ಭಾರತದ ವಾಯುಗುಣ ಮತ್ತು ಮಳೆ

  ಭಾರತದ ವಾಯುಗುಣ ಮತ್ತು ಮಳೆ

ವಾಯುಗುಣದ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ ವಾಯುಗುಣಶಾಸ್ತ್ರ (ಕ್ಲೈಮಟಾಲಜಿ) ಎನ್ನುವರು.

ಭಾರತವು ಭೌಗೋಳಿಕವಾಗಿ ಉಷ್ಣವಲಯ ಹಾಗೂ  ಸಮಶೀತೋಷ್ಣ ವಲಯಗಳೆರಡರಲ್ಲೂ ಹಂಚಿಕೆಯಾಗಿದೆ. ಭಾರತದ್ದು ಉಷ್ಣವಲಯದ ಮಾನ್ಸೂನ್ ರೀತಿಯ ವಾಯುಗುಣವಾಗಿದೆ. ಮಾನ್ಸೂನ್ ಪದವು ಅರೇಬಿಕ್ ನ ಮೌಸಮ್ ಪದದಿಂದ ಬಂದಿದ್ದು, ಮೌಸಮ್ ಎಂದರೆ ನಿಯತಕಾಲಿಕ/ಋತುಕಾಲಿಕ ಎಂದರ್ಥ.

ಈ ರೀತಿಯ ವಾಯುಗುಣದಲ್ಲಿ ಮಾರುತಗಳು ವರ್ಷದ ವಿವಿಧ ಕಾಲಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಿಂದ ಬೀಸುತ್ತವೆ.

ಭಾರತದಲ್ಲಿ ಮಳೆಯು ಹಲವು ಹವಾಮಾನ ವೈಪರೀತ್ಯಗಳಿಂದ ಅಕಾಲಿಕವಾಗಿರುವುದರಿಂದ ಭಾರತದ ವ್ಯವಸಾಯವನ್ನು ಮಾನ್ಸೂನ್ ಜೊತೆಯಲ್ಲಿ ಆಡುವ ಜೂಜಾಟ ಎನ್ನುವರು.

ಸಮತಲವಾಯುಧಾರೆಗಳು (ಜೆಟ್‍ಸ್ಟ್ರೀಂ) ಭಾರತದ ಮಾನ್ಸೂನ್ ಮಾರುತಗಳ ಮೇಲೆ ಪ್ರಭಾವವನ್ನು ಬೀರುತ್ತವೆ. ಈ ಸಮತಲವಾಯುಧಾರೆಗಳ ಬಗ್ಗೆ ಮೊದಲ ಬಾರಿಗೆ ತಿಳಿಸಿದವರು ರಾಸ್‍ಬಿ. ಇವುಗಳಲ್ಲಿ ಉಷ್ಣವಲಯದ ಪಶ್ಚಿಮ ಸಮತಲ ವಾಯುಧಾರೆಗಳು ಮತ್ತು ಉಷ್ಣವಲಯದ ಪೂರ್ವ ಸಮತಲ ವಾಯುಧಾರೆಗಳು ಎಂಬ ಎರಡು ವಿಧಗಳಿವೆ.

ನೈಋತ್ಯ ಮಾನ್ಸೂನ್ ಮಾರುತಗಳನ್ನು ತಡೆದು ಉತ್ತರ ಭಾರತದಲ್ಲಿ ಮಳೆಯಾಗುವಲ್ಲಿ ಮತ್ತು ಮದ್ಯ ಏಷ್ಯಾದಿಂದ ಬೀಸುವ ಶೀತ ಮಾರುತಗಳನ್ನು ತಡೆಯುವಲ್ಲಿ ಉತ್ತರದಲ್ಲಿರುವ ಹಿಮಾಲಯಗಳು ಪ್ರಮುಖ ಕಾರಣವಾಗಿವೆ.

ಆವರ್ತ ಮಾರುತಗಳು ಮೆಡಿಟರೇನಿಯನ್ ಪ್ರದೇಶದಿಂದ ಮಶ್ಚಿಮ ಏಷ್ಯಾದ ಮೂಲಕ ಸಾಗಿಬಂದು ಪಶ್ಚಿಮ ಭಾರತಕ್ಕೆ ಮಳೆಯನ್ನು ತರುತ್ತದೆ. ಸಾಮಾನ್ಯವಾಗಿ ಈ  ಮಳೆಯು ಮೇ ಮತ್ತು ಅಕ್ಟೋಬರ್-ನವೆಂಬರ್‍ನಲ್ಲಿ ಕಂಡುಬರುತ್ತವೆ.

ಭಾರತದ ಸರಾಸರಿ ಮಳೆಯ ಪ್ರಮಾಣವು 118 ಸೆಂ.ಮೀ ಆಗಿದೆ.

ಭಾರತದಲ್ಲಿ ಋತುಮಾನಗಳು

ಬೇಸಿಗೆಕಾಲ (ಮಾರ್ಚ್  ಮೇ)

ಈ ಅವಧಿಯನ್ನು ಹೆಚ್ಚು ಉಷ್ಣಾವಧಿ ಮತ್ತು ಮಾರುತಗಳ ಪೂರ್ವಾವಧಿ ಎಂದೆನ್ನುವರು

ಬೇಸಿಗೆಯ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಉತ್ತರಾರ್ಧ ಗೋಳದ ಮೇಲೆ ಬೀಳುವುದರಿಂದ ಭಾರತದಲ್ಲಿ ಉಷ್ಣಾಂಶ ಅಧಿಕವಾಗಿರುತ್ತದೆ. ಆದರೆ ಈ ಉಷ್ಣಾಂಶ ಸಮುದ್ರ ತೀರದ ಪ್ರದೇಶಗಳಲ್ಲಿಹಿಮ ಪ್ರದೇಶಗಳಲ್ಲಿ ಕಡಿಮೆಯಿದ್ದು ಸಮುದ್ರ ತೀರದಿಂದ ಮತ್ತು ಹಿಮಪ್ರದೇಶಗಳಿಂದ ದೂರವಿರುವ ಪ್ರದೇಶಗಳಲ್ಲಿ ಹೆಚ್ಚಾಗಿರುತ್ತದೆ.

ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶ ರಾಜಸ್ತಾನದ ಗಂಗಾನಗರ ( 520 ಸೆಂ) ಆಗಿದೆ.

ಭೂಮಿಯ ಉತ್ತರಾರ್ಧ ಗೋಳವು ಸೂರ್ಯನ ಕಡೆಗೆ ವಾಲಿರುತ್ತದಾದ್ದರಿಂದ ಉತ್ತರಾರ್ಧ ಗೋಳದಲ್ಲಿರುವ ಭಾರತದಲ್ಲೂ ಸಹ ದೀರ್ಘವಾದ ಹಗಲು ಹಾಗೂ ಕಡಿಮೆ ಅವಧಿಯ ರಾತ್ರಿಯಿರುತ್ತದೆ.

ಈ ಅವಧಿಯಲ್ಲಿ ಭಾರತದಲ್ಲಿ ಬೀಸುವ ಗಾಳಿಯನ್ನು ಪಶ್ಚಿಮ ಬಂಗಾಳದಲ್ಲಿ ಕಾಲ್ ಬೈಸಾಕಿ ಎಂತಲೂರಾಜಸ್ಥಾನದಲ್ಲಿ ಲೂ ಎಂತಲೂಉತ್ತರ ಪ್ರದೇಶದಲ್ಲಿ ಅಂಧೀಸ್ ಎಂತಲೂ ಕರೆಯುತ್ತಾರೆ.

ಈ ಸಮಯದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬೀಳುವ ಮಳೆಯನ್ನು ಪ್ರಚಲನ/ಪರಿಸರಣ ಮಳೆ ಎನ್ನುವರು. ಈ ಮಳೆಯನ್ನು ಕರ್ನಾಟಕದಲ್ಲಿ ಕಾಫಿ ಹೂಮಳೆ ಎಂದರೆ, ಕೇರಳದಲ್ಲಿ ಮಾವಿನ ಕೊಯ್ಲು ಎನ್ನುವರು. ಭಾರತವು ಒಟ್ಟಾರೆಯಾಗಿ ಈ ಸಚಿದರ್ಭದಲ್ಲಿ 10% ಮಳೆಯನ್ನು ಪಡೆಯುತ್ತದೆ.

ಮಳೆಗಾಲ (ಜೂನ್ - ನವೆಂಬರ್)

ಭಾರತದಲ್ಲಿ ಮಳೆಗಾಲದ ಅವಧಿ 100 ದಿನಗಳು ಇರುತ್ತದೆ. ಇದರಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳು ಮತ್ತು ಈಶಾನ್ಯ ಮಾನ್ಸೂನ್ ಮಾರುತಗಳು ಎಂಬೆರಡು ವಿಧಗಳಿವೆ

ನೈಋತ್ಯ ಮಾನ್ಸೂನ್ ಮಾರುತಗಳು/ಮುಂಗಾರು ಮಳೆ (ಜೂನ್ - ಸೆಪ್ಟೆಂಬರ್)

ಸಮಭಾಜಕ ವೃತ್ತದಿಂದ ಬೀಸುವ ಆಗ್ನೇಯ ವಾಣಿಜ್ಯ ಮಾರುತಗಳು ಸಮಭಾಜಕ ವೃತ್ತದ ಬಳಿ ಬಂದ ಕೂಡಲೇ ನೈಋತ್ಯ ಮಾನ್ಸೂನ್ ಮಾರುತಗಳಾಗಿ ಭಾರತದ ನೈಋತ್ಯ ಬಾಗದಿಂದ ಈಶಾನ್ಯದ ಕಡೆಗೆ ಬೀಸುತ್ತವೆ. ಹೀಗೆ ಮಾರುತಗಳು ದಿಕ್ಕನ್ನು ಬದಲಿಸುವುದನ್ನು ಫೆರಾಲ್ ನಿಯಮ ಎನ್ನುವರು. ಈ ಸಮಯದಲ್ಲಿ ಭಾರತವು ಸು 75% ಮಳೆಯನ್ನು ಪಡೆಯುತ್ತದೆ. ಇದ ಭಾರತದಲ್ಲಿ ಅತಿಹೆಚ್ಚು ಮಳೆ ಬೀಳುವ ಸಂದರ್ಭವಾಗಿದೆ.

ಅರಬ್ಬಿ ಸಮುದ್ರದಿಂದ ಬೀಸುವ ಮಾರುತಗಳನ್ನು ಮಳೆಯ ಮಾರುತಗಳನ್ನು ಅರಬ್ಬಿ ಸಮುದ್ರ ಶಾಖೆ ಎನ್ನುವರುಈ ಮಳೆಯ ಮಾರುತಗಳು ಪಶ್ಚಿಮ ಘಟ್ಟಗಳಿಂದ ತಡೆಯಲ್ಪಟ್ಟು ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗದಲ್ಲೆಲ್ಲಾ ಮಳೆಯನ್ನು ಸುರಿಸುತ್ತವೆ. ಅರಬ್ಬಿ ಸಮುದ್ರ ಶಾಖೆಯ ಮಾರುತಗಳನ್ನು ದಕ್ಷಿಣ ಭಾರತದಲ್ಲಿರುವ ಪಶ್ಚಿಮ ಘಟ್ಟಗಳು ತಡೆಯುವುದರಿಂದ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ.

ಪಶ್ಚಿಮ ಘಟ್ಟಗಳ ಪೂರ್ವದ ಬದಿಯ ಮಳೆಯ ನೆರಳಿನ ಪ್ರದೇಶಗಳಿಗೆ ಮಳೆ ಬಾರದೆ ಅವು ಮಳೆಯ ನೆರಳಿನ ಪ್ರದೇಶಗಳಾಗಿವೆ. ಮೋಡಗಳು ಪರ್ವತಕ್ಕೆ ತಾಗಿ ಒಂದು ಕಡೆ ಮಾತ್ರ ಮಳೆಯಾಗಿ ಇನ್ನೊಂದು ಬದಿ ಮಳೆ ಬಾರದೆ ಮಳೆ ನೆರಳಿನ ಪ್ರದೇಶವಾಗಿ ಉಳಿದುಬಿಡುತ್ತದೆ

ಬಂಗಾಳಕೊಲ್ಲಿಯಿಂದ ಬೀಸುವ ಮಳೆಯ ಮಾರುತಗಳನ್ನು ಬಂಗಾಳಕೊಲ್ಲಿ ಶಾಖೆ ಎನ್ನುವರು. ಇವು ನೇರವಾಗಿ ಬಂಗಾಳಕೊಲ್ಲಿಯ ಮೂಲಕ ಹಾದು ಹೋಗಿ ಈಶಾನ್ಯ ಭಾರತಬಾಂಗ್ಲಾದೇಶ ಹಾಗೂ ಬರ್ಮಾ ದೇಶಗಳಿಗೆ ಮಳೆಯನ್ನು ಸುರಿಸುತ್ತವೆ. ಈ ಶಾಖೆಯು ಭಾರತದ ಪಶ್ಚಿಮ ಭಾಗಕ್ಕಿಂತಲೂ ಪೂರ್ವಭಾಗದ ಕಡೆಗೆ ಹೆಚ್ಚು ಮಳೆಯನ್ನು ಸುರಿಸುತ್ತದೆ.

ನೈಋತ್ಯ ಮಾನ್ಸೂನ್ ಮಾರುತಗಳ ಸಮಯದಲ್ಲಿ ತಮಿಳುನಾಡು ಒಂದನ್ನು ಹೊರತುಪಡಿಸಿ ಇಡೀ ಭಾರತದಲ್ಲೆಲ್ಲಾ ಮಳೆಯಾಗುತ್ತದೆ.

ಈ ಸಮಯದಲ್ಲಿ ಬೆಳೆಯುವ ಬೆಳೆಗಳನ್ನು ಖಾರಿಫ್ ಬೆಳೆಗಳೆನ್ನುವರು. ಭತ್ತ ಮುಖ್ಯ ಖಾರಿಫ್ ಬೆಳೆಯಾಗಿದ್ದು ಜೋಳಮೆಕ್ಕೆಜೋಳಕಬ್ಬುಹತ್ತಿ ಇತರ ಪ್ರಮುಖ ಖಾರಿಫ್ ಬೆಳೆಗಳಾಗಿವೆ.

ಈಶಾನ್ಯ ಮಾನ್ಸೂನ್ ಮಾರುತಗಳು/ಹಿಂಗಾರು ಮಳೆ (ಅಕ್ಟೋಬರ್ - ನವೆಂಬರ್)

ಭೂಮಿಯ ದಕ್ಷಿಣಾರ್ಧ ಗೋಳವು ಸೂರ್ಯನ ಕಡೆಗೆ ಇನ್ನೂ ವಾಲುತ್ತಿರುವ ಈ ಸಂದರ್ಭದಲ್ಲಿ ಈಶಾನ್ಯ ಮಾರುತಗಳು ಭಾರತದ ಈಶಾನ್ಯ ಭಾಗದಿಂದ ನೈಋತ್ಯದ ಕಡೆಗೆ ಬೀಸುತ್ತವೆ. ಭೂಮಿಯ ಉತ್ತರಾರ್ಧ ಗೋಳದಲ್ಲಿರುವ ಭಾರತದಲ್ಲಿ ಚಳಿಗಾಲದ ಮುನ್ಸೂಚನೆ ಶುರುವಾಗಿರುತ್ತದೆ.

ದಕ್ಷಿಣ ಭಾರತದ ಪೂರ್ವ ಕರಾವಳಿ ತೀರದಲ್ಲಿರುವ ಒಡಿಶಾಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಗೆ ಚಂಡಮಾರುತಗಳ ಹಾವಳಿ ಉಂಟಾಗಿ ಅಪಾರ ಹಾನಿಯಾಗುತ್ತದೆ.

ಈ ಅವಧಿಯಲ್ಲಿ ಭಾರತದಲ್ಲಿ 13% ಮಳೆಯಾಗುತ್ತದೆ. ಮತ್ತು ಈ ಅವಧಿಯಲ್ಲಿ ತಮಿಳುನಾಡು ಅತಿ ಹೆಚ್ಚು ಮಳೆಯನ್ನು ಪಡೆಯುತ್ತದೆ.

ಈ ಸಮಯದಲ್ಲಿ ಬೆಳೆಯುವ ಬೆಳೆಗಳನ್ನು ರಬಿ ಬೆಳೆಗಳೆನ್ನುವರು. ಗೋಧಿ ಪ್ರಮುಖ ರಬಿ ಬೆಳೆಯಾಗಿದ್ದು ಬಾರ್ಲಿಬಟಾಣಿಸಾಸಿವೆ ಇತರ ಪ್ರಮುಖ ರಬಿ ಬೆಳೆಗಳಾಗಿವೆ.

ಚಳಿಗಾಲ

ಈ ಅವಧಿಯಲ್ಲಿ ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ದಕ್ಷಿಣಾರ್ಧ ಗೋಳದ ಮೇಲೆ ಬೀಳುವುದರಿಂದಅಲ್ಲಿ ದೀರ್ಘ ಹಗಲು ಮತ್ತು ಅಧಿಕ ಬಿಸಿಲು ಇರುತ್ತದೆ. ಅದಕ್ಕೆ ವಿರುದ್ಧವಾಗಿ ಉತ್ತರಾರ್ಧ ಗೋಳದಲ್ಲಿ ಹೆಚ್ಚು ಚಳಿ ಮತ್ತು ಕಡಿಮೆ ಹಗಲು ಇರುತ್ತದೆ.

ಭಾರತವು ಉತ್ತರಾರ್ಧ ಗೋಳದಲ್ಲಿ ಇರುವುದರಿಂದ ಇಲ್ಲಿಯೂ ಸಹ ಚಳಿ ಮತ್ತು ಕಡಿಮೆ ಹಗಲು ಇರುತ್ತದೆ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಸ್ವಲ್ಪ ಚಳಿ ಹೆಚ್ಚಾಗಿಯೂ ದಕ್ಷಿಣ ಭಾರತದಲ್ಲಿ ಸ್ವಲ್ಪ ಹಿತವಾದ ವಾತಾವರಣವೂ ಇರುತ್ತದೆ. ಈ ಸಮಯದಲ್ಲಿ ಭಾರತವು ಪಡೆಯುವ ಮಳೆಯು 2% ಇರುತ್ತದೆ.

ಪ್ರದೇಶವಾರು ಮಳೆಯ ಹಂಚಿಕೆ

ಕಡಿಮೆ ಮಳೆಯ ಪ್ರದೇಶಗಳು

50 ಸೆಂ.ಮೀ ಕಿಂತ ಕಡಿಮೆ ಮಳೆ ಬೀಳುವ ಪ್ರದೇಶಗಳಾಗಿವೆ. ರಾಜಸ್ಥಾನದ ಥಾರ್ ಮರುಭೂಮಿ, ಪಂಜಾಬ್, ಹರಿಯಾಣ, ಗುಜರಾತಿನ ಕಛ್, ಮಹಾರಾಷ್ಟ್ರದ ಪೂರ್ವಭಾಗ, ಕರ್ನಾಟಕದ ಒಳನಾಡು ಇಂತಹ ಪ್ರದೇಶಗಳಾಗಿವೆ

ರಾಜಸ್ಥಾನದ ಜೈಸಲ್ಮೇರ್ ನ ರೊಹ್ಲಿ ಪ್ರದೇಶವು ಭಾರತದಲ್ಲೇ ಅತಿಕಡಿಮೆ ಮಳೆಬೀಳುವ ಪ್ರದೇಶವಾಗಿದೆ. ಇಲ್ಲಿನ ವಾರ್ಷಿಕ ಸರಾಸರಿ ಮಳೆ 8.3 ಸೆಂ.ಮೀ

ಸಾಧಾರಣ ಮಳೆಯ ಪ್ರದೇಶಗಳು

50 - 250 ಸೆಂ.ಮೀ ಮಳೆ ಬೀಳುವ ಪ್ರದೇಶಗಳಾಗಿವೆ. ಕರಾವಳಿ ಪ್ರದೇಶಈಶಾನ್ಯ ಭಾರತದ ಕೆಲವು ಪ್ರದೇಶಗಳಲ್ಲದೇ ಭಾರತದಲ್ಲಿ ಅತಿ ಹೆಚ್ಚು ಭಾಗದಲ್ಲಿ ಈ ತೆರನಾದ ಮಳೆ ಬೀಳುತ್ತದೆ.

ಅಧಿಕ ಮಳೆಯ ಪ್ರದೇಶಗಳು

250 ಸೆಂ.ಮೀಕಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಾಗಿವೆ. ಭಾರತದ ಪಶ್ಚಿಮ ಘಟ್ಟಗಳುಈಶಾನ್ಯ ಘಟ್ಟಗಳುಪೂರ್ವ ರಾಜ್ಯಗಳುಹಿಮಾಲಯದ ತಪ್ಪಲು ಪ್ರದೇಶಅಂಡಮಾನ್ ನಿಕೋಬಾರ್ ದ್ವೀಪಗಳು ಈ ಭಾಗಗಳಲ್ಲಿ ಇಂತಹ ಮಳೆಯನ್ನು ಕಾಣುತ್ತೇವೆ.

ಮೇಘಾಲಯದ ಮೌಸಿನ್‍ರಾಮ್ ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಇಲ್ಲಿನ ಮಳೆಯ ಪ್ರಮಾಣ ಸು. 1141 ಸೆಂ.ಮೀ

ಕಾಮೆಂಟ್‌ಗಳು