ವಾಣಿಜ್ಯ ಬೆಳೆಗಳು

 ವಾಣಿಜ್ಯ ಬೆಳೆಗಳು

ಹತ್ತಿ

ಬಿಳಿ ಬಂಗಾರವೆಂದು ಕರೆಯಲ್ಪಡುವ ಹತ್ತಿಯ ವೈಜ್ಞಾನಿಕ ಹೆಸರು ಗಾಸಿಪ್ಪಿಯಂ.

ಇದು ಉಷ್ಣವಲಯದ ಬೆಳೆಯಾಗಿದ್ದು 20-25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 50-100 ಸೆಂ.ಮೀ ವಾರ್ಷಿಕ ಮಳೆ ಬೇಕಾಗುತ್ತದೆ.

ಹತ್ತಿಯನ್ನು ಖಾರಿಫ್ (ಮುಂಗಾರು) ಮತ್ತು ರಬಿ (ಹಿಂಗಾರು) ಬೆಳೆಯಾಗಿಯೂ ಬೆಳೆಯುವರು

ಹತ್ತಿ ಬಳೆಯಲು ಜೇಡಿಮಿಶ್ರಿತ ಕಪ್ಪುಮಣ್ಣು ಸೂಕ್ತವಾಗಿದ್ದು ಮೆಕ್ಕಲು ಮಣ್ಣುನಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತದೆ.

ಹತ್ತಿ ಸಂಶೋಧನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ನಾಗ್ಪುರ ಮತ್ತು ತಮಿಳುನಾಡಿನ ಕೋಯಂಬತ್ತೂರಿನಲ್ಲಿ ಕೆಂದ್ರೀಯ ಹತ್ತಿ ಸಂಶೋಧನಾ ಕೇಂದ್ರಗಳಿವೆ.

ಹತ್ತಿಯ ವಿಧಗಳು

ಉದ್ದ ಎಳೆಯ ಹತ್ತಿಯನ್ನು ಈಜಿಪ್ಟ್ವೆಸ್ಟ್ ಇಂಡೀಸ್ಪೆರು ದೇಶಗಳಲ್ಲಿ ಬೆಳೆಯುತ್ತಾರೆ.

ಮಧ್ಯಮ ಎಳೆಯ ಹತ್ತಿಯನ್ನು ಭಾರತ, ರಷ್ಯಾ, ಪಾಕಿಸ್ತಾನ, ಆಫ್ರಿಕಾಗಳಲ್ಲಿ ಬೆಳೆಯುವರು.

ಗಿಡ್ಡ ಎಳೆಯ ಹತ್ತಿಯನ್ನು ಬ್ರೆಜಿಲ್, ಭಾರತ, ಚೀನಾ ದೇಶಗಳಲ್ಲಿ ಬೆಳೆಯುವರು.

ಹತ್ತಿ ಉತ್ಪಾದಿಸುವ ಪ್ರಮುಖ ರಾಜ್ಯಗಳು : ಗುಜರಾತ್, ಮಹಾರಾಷ್ಟ್ರ, ಆಂದ್ರಪ್ರದೇಶ, ಪಂಜಾಬ್, ಹರ್ಯಾಣ, ರಾಜಸ್ತಾನ

ಪ್ರಮುಖ ಹತ್ತಿ ಬೆಳೆಯುವ ದೇಶಗಳು : ಚೀನಾಅಮೆರಿಕಾ ಸಂಯುಕ್ತ ಸಂಸ್ಥಾನಭಾರತಪಾಕಿಸ್ತಾನ

ಪ್ರಮುಖ ರಫ್ತು ದೇಶಗಳು : ಅಮೆರಿಕಾ ಸಂಯುಕ್ತ ಸಂಸ್ಥಾನ, ಉಜ್ಬೆಕಿಸ್ತಾನ, ಗ್ರೀಕ್, ಈಜಿಪ್ಟ್, ಆಸ್ಟ್ರೇಲಿಯಾ

ಸೆಣಬು

ಸೆಣಬಿನ ವೈಜ್ಞಾನಿಕ ಹೆಸರು ಕಾರ್ಕೋರಸ್ ಕ್ಯಾಪ್ಸುಲರೀಸ್

ಸೆಣಬು ಉಷ್ಣವಲಯದ ಬೆಳೆಯಾಗಿದ್ದು ಈ ಬೆಳೆಗೆ 25-35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 200 ಸೆಂ.ಮೀ ಗಿಂತಲೂ ಹೆಚ್ಚಿನ ಮಳೆಯ ಅವಶ್ಯಕತೆಯಿದೆ.

ಮೆಕ್ಕಲು ಮಣ್ಣು ಮತ್ತು ಮರಳು ಮಿಶ್ರಿತ ಮಣ್ಣು ಇದಕ್ಕೆ ಯೋಗ್ಯವಾದುದು

ಪ.ಬಂಗಾಳದ ಬ್ಯಾರಕ್ಪುರದಲ್ಲಿ ಸೆಣಬು ಮತ್ತು ನಾರು ಪದಾರ್ಥಗಳ ಕೇಂದ್ರೀಯ ಸಂಶೋಧನಾಲಯವನ್ನು ಸ್ಥಾಪಿಸಲಾಗಿದೆ.

ಪ್ರಮುಖ ಸೆಣಬು ಬೆಳೆಯುವ ರಾಜ್ಯಗಳು : ಪ.ಬಂಗಾಳ, ಅಸ್ಸಾಂ, ಉತ್ತರ ಪ್ರದೇಶ, ಬಿಹಾರ, ಒಡಿಶಾ

ಪ್ರಮುಖ ಸೆಣಬು ಬೆಳೆಯುವ ದೇಶಗಳು : ಭಾರತ, ಬಾಂಗ್ಲಾದೇಶ, ಬರ್ಮಾ, ವಿಯೆಟ್ನಾಂ

ಪ್ರಮುಖ ರಫ್ತು ದೇಶಗಳು : ಬರ್ಮಾ, ವಿಯೆಟ್ನಾಂ, ಬೆಲ್ಜಿಯಂ, ಅಮೆರಿಕಾ ಸಂಯುಕ್ತ ಸಂಸ್ಥಾನ

ಕಬ್ಬು

ಕಬ್ಬಿನ ವೈಜ್ಞಾನಿಕ ಹೆಸರು ಸಖ್ಯಾರಂ ಅಫಿಸನೇರಂ.

ಕಬ್ಬು ಉಷ್ಣವಲಯದಲ್ಲಿ ಬೆಳೆಯುವ ಬೆಳೆಯಾಗಿದ್ದು ಇದಕ್ಕೆ 20-28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 150 ಸೆಂ.ಮೀ ಗಿಂತಲೂ ಅಧಿಕ ಮಳೆಯ ಅವಶ್ಯಕತೆಯಿದೆ. ಇದೊಂದು ಏಕಬೆಳೆಯಾಗಿದೆ.

ಕಬ್ಬು ಬೆಳೆಯಲು ಹೆಚ್ಚು ಫಲವತ್ತಾದ ಮತ್ತು ಸುಣ್ಣ, ಲವಣಾಂಶಗಳಿಂದ ಕೂಡಿದ ಮಣ್ಣು ಅಗತ್ಯವಾಗಿದೆ.

ಸಕ್ಕರೆಬೆಲ್ಲಮಧ್ಯವನ್ನು ತಯಾರಿಸಲು ಕಬ್ಬಿನ ರಸವನ್ನು ಬಳಸುವರು ಮತ್ತು ಕಬ್ಬಿನ ಸಿಪ್ಪೆಯನ್ನು ಕಾಗದ ತಯಾರಿಸಲು ಬಳಸುವರು

ಕ್ಯೂಬಾ ದೇಶವನ್ನು ಜಗತ್ತಿನ ಸಕ್ಕರೆ ಬಟ್ಟಲು ಎಂದು ಕರೆಯುವರು

ಉತ್ತರ ಪ್ರದೇಶದ ಲಖ್ನೋದಲ್ಲಿ ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆಯಿದೆ. ಲಕ್ನೋವನ್ನು ಭಾರತದ ಕ್ಯೂಬಾ 

ಪ್ರಮುಖ ಕಬ್ಬು ಬೆಳೆಯುವ ರಾಜ್ಯಗಳು : ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು

ಪ್ರಮುಖ ಕಬ್ಬು ಬೆಳೆಯುವ ದೇಶಗಳು : ಬ್ರೆಜಿಲ್, ಭಾರತ, ಥಾಯ್ಲ್ಯಾಂಡ್, ಮೆಕ್ಸಿಕೊ, ಚೀನಾ

ಪ್ರಮುಖ ರಫ್ತು ದೇಶಗಳು : ಬ್ರೆಜಿಲ್, ಥಾಯ್ಲ್ಯಾಂಡ್, ಭಾರತ, ಫ್ರಾನ್ಸ್

ರಬ್ಬರ್

ಡಚ್ಚರು ಮೊದಲ ಬಾರಿಗೆ ಇಂಡೋನೇಷ್ಯಾದಲ್ಲಿ ರಬ್ಬರ್ ಬೆಳೆಯುವುದನ್ನು ಪರಿಚಯಿಸಿದರು

ಹಿವಿಯಾ ಬ್ರೆಸಿಲಯೆನ್ಸಿಸ್ ಎಂಬುದು ರಬ್ಬರ್ ನ ವೈಜ್ಞಾನಿಕ ಹೆಸರು.

ರಬ್ಬರ್ ಅನ್ನು ಗಟ್ಟಿಗೊಳಿಸುವ ವಿಧಾನವನ್ನು ವಲ್ಕನೀಕರಣ ಎನ್ನುವರು.

ರಬ್ಬರ್ ಸಮಭಾಜಕ ವೃತ್ತದ ಉಷ್ಣವಲಯದಲ್ಲಿ ಬೆಳೆಯುವ ಮರವಾಗಿದ್ದುಇದರ ಮೂಲಸ್ಥಾನ ದಕ್ಷಿಣ ಅಮೇರಿಕಾದ ಅಮೆಝಾನ್ ನದಿ ಬಯಲು.

ಈ ಮರವು ಬೆಳೆಯಲು 24-27 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 175-250 ಸೆಂ.ಮೀ ಮಳೆ ಅವಶ್ಯಕವಾಗಿದೆ.

ರಬ್ಬರ್ ಮರ ಬೆಳೆಯಲು ಜೇಡಿ ಮಣ್ಣು ಸೂಕ್ತವಾಗಿದೆ. ರಬ್ಬರ್ ನಲ್ಲಿ ಕಾಡು ರಬ್ಬರ್ ಮತ್ತು ನೆಡು ತೋಟದ ರಬ್ಬರ್ ಎಂಬ 2 ವಿಧಗಳಿವೆ.

ಕೇರಳದ ಕೊಟ್ಟಾಯಂನಲ್ಲಿ ರಬ್ಬರ್ ಸಂಶೋಧನಾ ಕೇಂದ್ರವಿದೆ.

ಪ್ರಮುಖ ರಬ್ಬರ್ ಬೆಳೆಯುವ ರಾಜ್ಯಗಳು : ಕೇರಳ, ತಮಿಳುನಾಡು, ಕರ್ನಾಟಕ, ಅಂಡಮಾನ್ ನಿಕೋಬಾರ್, ತ್ರಿಪುರಾ, ಅಸ್ಸಾಂ, ಮಿಝೋರಾಂ

ಪ್ರಮುಖ ರಬ್ಬರ್ ಬೆಳೆಯುವ ದೇಶಗಳು : ಥಾಯ್ಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ

ಪ್ರಮುಖ ರಫ್ತು ದೇಶಗಳು : ಥಾಯ್ಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ

ಹೊಗೆಸೊಪ್ಪು

ನಿಕೋಷಿಯಾನಾ ಹೊಗೆಸೊಪ್ಪಿನ ವೈಜ್ಞಾನಿಕ ಹೆಸರು. ಇದರಲ್ಲಿ ನಿಕೋಟಿನ್ ಎಂಬ ವಿಷ ವಸ್ತುವಿದೆ.

ನಿಕೋಷಿಯಾನಾ ಟೊಬ್ಯಾಕಂ, ನಿಕೋಷಿಯಾನಾ ರಷ್ಟಿಕ ಎಂಬುವು ಹೊಗೆಸೊಪ್ಪಿನ ಪ್ರಮುಖ ಪ್ರಭೇದಗಳು

ಹೊಗೆಸೊಪ್ಪು ಉಷ್ಣವಲಯ ಮತ್ತು ಉಪ ಉಷ್ಣವಲಯಗಳೆರಡರಲ್ಲೂ ಬೆಳೆಯುವ ಸಸ್ಯವಾಗಿದೆ. ಸು. 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 50-100 ಸೆಂ.ಮೀ ವಾರ್ಷಿಕ ಮಳೆ ಈ ಬೆಳೆಗೆ ಸೂಕ್ತವಾದುದು.

ಕೆಂಪು ಮಣ್ಣುಮರಳುಮಿಶ್ರಿತ ಜೇಡಿಮಣ್ಣು ಮತ್ತು ಮೆಕ್ಕಲುಮಣ್ಣಿನಲ್ಲಿ ಹೊಗೆಸೊಪ್ಪನ್ನು ಬೆಳೆಯಬಹುದು.

ಆಂಧ್ರಪ್ರದೇಶದ ರಾಜಮಂಡ್ರಿ ಹಾಗೂ ಗುಂಟೂರು ಮತ್ತು ಕರ್ನಾಟಕದ ಮೈಸೂರಿನ ಹುಣಸೂರಿನಲ್ಲಿ ತಂಬಾಕು ಸಂಶೋಧನಾ ಕೇಂದ್ರಗಳಿವೆ

ಪ್ರಮುಖ ಹೊಗೆಸೊಪ್ಪು ಬೆಳೆಯುವ ರಾಜ್ಯಗಳು : ಆಂದ್ರಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ತಮಿಳನಾಡು, ಗುಜರಾತ್

ಪ್ರಮುಖ ಹೊಗೆಸೊಪ್ಪು ಬೆಳೆಯುವ ದೇಶಗಳು : ಚೀನಾ, ಬ್ರೆಜಿಲ್, ಭಾರತ, ಅಮೇರಿಕಾ ಸಂಯುಕ್ತ ಸಂಸ್ಥಾನ

ಪ್ರಮುಖ ರಫ್ತು ದೇಶಗಳು : ಅಮೇರಿಕಾ ಸಂಯುಕ್ತ ಸಂಸ್ಥಾನ, ಬ್ರೆಜಿಲ್, ಚೀನಾ, ನೆದರ್ಲೆಂಡ್, ಭಾರತ

ಕಾಫಿ

ಕಾಫಿಯಾ ಎಂಬುದು ಕಾಫಿಯ ವೈಜ್ಞಾನಿಕ ಹೆಸರು

ಕಾಫಿ ಬೆಳೆಯಲು 15-25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 150-200 ಸೆಂ.ಮೀ ಮಳೆ ಬೀಳುವ ವಾತಾವರಣ ಬೇಕಾಗುತ್ತದೆ. ಈ ಗಿಡ ಬೆಳೆಯಲು ನೆರಳಿನ ಪ್ರದೇಶವಿರಬೇಕು

ಕಾಫಿ ಬೆಳೆಯಲು ಲ್ಯಾಟರೈಟ್ ಮಣ್ಣು/ಜಂಬಿಟ್ಟಿಗೆ ಮಣ್ಣು ಸೂಕ್ತವಾದುದು.

ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ಸೋರಿ ಹೋಗಲು ಇಳಿಜಾರು ಪ್ರದೇಶಗಳಲ್ಲಿ ಕಾಫಿಯ ಗಿಡಗಳನ್ನು ಹಾಕಲಾಗುತ್ತದೆ.

ಚಿಕ್ಕಮಗಳೂರಿನ ಬಾಳೆ ಹೊನ್ನೂರಿನಲ್ಲಿ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಿದೆ

ಪ್ರಮುಖ ಕಾಫಿ ಬೆಳೆಯುವ ರಾಜ್ಯಗಳು : ಕರ್ನಾಟಕಕೇರಳ ಮತ್ತು ತಮಿಳುನಾಡು

ಪ್ರಮುಖ ಕಾಫಿ ಬೆಳೆಯುವ ದೇಶಗಳು ; ಬ್ರೆಜಿಲ್, ಕೊಲಂಬಿಯಾ, ಪೆರು, ಭಾರತ

ಪ್ರಮುಖ ರಫ್ತು ದೇಶಗಳು : ಬ್ರೆಜಿಲ್, ವಿಯೆಟ್ನಾಮ್, ಕೊಲಂಬಿಯಾ, ಇಂಡೋನೇಷಿಯಾ, ಇಥಿಯೋಪಿಯಾ

ಟೀ/ಚಹಾ

ಚಹಾದ ವೈಜ್ಞಾನಿಕ ಹೆಸರು ಕ್ಯಮೇಲಿಯಾ ಸಿನೆನ್ಸಿಸ್

ಟೀ ಬೆಳೆಯಲು 15-25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 150-250 ಸೆಂ.ಮೀ ಮಳೆ ಬೀಳುವ ವಾತಾವರಣ ಬೇಕಾಗುತ್ತದೆ. ಈ ಗಿಡ ಬೆಳೆಯಲು ನೆರಳಿನ ಪ್ರದೇಶವಿರಬೇಕು

ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ಸೋರಿ ಹೋಗಲು ಇಳಿಜಾರು ಪ್ರದೇಶಗಳಲ್ಲಿ ಚಹಾದ ಗಿಡಗಳನ್ನು ಹಾಕಲಾಗುತ್ತದೆ.

ಟೀ ಗಿಡಗಳು ಬೆಳೆಯಲು ಲ್ಯಾಟರೈಟ್ ಮಣ್ಣು/ಜಂಬಿಟ್ಟಿಗೆ ಮಣ್ಣು ಸೂಕ್ತವಾದುದು.

ಅಸ್ಸಾಂ ನ ಜೊಹ್ರಾಟ್ ನಲ್ಲಿ ಕೇಂದ್ರೀಯ ಟೀ ಸಂಶೋಧನಾ ಸಂಸ್ಥೆಯಿದೆ

ಪ್ರಮುಖ ಚಹಾ ಬೆಳೆಯುವ ರಾಜ್ಯಗಳು : ಅಸ್ಸಾಂಪ. ಬಂಗಾಳಕೇರಳತಮಿಳುನಾಡುಕರ್ನಾಟಕ

ಪ್ರಮುಖ ಚಹಾ ಬೆಳೆಯುವ ದೇಶಗಳು ಚೀನಾಭಾರತದ. ಆಫ್ರಿಕಾಕೀನ್ಯಾ

ಪ್ರಮುಖ ರಫ್ತು ದೇಶಗಳು : ಚೀನಾಅಮೇರಿಕ ಸಂಯುಕ್ತ ಸಂಸ್ಥಾನಕೀನ್ಯಾಭಾರತ

ರೇಷ್ಮೆ

ರೇಷ್ಮೆ ಹುಳುವಿನ ವೈಜ್ಞಾನಿಕ ಹೆಸರು ಬಾಂಬಿಕ್ಸ್ ಮೋರಿ ಅದೇ ಹೆಸರು ರೇಷ್ಮೆಗೂ ಅನ್ವಯವಾಗುತ್ತದೆ. ರೇಷ್ಮೆಯ ಮೂಲ ಚೀನಾ

ರೇಷ್ಮೆ ಉತ್ಪಾದನೆಯನ್ನು ಸೆರಿಕಲ್ಚರ್ ಎನ್ನುವರು

ರೇಷ್ಮೆಯನ್ನು ಬೆಳೆಯಲು 25-30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕು

ರೇಷ್ಮೆಯಲ್ಲಿ ಮಲ್ಬರಿಟಸ್ಸಾಈರಿ ಮತ್ತು ಮುಗಾ ಎಂಬ ಪ್ರಮುಖ ವಿಧಗಳಿವೆ

ಕರ್ನಾಟಕದ ಮೈಸೂರಿನಲ್ಲಿ ರೇಷ್ಮೆ ಹುಳು ಸಾಕಣೆ ಕೇಂದ್ರ ಮತ್ತು ಬೆಂಗಳೂರಿನಲ್ಲಿ ಕೇಂದ್ರ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆಗಳಿವೆ. ಹಾಗೂ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಕೇಂದ್ರೀಯ ರೇಷ್ಮೆ ಸಂಶೋಧನಾ ಸಂಸ್ಥೆಯಿದೆ.

ಪ್ರಮುಖ ರೇಷ್ಮೆ ಬೆಳೆಯುವ ರಾಜ್ಯಗಳು : ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು

ಪ್ರಮುಖ ರೇಷ್ಮೆ ಬೆಳೆಯುವ ದೇಶಗಳು : ಚೀನಾ, ಭಾರತ, ಉಜ್ಬೆಕಿಸ್ತಾನ

ಪ್ರಮುಖ ರಫ್ತು ದೇಶಗಳು : ಚೀನಾ, ಭಾರತ

ಕಾಮೆಂಟ್‌ಗಳು