ಕರ್ನಾಟಕದ ನದಿಗಳು ಮತ್ತು ಜಲಾನಯನ ಪ್ರದೇಶಗಳು

 ಕರ್ನಾಟಕದ ನದಿಗಳು ಮತ್ತು ಜಲಾನಯನ ಪ್ರದೇಶಗಳು

ಪೂರ್ವಾಭಿಮುಖವಾಗಿ ಹರಿಯುವ ನದಿಗಳು

ಕೃಷ್ಣಾ ನದಿ

ಕೃಷ್ಣಾ ನದಿ ಮಹಾರಾಷ್ಟ್ರ, ಕರ್ನಾಟಕ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು 483 ಕಿ.ಮಿ ಉದ್ದ ಹರಿಯುತ್ತದೆ. ಕೃಷ್ಣಾ ನದಿ ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. 

ಈ ನದಿ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರದ ಹತ್ತಿರ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶ‍ದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದರ ಮುಖ್ಯವಾದ ಉಪನದಿಗಳೆಂದರೆ ತುಂಗಭದ್ರಾ , ಕೊಯ್ನಾ, ಭೀಮಾ , ಮಲಪ್ರಭಾ ಮತ್ತು ಘಟಪ್ರಭಾ

ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದರ ಕಿ.ಮಿ. ಇದರಲ್ಲಿ ಮಹಾರಾಷ್ಟ್ರದಲ್ಲಿ 68,000 ಚ.ಕಿ.ಮೀ ಕರ್ನಾಟಕದಲ್ಲಿ 1,12,600 ಚ.ಕಿ.ಮೀ ಹಾಗು ಆಂಧ್ರ ಪ್ರದೇಶದಲ್ಲಿ 75,600 ಚ.ಕಿ.ಮೀ ವ್ಯಾಪಿಸಿದೆ.

ಕೃಷ್ಣಾನದಿಗೆ ವಿಜಯಪುರದ ಬಳಿ ಆಲಮಟ್ಟಿ ಅಣೆಕಟ್ಟು ನಿರ್ಮಿಸಲಾಗಿದೆ, ಇದರ ಮತ್ತೊಂದು ಹೆಸರು ಲಾಲ್ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು. ಹಾಗೆಯೇ ಯಾದಗಿರಿಯ ನಾರಾಯಣಪುರದ ಬಳಿ ಸಹ ಕೃಷ್ಣಾನದಿಗೆ ನಾರಾಯಣಪುರ ಅಣೆಕಟ್ಟನ್ನು ನಿರ್ಮಿಸಲಾಗಿದ್ದು ಅದರ ಮತ್ತೊಂದು ಹೆಸರು ಬಸವಸಾಗರ.

ಬಾಗಲಕೋಟೆಯ ಕೂಡಲಸಂಗಮದಲ್ಲಿ ಮಲಪ್ರಭಾ, ಘಟಪ್ರಭಾ ಮತ್ತು ಭೀಮಾ ನದಿಗಳು ಸಂಗಮಹೊಂದುತ್ತವೆ.

ಕೃಷ್ಣಾ ನದಿಯ ಪ್ರಮುಖ ಉಪನದಿಗಳು ಮತ್ತು ಅವುಗಳ ಜಲಾನಯನ ಪ್ರದೇಶಗಳ ವಿಸ್ತೀರ್ಣ

ಘಟಪ್ರಭಾ 8829 ಚ.ಕಿ.ಮೀ, ಭೀಮಾ 70,614 ಚ.ಕಿ.ಮೀ, ತುಂಗಭದ್ರಾ 47,866 ಚ.ಕಿ.ಮೀ, ಮಲಪ್ರಭಾ 11549 ಚ.ಕಿ.ಮೀ

ಯೆರ್ಲಾ, ಪಂಚ್‍ಗಂಗಾ, ದೂಧ್‍ಗಂಗಾ, ಹಿರಣ್ಯಕೇಶಿ ಇವು ಕೃಷ್ಣಾನದಿಯ ಇತರ ಪ್ರಮುಖ ಉಪನದಿಗಳು

ಘಟಪ್ರಭಾ

ಘಟಪ್ರಭಾ ನದಿಯು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬೋಳಿ ಬಳಿಯ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಜನಿಸುತ್ತದೆ. 283 ಕಿ.ಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಬಳಿ ಕೃಷ್ಣಾ ನದಿಯನ್ನು ಸೇರುತ್ತದೆ.

ತಾಮ್ರಪರ್ಣಿಹಿರಣ್ಯಕೇಶಿಹಿರೇಹಳ್ಳ ಮತ್ತು ಮಾರ್ಕಂಡೇಯ ಇದರ ಪ್ರಮುಖ ಉಪನದಿಗಳು

ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿ ಘಟಪ್ರಭಾ ನದಿಯಿಂದ ಗೋಕಾಕ್ ಜಲಪಾತ ಸೃಷ್ಟಿಯಾಗಿದೆ. ಇದನ್ನು ಕರ್ನಾಟಕದ ನಯಾಗರ ಎನ್ನುವರು.

ಬೆಳಗಾವಿಯಲ್ಲಿ ಈ ನದಿಗೆ ಹಿಡ್ಕಲ್ ಜಲಾಶಯವನ್ನು ನಿರ್ಮಿಸಲಾಗಿದೆ.

ಮಲಪ್ರಭಾ ನದಿ

ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದ ಬಳಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. 304 ಕಿಲೊಮೀಟರುಗಳವರೆಗೆ ಹರಿದು ಕೃಷ್ಣಾ ನದಿಯನ್ನು ಕೂಡಲ ಸಂಗಮದಲ್ಲಿ ಕೂಡುತ್ತದೆ. ಸಂಗಮದವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ 11,549 ಚದರ ಕಿಲೊಮೀಟರುಗಳು.

ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥದಲ್ಲಿ ಆಣೆಕಟ್ಟು ಕಟ್ಟಲಾಗಿದೆ. ಈ ಜಲಾಶಯಕ್ಕೆ ರೇಣುಕಾ ಜಲಾಶಯವೆಂದು ಕರೆಯಲಾಗುತ್ತದೆ.

ಬೆಣ್ಣೆಹಳ್ಳಹಿರೇಹಳ್ಳ ಮತ್ತು ತಾಸ್ ಈ ನದಿಯ ಪ್ರಮುಖ ಉಪನದಿಗಳಾಗಿವೆ.

ತುಂಗಭದ್ರಾ ನದಿ

ತುಂಗಾ ನದಿ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿ ಈ ನದಿಯು ಪ್ರಾರಂಭವಾಗುತ್ತದೆ. ಮುಂದೆ ಆಂಧ್ರ ಪ್ರದೇಶದ ಕರ್ನೂಲು ಬಳಿ ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿಯ ಒಟ್ಟು ಉದ್ದ ಸುಮಾರು 610 ಕಿ.ಮಿ.ಗಳು. ಇದರಲ್ಲಿ 380 ಕಿ. ಮೀ ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.

ವೇದಾವತಿ (ವರದಾ) ಮತ್ತು ಹಗರಿ ನದಿಗಳು ತುಂಗಭದ್ರಾ ನದಿಯ ಉಪನದಿಗಳಾಗಿವೆ. ವೇದಾವತಿ ನದಿಗೆ 1907 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ವಾಣಿವಿಲಾಸ ಸಾಗರ ಎಂಬ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಕರ್ನಾಟಕದ ಮೊದಲ ಅಣೆಕಟ್ಟಾಗಿದೆ.

ತುಂಗಾ ನದಿ

ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮೂಲಕ ಸುಮಾರು 147 ಕಿ.ಮೀ ದೂರದವರೆಗೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ ತುಂಗಭದ್ರಾ ಎಂಬ ಹೆಸರು ಪಡೆದು ಮುಂದೆ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.

ಭದ್ರಾ ನದಿ

ಭದ್ರಾ ನದಿಯು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ತನ್ನ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ ಭದ್ರ ಅಭಯಾರಣ್ಯದ ಮೂಲಕ ಹರಿಯುತ್ತ ಮುಂದೆ ಶಿವಮೊಗ್ಗ ಜಿಲ್ಲೆಯ ಸಣ್ಣ ಪಟ್ಟಣ ಕೂಡ್ಲಿಯಲ್ಲಿ ತುಂಗಾನದಿಯೊಂದಿಗೆ ಸೇರಿ ತುಂಗಭದ್ರಾ ನದಿಯಾಗುತ್ತದೆ. ಈ ಭದ್ರಾ ನದಿಗೆ ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.

ಭೀಮಾ ನದಿ

ಮಹಾರಾಷ್ಟ್ರದ ಪ.ಘಟ್ಟಗಳ ಭೀಮಾಶಂಕರ್ ಎಂಬಲ್ಲಿ ಉದ್ಭವಿಸಿ ಕರ್ನಾಟಕದ ರಾಯಚೂರಿನಲ್ಲಿ ಕೃಷ್ಣಾನದಿಯನ್ನು ಸೇರುತ್ತದೆ.

ಮುಳಾಮುಟಾಘೋಡನೀರಾಮಾನ್ ಮತ್ತು ಸಿನಾಲ್ ಎಂಬುವು ಭೀಮಾನದಿಯ ಉಪನದಿಗಳಾಗಿವೆ.

ಕಾವೇರಿ ನದಿ

ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎನ್ನುವರು. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯ ಬಳಿ ಉಗಮಿಸುವ ಈ ನದಿ ಚಾಮರಾಜನಗರ ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಕುಮಾರ ಪಟ್ಟಣಮ್ ಎಂಬಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಕಾವೇರಿ ನದಿಯ ಒಟ್ಟು ಉದ್ದ 800 ಕಿ.ಮೀ. ಕರ್ನಾಟಕದಲ್ಲಿ 380 ಕಿ.ಮೀ ಹರಿದು ತಮಿಳುನಾಡಿನಲ್ಲಿ 416 ಕಿ.ಮೀ ಹರಿಯುತ್ತದೆ. ಈ ನದಿಯ ಜಲಾನಯನ ಪ್ರದೇಶದ ವಿಸ್ತೀರ್ಣ  81,155 ಚ.ಕಿ.ಮೀಗಳು.

ಕಾವೇರಿ ನದಿಯ ಜಲಪಾತಗಳು

ಚುಂಚನಕಟ್ಟೆ ಜಲಪಾತ  ಮೈಸೂರು

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ –ಚಾಮರಾಜನಗರ

ಹೊಗೆನಕಲ್ ಜಲಪಾತ  ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿದೆ.

ಕಾವೇರಿ ನದಿಯ ನದಿದ್ವೀಪಗಳು

ಶ್ರೀರಂಗಪಟ್ಟಣ (ಮಂಡ್ಯ), ಶಿವನ ಸಮುದ್ರ (ಮಂಡ್ಯ), ಶ್ರೀರಂಗಂ (ತಮಿಳುನಾಡು)

ವಿವಿಧ ರಾಜ್ಯಗಳಲ್ಲಿ ಕಾವೇರಿ ನದಿಯ ಜಲಾಯನ ಪ್ರದೇಶ

ತಮಿಳುನಾಡು 43,868 ಚ.ಕಿ.ಮೀ

ಕರ್ನಾಟಕ 34,273 ಚ.ಕಿ.ಮೀ

ಕೇರಳ 2,866 ಚ.ಕಿ.ಮೀ

ಪಾಂಡಿಚೆರಿ 148 ಚ.ಕಿ.ಮೀ

ಕಾವೇರಿಯ ಉಪನದಿಗಳು

ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಥ, ಲೋಕಪಾವನಿ, ಭವಾನಿ, ಹಾರಂಗಿ, ಅಮರಾವತಿ.

ಕೃಷ್ಣರಾಜಸಾಗರ ಅಣೆಕಟ್ಟನ್ನು ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ಸಂಗಮದ ಸ್ಥಳದಲ್ಲಿ ಕಟ್ಟಲಾಗಿದೆ.

ಗೋದಾವರಿ

ಗೋದಾವರಿಯನ್ನು ವೃದ್ಧಗಂಗಾ ಎಂದು ಕರೆಯುವರು. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟುತ್ತದೆ ಮತ್ತು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ನ ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಗೆ ಸೇರುತ್ತದೆ. 1465 ಕಿಮೀ ಉದ್ದದ ಇದು ಗಂಗಾನದಿಯ ಭಾರತದ ಎರಡನೇ ದೊಡ್ದ ನದಿ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯಾಗಿದೆ. ಈ ನದಿಯು ಕರ್ಣಾಟಕದಲ್ಲಿ 4,406 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ.

ಗೋದಾವರಿಯ ಉಪನದಿಯಾದ ಮಂಜ್ರಾ ನದಿಯು ಗುಲ್ಬರ್ಗ ಜಿಲ್ಲೆಯಲ್ಲಿ ಹರಿಯುತ್ತದೆ.

ಉತ್ತರ ಪಿನಾಕಿನಿ (ಉತ್ತರ ಪೆನ್ನಾರ್) ಮತ್ತು ದಕ್ಷಿಣ ಪಿನಾಕಿನಿ (ದಕ್ಷಿಣ ಪೆನ್ನಾರ್)

ಕೋಲಾರ ಜಿಲ್ಲೆಯ ನಂದಿಬೆಟ್ಟಗಳಲ್ಲಿ ಹುಟ್ಟುವ ಈ ನದಿಗಳ ಒಟ್ಟು ಉದ್ದ 597 ಕಿ.ಮೀ. ಕರ್ನಾಟಕದಲ್ಲಿ ಈ ನದಿಗಳು 61 ಕಿ.ಮೀ ಉದ್ದ ಹರಿಯುತ್ತವೆ. ಮುಂದೆ ಆಂಧ್ರ ಪ್ರದೇಶದಲ್ಲಿ ಸಾಗಿ ಬಂಗಾಳಕೊಲ್ಲಿಯನ್ನು ಸೇರುತ್ತವೆ .

ಜಯಮಂಗಲಿಚಿತ್ರಾವತಿಪಾಪಾಗ್ನಿಕುಂದೇರುಸಗಿಲೇರುಚೆಯ್ಯೇರು ಇವುಗಳ ಪ್ರಮುಖ ಉಪನದಿಗಳು

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು

ಕಾಳೀನದಿ

ಕಾಳಿನದಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಉಗಮ ಹೊಂದುತ್ತದೆ.  ಈ ನದಿಯ ಜಲಾನಯನ ಪ್ರದೇಶದ ವಿಸ್ತೀರ್ಣ 4.188 ಚ.ಕಿ.ಮೀಗಳು. ನದಿಯ ಉದ್ದ 153 ಕಿ.ಮೀ. 

ಕಾನ್ಹೇರಿವಾಕಿಬಾರ್ಚಿಪಂಡ್ರಿಮಾದ್ರಿ, ತಾತಿಹಾಲ ಇದರ ಪ್ರಮುಖ ಉಪನದಿಗಳು

ಕಾಳಿ ನದಿಗೆ ಸೂಫಾ ಅಣೆಕಟ್ಟನ್ನು ಕಟ್ಟಲಾಗಿದ್ದು ಇದು ಕರ್ನಾಟಕದ ಎರಡನೇ ಅತಿದೊಡ್ಡ ಅಣೆಕಟ್ಟಾಗಿದೆ. ಈ ನದಿಗೆ ಸೂಫಾ ಬಳಿ ಜಲವಿದ್ಯುತ್ ಕೇಂದ್ರವನ್ನು ನಿರ್ಮಿಸಲಾಗಿದೆ.

ಲಾಲಗುಳಿ ಜಲಪಾತವು ಇದರ ಪ್ರಮುಖ ಜಲಪಾತವಾಗಿದೆ.

ಶರಾವತಿ

ಶರಾವತಿ ನದಿಯು ಶಿವಮೊಗ್ಗ ಜಿಲ್ಲೆಯ ಅಂಬುತೀರ್ಥದಲ್ಲಿ ಉಗಮ ಹೊಂದುತ್ತದೆ. ಇದರ ಜಲಾನಯನ ಪ್ರದೇಶದ ವಿಸ್ತೀರ್ಣ 3592 ಚ.ಕ.ಮೀ. ಮತ್ತು ನದಿಯ ಉದ್ದ 122 ಕಿ.ಮೀ

ಶರಾವತಿ ನದಿಯು ಶಿವಮೊಗ್ಗದ ಸಾಗರದ ಬಳಿ ಜೋಗ್ ಜಲಪಾತವನ್ನು ಸೃಷ್ಟಿಸಿದೆ. ಈ ಜೋಗ್ ಜಲಪಾತವು  ರಾಜ, ರಾಣಿ, ರೋರರ್, ರಾಕೆಟ್‍ಗಳಾಗಿ ಧುಮ್ಮಿಕ್ಕುತ್ತದೆ.

ಹರಿದ್ರಾವತಿ ಮತ್ತು ಎಣ್ಣೆಹೊಳೆಗಳು ಇದರ ಉಪನದಿಗಳಾಗಿವೆ.

ಗಂಗಾವಳಿ (ಬೇಡ್ತಿ)

ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟುತ್ತದೆ. ಈ ನದಿಯ ಜಲಾನಯನ ಪ್ರದೇಶ 3,574 ಚ.ಕಿ.ಮೀ ಇದೆ. ನದಿಯ ಉದ್ದ 152 ಕಿ.ಮೀ

ನೇತ್ರಾವತಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಗಮವಾಗುತ್ತದೆ. ಇದರ ಜಲಾನಯನ ಪ್ರದೇಶ 3222 ಚ.ಕಿ.ಮೀ ನದಿಯ ಉದ್ದ 103 ಕಿ.ಮೀ

ಚಾರ್ಮುಡಿಶಿಶಿಲಾಪಾಲ್ಗುಣಿಗುರುಪುರಕುಮಾರಧಾರಾ ಇವು ನೇತ್ರಾವತಿಯ ಪ್ರಮುಖ ಉಪನದಿಗಳಾಗಿವೆ.

ಮಹದಾಯಿ/ಮಾಂಡವಿ

ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟುತ್ತದೆ. ಈ ನದಿಯ ಜಲಾನಯನ ಪ್ರದೇಶ 2,032 ಚ.ಕಿ.ಮೀ. ನದಿಯ ಉದ್ದ 87 ಕಿ.ಮೀ

ಕಳಸಾ ಬಂಡೂರಿ ಯೋಜನೆ ಈ ನದಿಗೆ ಸಂಬಂಧಿಸಿದ್ದಾಗಿದೆ.

ಈ ನದಿಯ ತೀರದಲ್ಲಿ ಗೋವಾದ ರಾಜಧಾನಿ ಪಣಜಿ ಹಾಗೂ ಸಲೀಂ ಅಲಿ ಪಕ್ಷಿಧಾಮವಿದೆ.

ಅಘನಾಶಿನಿ (ತದರಿ)

ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ಈ ನದಿ 1,330 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ. ನದಿಯ ಉದ್ದ 84 ಕಿ.ಮೀ

ಈ ನದಿಯು ಉಂಚಳ್ಳಿ ಜಲಪಾತವನ್ನು ಸೃಷ್ಟಿಸಿದೆ.

ವರಾಹಿ

ವಾರಾಹಿ ನದಿಯ ಜಲಾನಯನ ಪ್ರದೇಶ 759 ಚ.ಕಿ.ಮೀಗಳಿದ್ದು ಈ ನದಿಯು 66 ಕಿ.ಮೀ ಉದ್ದವಿದೆ. ಶಿವಮೊಗ್ಗ ಜಿಲ್ಲೆಯ ಯದೂರಿನಲ್ಲಿ ಈ ನದಿಗೆ ವಿದ್ಯುತ್ ಉತ್ಪಾದನಾ ಅಣೆಕಟ್ಟನ್ನು ಕಟ್ಟಲಾಗಿದೆ.

ಕರ್ನಾಟಕದಲ್ಲಿ ಹರಿಯುವ ನದಿಗಳ ಜಲಾಯನ ಪ್ರದೇಶಗಳು

ಕೃಷ್ಣಾ 113.29 ಲಕ್ಷ ಚ.ಕಿ.ಮೀ 59.48%

ಕಾವೇರಿ 34.27 ಲಕ್ಷ ಚ.ಕಿ.ಮೀ 17.99 %

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು 24.25 ಲಕ್ಷ ಚ.ಕಿ.ಮೀ 12.73%

ಉತ್ತರ ಪಿನಾಕಿನಿ (ಪೆನ್ನಾರ್) 6.94 ಲಕ್ಷ ಚ.ಕಿ.ಮೀ 3.64%

ಗೋದಾವರಿ 4.41 ಲಕ್ಷ ಚ.ಕಿ.ಮೀ 2.31%

ದಕ್ಷಿಣ ಪಿನಾಕಿನಿ (ಪೆನ್ನಾರ್) 4.37 ಲಕ್ಷ ಚ.ಕಿ.ಮೀ 2.29%

ಪಾಲಾರ್ 2.97 ಲಕ್ಷ ಚ.ಕಿ.ಮೀ 1.56%

ಕಾಮೆಂಟ್‌ಗಳು