ಭಾರತದ ಪ್ರಮುಖ ನದಿ ಕಣಿವೆ ಯೋಜನೆಗಳು

 ಭಾರತದ ಪ್ರಮುಖ ನದಿ ಕಣಿವೆ ಯೋಜನೆಗಳು

1.  ದಾಮೋದರ ನದಿ ಕಣಿವೆ ಯೋಜನೆ

ದಾಮೋದರ ನದಿ ಯೋಜನೆಯು ಸ್ವತಂತ್ರ ಭಾರತದ ಮೊದಲನೆಯ ವಿವಿದ್ಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ. ಇದನ್ನು ಅಮೇರಿಕದ ಟೆನೆಸ್ಸಿ ಕಂಪೆನಿಯ  ಸಹಾಯದಿಂದ ನಿರ್ಮಿಸಲಾಯಿತು. ಈ ಯೋಜನೆಯನ್ನು ಝಾರ್ಖಾಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಜೊತೆಗೂಡಿ ನಿರ್ಮಿಸಿವೆ. ದಾಮೋದರ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ.

ತಿಲೈಯಾಮೈಥಾನ್ಕೊನಾರ್ ಮತ್ತು ಪಂಚೇತ್ ಹಿಲ್‍ಗಳಲ್ಲಿ  ದಾಮೋದರ ಮತ್ತು ಅದರ ಉಪನದಿಗಳಿಗೆ ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಬೊಕಾರೊಚಂದ್ರಪುರ ದುರ್ಗಾಪುರಗಳಲ್ಲಿ ಶಾಖೋತ್ಪನ್ನ ವಿದ್ಯುದಾಗಾರಗಳನ್ನು ನಿರ್ಮಿಸಲಾಗಿದೆ.

2.  ಭಾಕ್ರಾ-ನಂಗಲ್ ಯೋಜನೆ

ಈ ಯೋಜನೆಯು ಭಾರತ ಮತ್ತು ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ ವಿವಿದ್ಧೋಶ ನದಿಕಣಿವೆ ಯೋಜನೆಯಾಗಿದ್ದು ಪಂಜಾಬ್ಹರಿಯಾಣ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ.

ಹಿಮಾಚಲಪ್ರದೇಶದ ಭಾಕ್ರಾ ಮತ್ತು ನಂಗಲ್ ಎಂಬಲ್ಲಿ ಸಟ್ಲೆಜ್ ನದಿಗೆ ಎರಡು ಪ್ರತ್ಯೇಕ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಈ ಜಲಾಶಯವನ್ನು ಗೋವಿಂದಸಾಗರ ಎಂದು ಸಹ ಕರೆಯಲಾಗುತ್ತದೆ.

ಈ ನದಿಯ ಅಣೆಕಟ್ಟಿನಿಂದ ಗಂಗುವಾಲ್ ಮತ್ತು ಕೋಟ್ಲ ಎಂಬ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗಿದೆ

3.  ಕೋಸಿ ಯೋಜನೆ

ಬಿಹಾರಿನ ಕಣ್ಣೀರಿನ ನದಿ ಎನ್ನುವ ಕೋಸಿ ನದಿಗೆ ಈ ಯೋಜನೆಯನ್ನು ಅಳವಡಿಸಲಾಗಿದೆ. ಈ ಯೋಜನೆಯು ಭಾರತ ಮತ್ತು ನೇಪಾಳ ರಾಷ್ಟ್ರಗಳ ಜಂಟಿ ಯೋಜನೆಯಾಗಿದೆ.

ಭಾರತ ಮತ್ತು ನೇಪಾಳಗಳ ಗಡಿಯಲ್ಲಿ ಬರುವ ಹನುಮಾನ್ ನಗರ ಎಂಬಲ್ಲಿ ಕೋಸಿ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ.

4.  ಹಿರಾಕುಡ್ ಯೋಜನೆ

ಒಡಿಶಾದ ಸಾಂಬಲ್ಪುರದ ಬಳಿ ಮಹಾನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ನದಿಯು ಒಡಿಶಾದ ಕಣ್ಣೀರಿನ ನದಿ ಎನಿಸಿದೆ. ಭಾರತದಲ್ಲಿಯೇ ಅತ್ಯಂತ ಉದ್ದವಾದ ಅಣೆಕಟ್ಟೆಯಾಗಿರುವ ಇದು 4800 ಮಿಟರ್ ಉದ್ದವಿದೆ.

ಈ ಯೋಜನೆಯಿಂದ ಒರಿಸ್ಸಾಬಿಹಾರಮತ್ತು ಛತ್ತಿಸ್ಘರ್ ರಾಜ್ಯಗಳು ಸೌಲಭ್ಯವನ್ನು ಪಡೆದಿದೆ.

5.   ತುಂಗಭದ್ರಾ ಯೋಜನೆ

ಇದು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ. ಈ ಅಣೆಕಟ್ಟನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಮಲ್ಲಾಪುರದಲ್ಲಿ ತುಂಗಭಧ್ರಾ ನದಿಗೆ ನಿರ್ಮಿಸಲಾಗಿದೆ. ಈ ಜಲಾಶಯವನ್ನು ಪಂಪಸಾಗವೆಂದು ಸಹ ಎನ್ನುತ್ತಾರೆ.

6.  ನಾಗಾರ್ಜುನ ಸಾಗರ ಯೋಜನೆ

ಆಂಧ್ರಪ್ರದೇಶದ ನಂದಿಕೊಂಡ ಗ್ರಾಮದ ಬಳಿ ಕೃಷ್ಣಾನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಭಾರತದ ವಿವಿಧೋದ್ದೇಶ ಯೋಜನೆಯಲ್ಲಿಯೇ ಅತ್ಯಂತ ದೊಡ್ಡ ಯೋಜನೆಯಾಗಿದೆ.

7.  ಕೃಷ್ಣಾ ಮೇಲ್ದಂಡೆ ಯೋಜನೆ

ಕೃಷ್ಣಾನದಿಗೆ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಬಳಿ ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು) ಮತ್ತು ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಳಿ ಬಸವ ಸಾಗರ ಜಲಾಶಯ  ಎರಡು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.

8.  ಚಂಬಲ್ ಯೋಜನೆ

ಇದು ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ.

ಚಂಬಲ್ ಯೋಜನೆಯನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ.

1. ಗಾಂಧಿ ಸಾಗರ ಯೋಜನೆ

2. ರಾಣಾ ಪ್ರತಾಪ ಅಣೆಕಟ್ಟು

3. ಜವಾಹರ್ ಸಾಗರ್ ಅಣೆಕಟ್ಟು

9.  ನರ್ಮದಾ ಕಣಿವೆ ಯೋಜನೆ

ಮಧ್ಯಪ್ರದೇಶ ಮತ್ತು ಗುಜರಾತ್ ಗಳ ನಡುವೆ ಈ ನದಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಸರ್ದಾರ್ ಸರೋವರ ಯೊಜನೆನರ್ಮದಾ ಸಾಗರನರ್ಮದ ಮೇಲ್ದಂಡೆ ಯೋಜನೆಗಳು ಇದರ ಪ್ರಮುಖ ಯೋಜನೆಗಳಾಗಿವೆ.

10 . ತಿಪೈಮುಖಾ ಅಣೆಕಟ್ಟು

ಮಣಿಪುರ ರಾಜ್ಯದಲ್ಲಿ ಬರಾಕ್ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಈ ಯೋಜನೆಯನ್ನು ಹಂಚಿಕೊಳ್ಳಲಾಗಿದೆ. ಈ ಅಣೆಕಟ್ಟು ಜೈವಿಕ ಸೂಕ್ಷ್ಮ ವಲಯವಾಗಿದೆ.

11. ಲೋಕ್‍ತಕ್ ಅಣೆಕಟ್ಟು

ಮಣಿಪುರದ ಇಂಫಾಲ್ ನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಲೋಕ್‍ತಕ್ ಎನ್ನುವ ಭಾರತದ ಏಕೈಕ ತೇಲುವ ಸರೋವರ ಇಲ್ಲಿ ಕಂಡುಬರುತ್ತದೆ.

ಇತರ ಪ್ರಮುಖ ನದಿ ಯೋಜನೆಗಳು

ಫರಕ್ಕಾ ಅಣೆಕಟ್ಟು - ಭಾರತ ಮತ್ತು ಬಾಂಗ್ಲಾದೇಶ – ಗಂಗಾನದಿ

ತೆಹರಿ ಅಣೆಕಟ್ಟು - ಉತ್ತರಖಂಡ ರಾಜ್ಯದ ತೆಹರಿ - ಭಾಗೀರಥಿ ನದಿ

ಮುಲ್ಲ ಪೆರಿಯಾರ್ ಅಣೆಕಟ್ಟು - ಕೇರಳ ರಾಜ್ಯದ ಇಡುಕ್ಕಿ - ಪೆರಿಯಾರ್ ನದಿಗೆ

ಇಂದಿರಾಗಂಧಿ ಯೋಜನೆ - ಪಂಜಾಬ್ ಮತ್ತು ರಾಜಸ್ತಾನ ರಾಜ್ಯಗಳು - ಸಟ್ಲೇಜ್ ಮತ್ತು ಬಿಯಾಸ್ ನದಿಗಳು

ಕಿಶನ್ ಗಂಗಾ – ಜಮ್ಮು ಕಾಶ್ಮೀರ - ಕಿಶನ್‍ಗಂಗಾ ನದಿ

ಉರಿ ಯೋಜನೆ  ಜಮ್ಮು ಕಾಶ್ಮೀರ  ಝೀಲಂ ನದಿ

ಸಲಾಲ್ ಜಲಾಶಯ  ಜಮ್ಮು ಕಾಶ್ಮೀರ  ಚೀನಾಬ್ ನದಿ

ದುಲ್ ಹಸ್ತಿ ಜಲವಿದ್ಯುತ್ ಯೋಜನೆ - ಜಮ್ಮು ಕಾಶ್ಮೀರ  ಚೀನಾಬ್ ನದಿ

ಸವಾಲ್ ಕೋಟ್ - ಜಮ್ಮು ಕಾಶ್ಮೀರ  ಚೀನಾಬ್ ನದಿ

ಬಗ್ಲಿಹಾರ್ - ಜಮ್ಮು ಕಾಶ್ಮೀರ  ಚೀನಾಬ್ ನದಿ

ರಂಜಿತ್ ಸಾಗರ್ ಅಣೆಕಟ್ಟು - ಪಂಜಾಬ್  ರಾವಿ ನದಿ

ಚಮೇರಾ ಜಲಾಶಯ - ಹಿಮಾಚಲ ಪ್ರದೇಶ  ರಾವಿ ನದಿ

ಪೊಂಗ್ ಜಲಾಶಯ - ಹಿಮಾಚಲ ಪ್ರದೇಶ - ಬಿಯಾಸ್ ನದಿ

ಪನ್ದೋಹ್ - ಹಿಮಾಚಲ ಪ್ರದೇಶ - ಬಿಯಾಸ್ ನದಿ

ನೆಪ್ತಾ ಜಲಾಶಯ - ಹಿಮಾಚಲ ಪ್ರದೇಶ - ಸಟ್ಲೇಜ್ ನದಿ

ಜವಾರಿ ಜಲಾಶಯ  ರಾಜಸ್ತಾನ - ಲೂನಿ ನದಿ

ಜವಾಹರ್ ಸಾಗರ್ ಜಲಾಶಯ  ರಾಜಸ್ತಾನ  ಚಂಬಲ್ ನದಿ

ಕೋಟಾ ಅಣೆಕಟ್ಟು  ರಾಜಸ್ತಾನ - ಚಂಬಲ್ ನದಿ

ರಾಣಾ ಪ್ರತಾಪ ಸಾಗರ - ರಾಜಸ್ತಾನ - ಚಂಬಲ್ ನದಿ

ದರೋಯಿ  ಗುಜರಾತ್ - ಸಬರ್‍ಮತಿ

ಉಕೈ ಜಲಾಶಯ/ವಲ್ಲೈಶ್ ಸಾಗರ ಅಣೆಕಟ್ಟು  ಗುಜರಾತ್  ತಪತಿ ನದಿ

ಗಾಂಧಿಸಾಗರ ಅಣೆಕಟ್ಟು  ಮಧ್ಯಪ್ರದೇಶ  ಚಂಬಲ್ ನದಿ

ಬಾರ್ಗಿ ಅಣೆಕಟ್ಟು  ಮಧ್ಯಪ್ರದೇಶ - ನರ್ಮದಾ

ಇಂದಿರಾಸಾಗರ  ಮಧ್ಯಪ್ರದೇಶ - ನರ್ಮದಾ

ಜಯಕ್ವಾಡಿ ಜಲಾಶಯ  ಮಹಾರಾಷ್ಟ್ರ  ಗೋದಾವರಿ

ಕೊಯ್ನಾ ಅಣೆಕಟ್ಟು - ಮಹಾರಾಷ್ಟ್ರ  ಕೊಯ್ನಾ

ಶ್ರೀರಾಮಸಾಗರ  ಆಂಧ್ರಪ್ರದೇಶ  ಗೋದಾವರಿ

ನಾಗಾರ್ಜುನ ಸಾಗರ ಅಣೆಕಟ್ಟು  ಆಂದ್ರಪ್ರದೇಶ  ಕೃಷ್ಣಾ

ಶ್ರೀಶೈಲಂ ಅಣೆಕಟ್ಟು - ಆಂದ್ರಪ್ರದೇಶ  ಕೃಷ್ಣಾ

ಪೊಲ್ಲಾವಂ ಅಣೆಕಟ್ಟು - ಆಂದ್ರಪ್ರದೇಶ  ಗೋದಾವರಿ

ಸ್ಟ್ಯಾನ್ಲಿ ಅಣೆಕಟ್ಟು  ತಮಿಳುನಾಡು  ಕಾವೇರಿ

ಮೆಟ್ಟೂರು ಜಲಾಶಯ - ತಮಿಳುನಾಡು ಮತ್ತು ಕರ್ನಾಟಕ  ಕಾವೇರಿ

ಕೃಷ್ಣರಾಜಸಾಗರ ಜಲಾಶಯ  ಕರ್ನಾಟಕ  ಕಾವೇರಿ

ಕಬಿನಿ ಜಲಾಶಯ  ಕೇರಳ  ಕಬಿನಿ

ಇಡುಕ್ಕಿ ಅಣೆಕಟ್ಟು  ಕೇರಳ  ಇಡುಕ್ಕಿ ನದಿ

ಕೋನಾರ್ ಅಣೆಕಟ್ಟು  ಝಾರ್ಖಾಂಡ್  ದಾಮೋದರ್ ನದಿ

ಕಾಮೆಂಟ್‌ಗಳು