ಕರ್ನಾಟಕ ಭೂಗೋಳ
ಕರ್ನಾಟಕ
ಕರುನಾಡು ಎಂದರೆ ಕಪ್ಪು ಮಣ್ಣಿನ ನಾಡು, ಎತ್ತರದ ಪ್ರದೇಶ ಎಂದು ಅರ್ಥ. ಕರ್ನಾಟಕ ರಾಜ್ಯ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ 1500 ಅಡಿ ಎತ್ತರವಿದೆ.
ಕರ್ನಾಟಕದ ವಾಯವ್ಯದಲ್ಲಿ ಗೋವಾ, ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶ, ಆಗ್ನೇಯದಲ್ಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ ರಾಜ್ಯಗಳಿವೆ.
ಕರ್ನಾಟಕದ ಭೌಗೋಳಿಕ ಪ್ರದೇಶಗಳು
1. ಕರಾವಳಿ
ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶವಾಗಿದೆ. ಕರ್ನಾಟಕದ ಕರಾವಳಿ ಪ್ರದೇಶದ ಉದ್ದ 320 ಕಿ.ಮೀ ಮತ್ತು ಅಗಲ 12-64 ಕಿ.ಮೀ ಅಗಲವಾಗಿದ್ದು ಸಮುದ್ರಮಟ್ಟದಿಂದ ಸು 200 ಮೀ ಎತ್ತರದಲ್ಲಿದೆ. ಕರ್ನಾಟಕದ ಕರಾವಳಿ ತೀರವನ್ನು ಕೆನರಾ ತೀರ ಎನ್ನುವರು.
ಕರ್ನಾಟಕದ ಬಂದರುಗಳು
ಉತ್ತರ ಕನ್ನಡ : ಭಟ್ಕಳ, ಮಲ್ಪೆ, ಕಾರವಾರ, ಕುಮಟ, ಬೇಲೆಕೆರೆ, ಹೊನ್ನಾವರ, ತದಡಿ, ಬಿಣಗಾ, ಮಾಜಾಳಿ, ಮಂಕಿ, ಅಂಕೋಲಾ, ಮುರುಡೇಶ್ವರ.
ದಕ್ಷಿಣ ಕನ್ನಡ : ಪಣಂಬೂರು, ನವ ಮಂಗಳೂರು. ನವಮಂಗಳೂರು ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು.
ಉಡುಪಿ : ಗಂಗೊಳ್ಳಿ, ಕುಂದಾಪುರ, ಮಲ್ಪೆ, ಶಿರಾಲಿ, ಬೈಂದೂರು, ಹಂಗಾರಕಟ್ಟೆ
ಕರ್ನಾಟಕದ ದ್ವೀಪಗಳು
ಉತ್ತರ ಕನ್ನಡ : ಬಸವರಾಜ ದುರ್ಗ, ನೇತ್ರಾಣಿ (ಪೀಜನ್ ಐಲ್ಯಾಂಡ್), ಅಂಜು, ದೇವಗಡ, ಕಾಂಜಿ ಗುಡ್ಡ
ದಕ್ಷಿಣ ಕನ್ನಡ : ಪಾವೂರು ಉಲಿಯಾ,
ಮಂಡ್ಯ : ಶ್ರೀರಂಗಪಟ್ಟಣ
ಉಡುಪಿ : ಸೇಂಟ್ ಮೆರಿಸ್ (ಕೊಕೊನೆಟ್) ಇದನ್ನು ಸ್ಥಳೀಯವಾಗಿ ತೋನ್ಸೆಪಾರ್ ಎನ್ನುವರು.
ಕೊಡಗು : ನಿಸರ್ಗಧಾಮ
2. ಪಶ್ಚಿಮ ಘಟ್ಟಗಳು
ಪಶ್ಚಿಮ ಘಟ್ಟಗಳು ಕರಾವಳಿ ಪ್ರದೇಶ ಮತ್ತು ಮೈದಾನ ಪ್ರದೇಶಗಳ ಮಧ್ಯ ಬರುತ್ತವೆ. ಇವು ಸಮುದ್ರ ಮಟ್ಟದಿಂದ ಸು 900-1500 ಮೀ. ಎತ್ತರದಲ್ಲಿದ್ದು ಸು. 650 ಕಿ.ಮೀ ಉದ್ದ ಮತ್ತು 50-76 ಕಿ.ಮೀ ಅಗಲವಾಗಿವೆ. ಪಶ್ಚಿಮ ಘಟ್ಟಗಳು ಕರ್ನಾಟಕದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ.
ಪಶ್ಚಿಮ ಘಟ್ಟವನ್ನು 2012 ರಲ್ಲಿ ಜೀವ ವೈವಿಧ್ಯತಾ ವಲಯ ಎಂದು ಗುರ್ತಿಸಿ ಸಂರಕ್ಷಿಸಲಾಗುತ್ತಿದೆ.
ಈ ಘಟ್ಟಗಳಲ್ಲಿ ಬಸಾಲ್ಟ್ ಶಿಲೆ ಸಾಮಾನ್ಯವಾಗಿ ಅತ್ಯಂತ ಹೆಚ್ಚಾಗಿ ಕಂಡುಬರುತ್ತದೆ. ಉಳಿದಂತೆ ಗ್ರಾನೈಟ್, ಖೊಂಡಾಲೈಟ್, ಲೆಪ್ಟಿನೈಟ್, ಚಾರ್ನೋಕೈಟ್ ಮುಂತಾದ ಶಿಲಾಪ್ರಕಾರಗಳು ಸಹ ಇವೆ
ಕರ್ನಾಟಕದಲ್ಲಿನ ಪಶ್ಚಿಮ ಘಟ್ಟಗಳ ಮುಖ್ಯ ಶಿಖರಗಳು
ಚಿಕ್ಕಮಗಳೂರು : ಮುಳ್ಳಯ್ಯನಗಿರಿ(1950 ಮೀ), ಕೆಮ್ಮಣ್ಣುಗುಂಡಿ, ಕುದುರೆಮುಖ (1894 ಮೀ). ಬಾಬಾ ಬುಡನ್ ಗಿರಿ (ಚಂದ್ರದ್ರೋಣ ಪರ್ವತ)
ಚಾಮರಾಜನಗರ : ಬಿಳಿಗಿರಿರಂಗನ ಬೆಟ್ಟ (1800 ಮೀ), ಹಿಮವದ್ ಗೋಪಾಲಸ್ವಾಮಿ ಬೆಟ್ಟ (1450 ಮೀ)
ದಕ್ಷಿಣ ಕನ್ನಡ : ಕುಮಾರ ಪರ್ವತ (1712 ಮೀ)
ಕೊಡಗು : ಪುಷ್ಪಗಿರಿ (1712 ಮೀ), ಬ್ರಹ್ಮಗಿರಿ (1608 ಮೀ)
ಶಿವಮೊಗ್ಗ : ಕೊಡಚಾದ್ರಿ (1343 ಮೀ)
ಪ್ರಮುಖ ಘಟ್ಟಗಳು/ಘಾಟ್‍ಗಳು
ಚಾರ್ಮುಡಿ ಘಾಟ್ – ಮಂಗಳೂರು = ಚಿಕ್ಕಮಗಳೂರು
ಶಿರಾಡಿ ಘಾಟ್ - ಸಕಲೇಶಪುರ = ಹಾಸನ
ಆಗುಂಬೆ ಘಾಟ್ - ಶಿವಮೊಗ್ಗ = ಉಡುಪಿ
ಹುಲಿಕಲ್ ಘಾಟ್ - ಶಿವಮೊಗ್ಗ = ಕುಂದಾಪುರ
ಪ್ರಮುಖ ಜಲಪಾತಗಳು
ಕೊಡಗು : ಅಬ್ಬಿ ಜಲಪಾತ, ಮಲ್ಲಳ್ಳಿ ಜಲಪಾತ, ಇರುಪ್ಪು ಜಲಪಾತ, ಚೇಲಾವರ ಜಲಪಾತ, ಮಾದಂಡಬ್ಬಿ ಜಲಪಾತ
ಚಾಮರಾಜನಗರ : ಭರಚುಕ್ಕಿ ಜಲಪಾತ, ಗಗನಚುಕ್ಕಿ ಜಲಪಾತ (ಶಿವನ ಸಮುದ್ರ)
ಮೈಸೂರು : ಚುಂಚನಕಟ್ಟೆ ಜಲಪಾತ
ಚಿಕ್ಕಮಗಳೂರು : ಹನುಮಾನ್ ಗುಂಡಿ (ಸೂತನಬ್ಬಿ ಜಲಪಾತ), ಹೆಬ್ಬೆ ಜಲಪಾತ, ಸಿರಿಮನೆ ಜಲಪಾತ, ಕಲ್ಹತ್ತಗಿರಿ ಜಲಪಾತ, ಮಾಣಿಕ್ಯಧಾರ ಜಲಪಾತ, ಶಾಂತಿ ಜಲಪಾತ, ಮಘೇಬೈಲ್ ಜಲಪಾತ, ಕಸವೆ ಜಲಪಾತ, ಹೊನ್ನಮ್ಮನಹಳ್ಳ ಜಲಪಾತ
ಉತ್ತರ ಕನ್ನಡ : ಸಾತೋಡಿ ಜಲಪಾತ, ಉಂಚಳ್ಳಿ ಜಲಪಾತ (ಲುಷಿಂಗ್ಟನ್ ಜಲಪಾತ ಅಥವಾ ಕೆಪ್ಪ ಜೋಗ), ಮಾಗೋಡು ಜಲಪಾತ, ಬೆಣ್ಣೆ ಹೊಳೆ ಜಲಪಾತ, ವಾಟೆ ಹಳ್ಳ ಜಲಪಾತ, ಬುರುಡೆ ಜಲಪಾತ, ವಿಭೂತಿ ಜಲಪಾತ, ಶಿವಗಂಗೆ ಜಲಪಾತ, ಲಾಲ್ಗುಳಿ ಜಲಪಾತ, ಅಣಶಿ ಜಲಪಾತ, ಅಪ್ಸರಕೊಂಡ, ಜೋಗ ಜಲಪಾತ
ದಕ್ಷಿಣ ಕನ್ನಡ : ಆಲೇಖಾನ್ ಜಲಪಾತ, ಲೈನ್ಕಜೆ ಜಲಪಾತ, ಚಾರ್ಮಾಡಿ ಜಲಪಾತ, ಶಿರಾಡಿ ಜಲಪಾತ
ಉಡುಪಿ : ಕೋಸಳ್ಳಿ ಜಲಪಾತ, ಜೋಮ್ಲು ತೀರ್ಥ
ಶಿವಮೊಗ್ಗ : ಜೋಗ ಜಲಪಾತ, ಹಿಡ್ಲುಮನೆ/ಹಿತ್ಲುಮನೆ ಜಲಪಾತ, ಕೂಡ್ಲು ತೀರ್ಥ ಜಲಪಾತ, ದಬ್ಬೆ ಜಲಪಾತ, ಬರ್ಕಣ ಜಲಪಾತ, ಅಚಕನ್ಯ ಜಲಪಾತ, ಕುಂಚಿಕಲ್ ಜಲಪಾತ, ಬಾಳೆಬರೆ ಜಲಪಾತ
ಬೆಳಗಾವಿ : ಗೋಕಾಕ್ ಜಲಪಾತ, ಗೊಡಚಿನಮಲ್ಕಿ ಜಲಪಾತ
ಬೆಂಗಳೂರು : ಮುತ್ಯಾಲ ಮಡುವು ಜಲಪಾತ (ಪರ್ಲ್ ವ್ಯಾಲಿ ಜಲಪಾತ)
ರಾಮನಗರ : ಚುಂಚಿ ಜಲಪಾತ
ಕೊಪ್ಪಳ : ಕಪಿಲ ಜಲಪಾತ
ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಚಿಕ್ಕಮಗಳೂರು, ಅತಿ ಹೆಚ್ಚು ಕಿತ್ತಳೆ ಬೆಳೆಯುವ ಜಿಲ್ಲೆ ಕೊಡಗು ಹಾಗಾಗಿ ಕೊಡಗನ್ನು ಕಿತ್ತಳೆ ನಾಡು ಎನ್ನುವರು, ಅದು ಮಾತ್ರವಲ್ಲ ಕೊಡಗು ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿಯಾಗಿದೆ.
ಮೈದಾನ ಪ್ರದೇಶ
ಮೈದಾನ ಪ್ರದೇಶವು ಕರ್ನಾಟಕದ ಒಳನಾಡು ಆಗಿದ್ದು ಮಳೆ ಕಡಿಮೆ ಬೀಳುವ ಪ್ರದೇಶವಾಗಿದೆ. ಮೈದಾನ ಪ್ರದೇಶಗಳಲ್ಲಿ ಎರಡು ವಿಧಗಳಿವೆ.
1. ಉತ್ತರದ ಮೈದಾನ
ಸಮುದ್ರ ಮಟ್ಟದಿಂದ ಸು 365-610 ಮೀ ಎತ್ತರದಲ್ಲಿದೆ. ಇಲ್ಲಿ ಹೆಚ್ಚಿನ ಭಾಗ ಕಪ್ಪುಮಣ್ಣಿನಿಂದ ಕೂಡಿದೆ. ಇಲ್ಲಿನ ಮಣ್ಣು ಕಪ್ಪಾಗಿರಲು ಕಾರಣ ಬಸಾಲ್ಟ್ ಶಿಲೆ.
ಬೀದರ್, ಕಲುಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಬೆಳಗಾವಿಯ ಪೂರ್ವದ ಭಾಗ ಇವು ಉತ್ತರದ ಮೈದಾನದಲ್ಲಿ ಕಂಡುಬರುವ ಪ್ರದೇಶಗಳಾಗಿವೆ.
2. ದಕ್ಷಿಣದ ಮೈದಾನ
ಸಮುದ್ರ ಮಟ್ಟದಿಂದ ಸು 900-975 ಮೀ ಎತ್ತರದಲ್ಲಿದೆ. ಇಲ್ಲಿ ಹೆಚ್ಚಿನ ಭಾಗ ಕೆಂಪುಮಣ್ಣಿನಿಂದ ಕೂಡಿದೆ.
ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ ದಕ್ಷಿಣದ ಮೈದಾನದಲ್ಲಿ ಕಂಡುಬರುವ ಪ್ರದೇಶಗಳಾಗಿವೆ.
ತುಮಕೂರಿನ ಮಧುಗಿರಿಯಲ್ಲಿ ಕಂಡುಬರುವ ಏಕಶಿಲಾ ಬೆಟ್ಟವು ಏಷ್ಯಾದಲ್ಲಿಯೇ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ