ಕರ್ನಾಟಕ ಸಸ್ಯವರ್ಗ (ಅರಣ್ಯ)

 ಕರ್ನಾಟಕ ಸಸ್ಯವರ್ಗ (ಅರಣ್ಯ)

ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಕ್ರಮವಾಗಿ ಅತಿ ಹೆಚ್ಚಿನ ಕಾಡನ್ನು ಒಳಗೊಂಡಿದ್ದರೆ ವಿಜಯಪುರ ಅತಿ ಕಡಿಮೆ ಕಾಡನ್ನು ಹೊಂದಿರುವ ಜಿಲ್ಲೆಯಾಗಿದೆ.

ನಿತ್ಯ ಹರಿದ್ವರ್ಣ ಕಾಡುಗಳು

ವಾರ್ಷಿಕ ಮಳೆ 250 ಸೆಂ.ಮೀ ಕಿಂತಲೂ ಅಧಿಕವಾಗಿರುತ್ತದೆ. ಅಧಿಕ ಉಷ್ಣಾಂಶವಿರುವ ಮತ್ತು ಮಳೆ ಬೀಳುವ ಪ್ರದೇಶಗಳಲ್ಲಿ ಈ ಕಾಡುಗಳು ಬೆಳೆಯುತ್ತವೆ.

ಬೀಟೆತೇಗಮತ್ತಿನಂದಿದೂಪಹೊನ್ನಹೆಬ್ಬಲಸು ಇವು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಪ್ರಮುಖ ಮರಗಳಾಗಿವೆ.

ಲವಂಗಏಲಕ್ಕಿದಾಲ್ಚಿನ್ನಿ ಮುಂತಾದ ಸಾಂಬಾರ ಪದಾರ್ಥಗಳನ್ನು ಮತ್ತು ಔಷಧಿ ಸಸ್ಯಗಳನ್ನು ಬೆಳೆಯುವರು

ನಿತ್ಯ ಹರಿದ್ವರ್ಣ ಕಾಡುಗಳು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಬಗೆಯ ಕಾಡುಗಳನ್ನು ಕಾಣುತ್ತೇವೆ.

ಎಲೆ ಉದುರುವ ಅರಣ್ಯಗಳು

60  120 ಸೆಂ.ಮೀ  ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುವ ಈ ಕಾಡುಗಳು ಬೇಸಿಗೆ ಕಾಲದಲ್ಲಿ ತೇವಾಂಶದ ಕೊರತೆಯಿಂದ ಈ ಕಾಡುಗಳಲ್ಲಿನ ಮರಗಳು ಎಲೆಗಳನ್ನು ಉದುರಿಸುತ್ತವೆ.

ತೇಗಹೊನ್ನೆಮತ್ತಿಬೇವುಮಾವುಹಲಸುಆಲಶ್ರೀಗಂಧಬಿದಿರು ಇಲ್ಲಿ ಕಂಡುಬರುವ ಪ್ರಮುಖ ಮರಗಳಾಗಿವೆ.

ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ.

ಮಿಶ್ರಬಗೆಯ ಕಾಡುಗಳು

ಮಿಶ್ರಬಗೆಯ ಕಾಡುಗಳು 120 – 150 ಸೆಂ.ಮೀ ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುತ್ತವೆ.

ತೇಗ, ಹೊನ್ನೆ, ಮತ್ತಿ, ನಂದಿ, ದಿಂಡಗ, ಶ್ರೀಗಂಧ, ಹಲಸು, ಬಿದಿರು

ಈ ಬಗೆಯ ಕಾಡುಗಳು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರಿನ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ.

ಹುಲ್ಲುಗಾವಲು ಮತ್ತು ಕುರುಚಲು ಗಿಡಗಳು

ಈ ಪ್ರದೇಶದಲ್ಲಿ ಮಳೆಯ ಪ್ರಮಾಣ 60 ಸೆಂ.ಮೀ ಕಿಂತ ಕಡಿಮೆ ಇರುತ್ತದೆ.

ಕಳ್ಳಿಕತ್ತಾಳಿಕರಿಜಾಲಿಬೇಲಈಚಲಹಂಚಿಕುಂತಿ ಹುಲ್ಲುಆಲಮಾವುಬೇವು ಈ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಸಸ್ಯಗಳಾಗಿವೆ.

ಬೀದರ್ಕಲುಬುರ್ಗಿಯಾದಗಿರಿರಾಯಚೂರುಕೊಪ್ಪಳವಿಜಯಪುರಬಳ್ಳಾರಿಚಿತ್ರದುರ್ಗ ಜಿಲ್ಲೆಗಳಲ್ಲಿ ಈ ತರಹದ ಸಸ್ಯವರ್ಗವನ್ನು ಕಾಣುತ್ತೇವೆ.

ತಗ್ಗಾದ ಕಣಿವೆಗಳು ಝರಿತೊರೆಗಳಿಂದ ಕೂಡಿದ ಭಾಗಗಳಲ್ಲಿ ಮತ್ತು ಪರ್ವತ ಪ್ರದೇಶಗಳಲ್ಲಿ ಶೊಲಾ ಕಾಡುಗಳು ಕಂಡುಬರುತ್ತವೆ

ಕಾಮೆಂಟ್‌ಗಳು