ ಅದಿರಿನಿಂದ ತಾಮ್ರವನ್ನು ಬೇರ್ಪಡಿಸಲಾಗುವುದು.
90% ತಾಮ್ರದ ಜೊತೆ 10% ತವರವನ್ನು ಬೆರೆಸಿದಾಗ ಕಂಚು ಉತ್ಪತ್ತಿಯಾಗುತ್ತದೆ.
ಭಾರತದಲ್ಲಿ ತಾಮ್ರದ ಉತ್ಪಾದನೆ ಕಡಿಮೆಯಿದೆ, ಹಾಗಾಗಿ ಭಾರತವು ತಾಮ್ರವನ್ನು ಆಮದು ಮಾಡಿಕೊಳ್ಳುತ್ತದೆ.
ಮಧ್ಯ ಪ್ರದೇಶ (ಅಧಿಕ ತಾಮ್ರದ ನಿಕ್ಷೇಪ) - ಮಲಂಜಿಖಾಂಡ್
ಝಾರ್ಖಾಂಡ್ - ಸಿಂಗಭೂಮ್
ರಾಜಸ್ತಾನ - ಖೇತ್ರಿ
ಕರ್ನಾಟಕ - ಚಿತ್ರದುರ್ಗ, ಹಾಸನ, ಧಾರವಾಡ
ಪ್ರಪಂಚ
ಚಿಲಿ (ಅತ್ಯಧಿಕ ತಾಮ್ರದ ಅದಿರನ್ನು ಹೊಂದಿರುವ ದೇಶ) – ಚುರಿ ಕಮಾತ, ಬ್ರಾಡೆನ್, ಈಲ್ ಟೆನಿಯಂಟ್, ಪ್ರೊಟ್ರೆರಿಲ್ಲೋಸ್
ಚೀನಾ – ಯುನಾನ್, ಬೆರಿಯಾಂಗ್, ಶಾನ್ಸಿ
ಪೆರು – ಅಂಟಾಮಿನಾ, ಟಾಕಿಪಾಲಾ, ಸೆರ್ರೋ ವೆರ್ಡೆ, ಸುನ್ಜೋನ್, ಟಿಂಟಯಾ
ಆಸ್ಟ್ರೇಲಿಯಾ – ಒಲಿಂಪಿಕ್ ಡ್ಯಾಮ್, ಮೌಂಟ್ ಇಸಾ, ಕ್ವೀನ್ಸ್ ಲ್ಯಾಂಡ್
ತಾಮ್ರವು ಉತ್ತಮ ವಿದ್ಯುತ್ ವಾಹಕ ಮತ್ತು ಉಷ್ಣವಾಹಕವಾಗಿದೆ. ಉತ್ತಮ ತಂತು ಶೀಲತ್ವ ಗುಣ ಹೊಂದಿರುವ ತಾಮ್ರವನ್ನು ವಿದ್ಯುತ್ ಉಪಕರಣಗಳಲ್ಲಿ ಬಳಸಲಾಗುವುದು.
ತಾಮ್ರದ ಸಲ್ಫೇಟ್ ಅನ್ನು ಕ್ಯಾಲಿಕೋ ಮುದ್ರಣ ಮತ್ತು ಬಣ್ಣದ ತಯಾರಿಕೆಯಲ್ಲಿ ಬಳಸುವರು.
ಸತು (ಝಿಂಕ್)
ಸ್ಫಾಲರೈಟ್, ಝಿಂಕೈಟ್, ಫ್ರಾಂಕ್ಲಿನೈಟ್, ಕ್ಯಾಲಮೈನ್, ಸ್ಮಿತ್ ಸ್ಟೋನ್ ಇವು ಸತುವಿನ ಪ್ರಮುಖ ಅದಿರುಗಳಾಗಿವೆ. ಈ ಎಲ್ಲಾ ಅದಿರುಗಳಲ್ಲಿ ಸತುವಿನ ಪ್ರಮಾಣ 10% - 15% ಮಾತ್ರ ಇರುತ್ತದೆ.
ಪ್ರಪಂಚದ ಒಟ್ಟು ಸತುವಿನ ಪ್ರಮಾಣದಲ್ಲಿ 5.8% ಸತುವಿನ ನಿಕ್ಷೇಪ ಹೊಂದಿರುವ ಭಾರತವು 5ನೇ ಸ್ಥಾನದಲ್ಲಿದೆ.
ರಾಜಸ್ತಾನ ಅತಿ ಹೆಚ್ಚು ಸತುವಿನ ನಿಕ್ಷೇಪವುಳ್ಳ ರಾಜ್ಯವಾಗಿದ್ದು, ರಾಂಪುರ ಅಗುಚಾ 90% ಸತುವಿನ ನಿಕ್ಷೇಪ ಒಳಗೊಂಡಿದೆ.
ಆಂಧ್ರಪ್ರದೇಶ, ಮಧ್ಯಪ್ರದೇಶ, ಬಿಹಾರಗಳು ನಂತರದ ಸ್ಥಾನದಲ್ಲಿದ್ದು ಈ ರಾಜ್ಯಗಳಲ್ಲಿ 10% ಹಂಚಿಕೆಯಾಗಿದೆ.
ಪ್ರಪಂಚ
ಚೀನಾ (ಅತಿ ಹೆಚ್ಚಿನ ಪ್ರಮಾಣದ ಸತುವಿನ ನಿಕ್ಷೇಪ) – ಯುನಾನ್, ಗಾನ್ಸು, ಕ್ಸಿನ್ ಹುವಾ
ಪೆರು – ಅಂಕ್ಯಾಶ್, ಕೂಸ್ಕೊ, ಇಕಾ, ಲಿಮಾ, ಪುಕಾಲ್ಪಾಮ ಯಾಂಕಿ
ಯು.ಎಸ್.ಎ – ಅಲಾಸ್ಕಾ, ಇದಾಹೊ, ಮಿಸೌರಿ, ವಾಷಿಂಗ್ಟನ್, ಟೆನೆಸ್ಸಿ
ಆಸ್ಟ್ರೇಲಿಯಾ – ರೋಸ್ ಬರಿ, ಎಲುರಾ, ಸ್ಕಡಲ್ಸ್, ಗೋಸಾನ್
ಕಬ್ಬಿಣದಂತಹ ಲೋಹಗಳು ಆಮ್ಲದೊಡನೆ ವರ್ತಿಸಿ ತುಕ್ಕು ಹಿಡಿಯದಂತೆ ಮಾಡಲು ಸತುವನ್ನು ಆ ಲೋಹಗಳ ಮೇಲೆ ಲೇಪನ ಮಾಡುತ್ತಾರೆ. ಆಟೋಮೊಬೈಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಗಳ ದಿನನಿತ್ಯದ ಅನೇಕ ಕೆಲಸಗಳಲ್ಲಿ, ರೋಗ ನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆ ಹೆಚ್ಚಿಸಲು ಔಷಧಗಳಲ್ಲಿ ಸತುವಿನ ಉಪಯೋಗ ಮಾಡುತ್ತಾರೆ.
ಅಲ್ಯೂಮಿನಿಯಂ
ಭೂಮಿಯ ಮೇಲ್ಪದರ 80% ಅಲ್ಯೂಮಿನಿಯಂ ನಿಂದ ಕೂಡಿದೆ. ಈ ಅಲ್ಯೂಮಿನಿಯಂ ಲೋಹದ ಪ್ರಮುಖ ಅದಿರು ಬಾಕ್ಸೈಟ್. ಬಾಕ್ಸೈಟ್ ಅದಿರನ್ನು ಕರಗಿಸಿ ಅಲ್ಯೂಮಿನಾವನ್ನು ತಯಾರಿಸುವರು ನಂತರ ಅಲ್ಯೂಮಿನಾವನ್ನು ಅಲ್ಯೂಮಿನಿಯಂ ಆಗಿ ಪರಿವರ್ತಿಸಲಾಗುವುದು.
ಅಲ್ಯೂಮಿನಿಯಂ ಲೋಹವು ಉತ್ತಮ ವಿದ್ಯುತ್ ವಾಹಕ ಮತ್ತು ತುಕ್ಕು ನಿರೋಧಕವಾದ ಲೋಹವಾಗಿದೆ. ಇದನ್ನು 20ನೇ ಶತಮಾನದ ಅಚ್ಚರಿಯ ಲೋಹ ಎನ್ನುವರು.
ಕೃತಕ ಉಪಗ್ರಹಗಳು, ವಿದ್ಯುತ್ ಉಪಕರಣಗಳು, ಗೃಹಬಳಕೆಯ ವಸ್ತುಗಳು ಮತ್ತು ಲೋಹದ ಕಾರ್ಖಾನೆಗಳಲ್ಲಿ ಅಲ್ಯೂಮಿನಿಯಂ ಅನ್ನು ಬಳಸುತ್ತಾರೆ. ಭಾರತದಲ್ಲಿ ಈ ಲೋಹವನ್ನು ಬಡವರ ಬೆಳ್ಳಿ ಎನ್ನುವರು
ಒಡಿಶಾ (ಅತಿ ಹೆಚ್ಚು ಬಾಕ್ಸೈಟ್ ನಿಕ್ಷೇಪ) - ಸುಂದರಗಡ, ಕಾಲಹಂದಿ
ಗುಜರಾತ್ - ಖೈರಾ, ಬರೂಚ್, ಭಾವನಗರ್, ಜಾಮ್ ನಗರ್, ಸೂರತ್, ಆಮ್ರೇಲಿ
ಝಾರ್ಖಾಂಡ್ - ಲೋಹರ್ ದಗ, ಗುಮ್ಲಾ, ರಾಂಚಿ, ಶಹಾಬಾದ್, ಮೊಂಗೈರ್
ಮಹಾರಾಷ್ಟ್ರ – ಕೊಲ್ಲಾಪುರ, ಠಾಣಾ, ಕೊಲಾಬ, ರತ್ನಗಿರಿ, ಸತಾರ
ಕರ್ನಾಟಕ - ಬೆಳಗಾವಿ
ತಮಿಳುನಾಡು - ಸೇಲಂ, ಮಧುರೈ
ಆಂಧ್ರಪ್ರದೇಶ - ವಿಶಾಖ ಪಟ್ಟಣ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ
ಉತ್ತರ ಪ್ರದೇಶ - ಭಂಡಾ, ಪ್ರಯಾಗರಾಜ್
ಪ್ರಪಂಚ
ಆಸ್ಟ್ರೇಲಿಯಾ (ಅತಿ ಹೆಚ್ಚು ಬಾಕ್ಸೈಟ್ ಉತ್ಪಾದಿಸುವ ದೇಶ) – ವೈಪಾ, ಗೋವ್, ಡಾರ್ಲಿಂಗ್ ಪರ್ವತ ಶ್ರೇಣಿ
ಗಿನಿ (ಪ್ರಪಂಚದಲ್ಲಿ ಅಧಿಕ ಬಾಕ್ಸೈಟ್ ನಿಕ್ಷೇಪ ಹೊಂದಿದೆ)
ಚೀನಾ - ಜೆಕ್ವಾನ್, ಕೂಚೊ
ಬ್ರೆಜಿಲ್ – ಒರಿಕ್ಸಿಮಿನಾ
ತವರ
ಕ್ಯಾಸಿಟ್ ರೈಟ್ ತವರದ ಪ್ರಮುಖ ಅದಿರಾಗಿದೆ.
ಸಂಸ್ಕರಿಸಿದ ಆಹಾರ ಮತ್ತು ಹಣ್ಣುಗಳನ್ನು ಸಂಗ್ರಹಿಸಿಡಲು ತವರದ ಡಬ್ಬಿಗಳನ್ನು ಉಪಯೋಗಿಸುವರು.
ಭಾರತದಲ್ಲಿ ಛತ್ತೀಸ್ ಘರ್ ಮಾತ್ರವೇ ತವರದ ನಿಕ್ಷೇಪ ಹೊಂದಿರುವ ರಾಜ್ಯವಾಗಿದೆ.
ಪ್ರಪಂಚ
ಚೀನಾ (ಅತ್ಯಧಿಕ ತವರದ ಉತ್ಪಾದನೆ) – ಯುನಾನ್, ಹುನಾನ್, ಕ್ವಾಂಗ್ಸಿ
ಇಂಡೋನೇಷಿಯಾ - ಸುಮಾತ್ರಾ ದ್ವೀಪಗಳು
ಆಫ್ರಿಕಾದ ನೈಜೀರಿಯಾ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಂಬ್ವೆಗಳಲ್ಲಿ ಸಹ ತವರದ ಹೇರಳ ನಿಕ್ಷೇಪವಿದೆ.
ಚಿನ್ನ
ಚಿನ್ನವು ಶುದ್ಧವಾಗಿ ಎಳೆಗಳ ರೂಪದಲ್ಲಿ ಕ್ವಾರ್ಟ್ಜ್ ಶಿಲೆಗಳಲ್ಲಿ ದೊರೆಯುತ್ತದೆ. ಅರ್ಸೆನೋಪಿರೈಟ್ ಮತ್ತು ಪೈರೈಟ್ ಗಳು ಚಿನ್ನದ ಪ್ರಮುಖ ಅದಿರುಗಳಾಗಿವೆ.
ಚಿನ್ನದ ಅದಿರು ದೊರೆಯುವ ಸ್ಥಳಗಳಲ್ಲಿ ಕಬ್ಬಿಣ ಸಲ್ಫೇಡ್ ನಿಂದಾದ ಲೋಹದ ಅದಿರು ಸಹ ಕಂಡುಬರುತ್ತದೆ. ನೋಡಲು ಚಿನ್ನದಂತೆ ಕಾಣುವ ಇದನ್ನು ಮೂರ್ಖರ ಚಿನ್ನ ಎನ್ನುವರು.
ಆಭರಣ ಮಾಡಲು 22 ಕ್ಯಾರಟ್ ಚಿನ್ನದ ಜೊತೆಗೆ 2 ಕ್ಯಾರಟ್ ತಾಮ್ರವನ್ನು ಬಳಸುತ್ತಾರೆ. ಚಿನ್ನ ಬಿಳಿಯ ಬಣ್ಣದಲ್ಲಿ ಕಾಣುತ್ತಿದ್ದರೆ ಚಿನ್ನದ ಜೊತೆಗೆ ಬೆಳ್ಳಿ, ನಿಕಲ್ ಅಥವಾ ಪಲೇಡಿಯಂ ಅನ್ನು ಸೇರಿಸಿ ಆಭರಣ ತಯಾರಿಸುತ್ತಾರೆ.
ಕರ್ನಾಟಕವು ಭಾರತದಲ್ಲಿಯೇ ಅತೀ ಹೆಚ್ಚು ಚಿನ್ನ ಉತ್ಪಾದಿಸುವ ರಾಜ್ಯವಾಗಿದ್ದು. ಸು 70% ಚಿನ್ನವನ್ನು ಉತ್ಪಾದಿಸುತ್ತದೆ.
ಕರ್ನಾಟಕ - ಹಟ್ಟಿ (ರಾಯಚೂರು), ಕಪ್ಪತ ಗುಡ್ಡ (ಗದಗ), ಅಜ್ಜನ ಹಳ್ಳಿ (ತುಮಕೂರು)
ಆಂಧ್ರಪ್ರದೇಶ – ಅನಂತಪುರ
ಪ್ರಪಂಚ
ದಕ್ಷಿಣ ಆಫ್ರಿಕಾ – ವಿಟ್ ವಾಟರ್ಸ್ ರ್ಯಾಂಡ್ (ಪ್ರಪಂಚದಲ್ಲಿಯೇ ಅತ್ಯಧಿಕ ಚಿನ್ನದ ನಿಕ್ಷೇಪ ಹೊಂದಿರುವ ಪ್ರದೇಶ), ಬುಕ್ಸ್ ಬರ್ಗ್, ಜೆಮಿಸ್ಟನ್, ಜೊಹಾನ್ಸ್ ಬರ್ಗ್, ಕುಗೆರ್ಸ್ ಡ್ರಾಪ್, ಬೂನೋನಿ
ಚೀನಾ (ಅತ್ಯಧಿಕ ಚಿನ್ನ ಉತ್ಪಾದಿಸುವ ದೇಶ) – ಯಾಂಗ್ಟ್ಸೆ, ಟಿಯಾನ್ ಶಾನ್, ಆಲ್ಟಾಯ್ ಶಾನ್, ಕ್ಸಿನ್ ಜಿಯಾಂಗ್
ಆಸ್ಟ್ರೇಲಿಯಾ – ಕ್ವೀನ್ಸ್ ಲ್ಯಾಂಡ್, ವಿಕ್ಟೋರಿಯಾ
ರಷ್ಯಾ – ಅಮೂರ್, ಇರ್ಕುಟ್ಸ್ಕ್, ಖಬರ್ಹೋಸ್ಕ್, ಕ್ರಾನ್ಸೋಯಾಸ್ರ್ಕ್, ಮ್ಯಾಗಡಾನ್
ಬೆಳ್ಳಿ
ಬೆಳ್ಳಿಯು ಸಾಮಾನ್ಯವಾಗಿ ಸೀಸ, ಚಿನ್ನ, ಸತು ಮತ್ತು ತಾಮ್ರಗಳ ಜೊತೆಯಲ್ಲಿ ದೊರೆಯುತ್ತದೆ. ಅರ್ಜೆಂಟೈಟ್ ಬೆಳ್ಳಿಯ ಪ್ರಮುಖ ಅದಿರಾಗಿದೆ.
ರಾಜಸ್ತಾನ (ಅತಿ ಹೆಚ್ಚು ಬೆಳ್ಳಿಯ ನಿಕ್ಷೇಪ) – ಚಾಂದೇರಿಯಾ, ದೇಬಾರಿ.
ಕರ್ನಾಟಕ – ಕೆ.ಜಿ.ಎಫ್, ಹಟ್ಟಿ
ಆಂಧ್ರಪ್ರದೇಶ – ಗುಂಟೂರು, ಕಡಪಾ, ಕರ್ನೂಲ್
ಝಾರ್ಖಂಡ್ - ಸಿಂಗಭೂಮ್, ಧನಬಾದ್
ಪ್ರಪಂಚ
ಮೆಕ್ಸಿಕೊ - ಪೆನಾಸ್ಕಿಟೋ, ಪಿಟಾರಿಲಾ, ಟಾಕ್ಸೊ ದೆ ಅಲಾರ್ಕಾನ್
ಪೆರು – ಅಂಟಾಮಿನಾ
ಚೀನಾ - ಯಿಂಗ್, ಶಿಝಿಶಾನ್
ಬೆಳ್ಳಿಯನ್ನು ಜರೀ ಸೀರೆಗಳು, ಔಷಧ, ಛಾಯಾಗ್ರಹಣ, ಎಲೆಕ್ಟ್ರಾನಿಕ್ಸ್ ವಸ್ತುಗಳಲ್ಲಿ ಬಳಸುತ್ತಾರೆ
ಬೆಳ್ಳಿಯು ನೈಟ್ರಿಕ್ ಆಮ್ಲದೊಂದಿಗೆ ಸೇರಿ ಬೆಳ್ಳಿಯ ನೈಟ್ರೇಟ್ (ಸಿಲ್ವರ್ ನೈಟ್ರೇಟ್) ಆಗುತ್ತದೆ. ಇದನ್ನು ಆಂಟಿ ಸೆಪ್ಟಿಕ್ (ನಂಜು ನಿರೋಧಕ) ತಯಾರಿಕೆಯಲ್ಲಿ ಬಳಸುತ್ತಾರೆ.
ಪ್ಲಾಟಿನಂ
ಪಿರ್ಹೋಟೈಟ್, ಚಾಲ್-ಕಾಪಿರೈಟ್, ಪೆಂಟ್ಲಾಂಡೈಟ್ ಮತ್ತು ಕ್ಯೂಬನೈಟ್ ಗಳು ಪ್ಲಾಟಿನಂ ನ ಪ್ರಮುಖ ಅದಿರುಗಳಾಗಿವೆ.
ಒಡಿಶಾ (ಅತಿ ಹೆಚ್ಚಿನ ಪ್ಲಾಟಿನಂ ನಿಕ್ಷೇಪ ಹೊಂದಿರುವ ರಾಜ್ಯ) - ಬೌಲಾ, ನೌಸಾಹಿ
ಕರ್ನಾಟಕ - ದಾವಣಗೆರೆ, ಉತ್ತರ ಕನ್ನಡ
ತಮಿಳುನಾಡು - ಸಿತ್ತಲಾಂಪುಡಿ , ಮೆಟ್ಟುಪ್ಪಾಲಾಯಂ
ಪ್ರಪಂಚ
ದಕ್ಷಿಣ ಆಫ್ರಿಕಾ (ಅತಿ ಹೆಚ್ಚಿನ ಪ್ಲಾಟಿನಂ ಉತ್ಪಾದಿಸುವ ದೇಶ) – ಮಾರ್ಕಿಯಾನ
ರಷ್ಯಾ – ಯೂರಲ್ ಪರ್ವತ ಶ್ರೇಣಿ
ಝಿಂಬಾಂಬ್ವೆ - ದ ಗ್ರೇಟ್ ಡೈಕ್, ಮಿಮೋಸಾ, ಝಿಂಪ್ಲಾಟ್ಸ್, ಉನ್ಕಿ
ಕೆನಡಾ – ಸ್ಯಾಡ್ಬರಿ ಬೇಸಿನ್
ಪ್ಲಾಟಿನಂ ಅನ್ನು ಡೀಸೆಲ್ ಇಂಧನ ವಾಹನಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ, ಆಭರಣಗಳನ್ನು ತಯಾರಿಸಲು, ಪೆಟ್ರೊ ಕೆಮಿಕಲ್ಸ್ (ಪೆಟ್ರೋಲಿಯಂ ರಾಸಾಯನಿಕಗಳು) ಮುಂತಾದವುಗಳಲ್ಲಿ ಬಳಸುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ