ಖನಿಜ ಸಂಪನ್ಮೂಲಗಳು - ಅಲೋಹ ಖನಿಜಗಳು
ಖನಿಜ ಸಂಪನ್ಮೂಲಗಳು
ಅಲೋಹ ಖನಿಜಗಳು
ವಜ್ರ
ವಜ್ರವು ಇಂಗಾಲದ ಸ್ಫಟಿಕ ರೂಪವಾಗಿದ್ದು ಪ್ರಾಕೃತಿಕವಾಗಿ ದೊರೆಯುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದ ವಸ್ತುವಾಗಿದೆ.
ಅಗ್ನಿಶಿಲೆಗಳ ಪ್ರಕಾರವಾದ ಕಿಂಬರ್ಲೈಟ್ ಶಿಲೆಗಳಲ್ಲಿ ವಜ್ರಗಳು ಕಂಡುಬರುತ್ತವೆ.
ಭೂಮಿಯ ಮೇಲ್ಪದರದ ಆಳದಲ್ಲಿ ಸುಮಾರು 140 ರಿಂಧ 190 ಕಿ.ಮೀ ಆಳದಲ್ಲಿ ವಜ್ರಗಳು ಉತ್ಪತ್ತಿಯಾಗುತ್ತವೆ. ಜ್ವಾಲಾಮುಖಿಗಳು ಸಿಡಿದಾಗ ಭೂಗರ್ಭದಿಂದ ವಜ್ರಗಳು ಹೊರಗೆ ಸಿಡಿಯುತ್ತವೆ. ನಂತರ ಇವುಗಳಿಗೆ ನಿರ್ದಿಷ್ಟ ಆಕಾರ ನೀಡಲಾಗುವುದು.
ಮಧ್ಯಪ್ರದೇಶ : ಪನ್ನಾ (ದೇಶದ ಅತೀ ದೊಡ್ಡ ವಜ್ರದ ನಿಕ್ಷೇಪ)
ಆಂಧ್ರಪ್ರದೇಶ : ಅನಂತಪುರ, ಕೃಷ್ಣಾ, ಗುಂಟೂರು, ಗೋದಾವರಿ
ಮಹಾರಾಷ್ಟ್ರ : ಚಂದ್ರಾಪುರ
ಕರ್ನಾಟಕ : ರಾಯಚೂರು, ಕಲ್ಬುರ್ಗಿ
ಒಡಿಶಾ : ಸಂಬಲ್ಪುರ್
ಪ್ರಪಂಚ
ರಷ್ಯಾ (ಅತಿ ಹೆಚ್ಚು ವಜ್ರದ ನಿಕ್ಷೇಪ ಹೊಂದಿರುವ ಮತ್ತು ಉತ್ಪಾದಿಸುವ ದೇಶ) – ಯಾಕುಟಿಯ (ಅಲ್ರೋಸಾ)
ಆಸ್ಟ್ರೇಲಿಯಾ (ಕೆಂಪು ವಜ್ರಗಳಿಗೆ ಪ್ರಸಿದ್ಧಿ) – ಆರ್ಗೈಲ್ ಸರೋವರ
ಬೋಟ್ಸ್ವಾನಾ – ಗ್ಯಾಬರೋನ್
ಕಾಂಗೋ – ಕಿನ್ಸ್ವೆರೆ, ಸೊಮಿಕಾ ಸಾರ್ಲ್
ದಕ್ಷಿಣ ಆಫ್ರಿಕಾ – ಕಿಂಬರ್ಲಿ
ವಜ್ರವನ್ನು ಆಭರಣಗಳ ತಯಾರಿಕೆಯಲ್ಲಿ, ಗಾಜು ಮತ್ತು ವಜ್ರಗಳನ್ನು ಕತ್ತರಿಸಲು, ಘರ್ಷಣೆ ಕಡಿಮೆ ಮಾಡಲು ಬಳಸುವ ಬಾಲ್ ಬೇರಿಂಗ್‍ಗಳಾಗಿ ಹೀಗೆ ಮುಂತಾದ ಕೆಲಸಗಳಲ್ಲಿ ಬಳಸುವರು.
ಗ್ರಾಫೈಟ್
ಇಂಗಾಲದ ರೂಪಗಳಲ್ಲೊಂದಾದ ಗ್ರಾಫೈಟ್ ವಿದ್ಯುತ್ ವಾಹಕವಾದ (ವಿದ್ಯುತ್ತನ್ನು ತನ್ನ ಮೂಲಕ ಹರಿಯಬಿಡುವ) ಏಕೈಕ ಅಲೋಹವಾಗಿದೆ. ಎಲೆಕ್ಟ್ರಾನ್ಗಳು ಸ್ವತಂತ್ರವಾಗಿ ಚಲಿಸಲು ಅವಕಾಶವಿರುವ ಇದರ ಗುಣಲಕ್ಷಣವೇ ಗ್ರಾಫೈಟ್ ವಿದ್ಯುದ್ವಾಹಕವಾಗಲು ಕಾರಣವಾಗಿದೆ.
ಆಂಥ್ರಸೈಟ್‌ಗಿಂತಲೂ ಉನ್ನತವಾಗಿರುವ ಇದನ್ನು ಮೆಟಾ-ಆಂಥ್ರಸೈಟ್ ಎನ್ನುವರು. ಇದನ್ನು ಸುಡುವುದು ಕಷ್ಟವಾಗಿರುವುದರಿಂದ ಇದನ್ನು ಇಂಧನದ ರೂಪದಲ್ಲಿ ಬಳಸುವುದಿಲ್ಲ.
ಇಂಗಾಲದಿಂದ ಮಾಡಿದ ನಾರನ್ನು ಗ್ರಾಫೈಟ್ ಫೈಬರ್ ಎನ್ನುವರು.
ಗ್ರಾಫೈಟ್ ಅತ್ಯಂತ ನುಣುಪಾಗಿರಲು ಅದರ ಸೂಪರ್ ಲ್ಯೂಬ್ರಿಕೆಂಟ್ ಗುಣವೇ ಕಾರಣ.
ಬೊರಾನ್ ನೈಟ್ರೈಡ್ ಗ್ರ್ಯಾಫೈಟ್‌ನಂತೆಯೇ ಗುಣಗಳನ್ನು ಹೊಂದಿರುವ ಕಾರಣ ಇದನ್ನು ಬಿಳಿಯ ಗ್ರ್ಯಾಫೈಟ್ ಎನ್ನುವರು.
ಆಂಧ್ರಪ್ರದೇಶ, ಛತ್ತೀಸ್ಘರ್, ಅರುಣಾಚಲ ಪ್ರದೇಶಗಳು ಭಾರತದಲ್ಲಿಯೇ ಅತೀ ಹೆಚ್ಚು ಗ್ರಾಫೈಟ್ ಉತ್ಪಾದಿಸುವ ರಾಜ್ಯಗಳಾಗಿವೆ.
ಪ್ರಪಂಚ
ಚೀನಾ (ಅತಿ ಹೆಚ್ಚು ಗ್ರಾಫೈಟ್ ನಿಕ್ಷೇಪವುಳ್ಳ ಮತ್ತು ಉತ್ಪಾದಿಸುವ ದೇಶ), ಬ್ರೆಜಿಲ್, ಕೆನಡಾ, ಭಾರತ ದೇಶಗಳು ನಂತರದ ಸ್ಥಾನದಲ್ಲಿವೆ.
ಉಕ್ಕು ತಯಾರಿಕೆ, ವಾಹನಗಳ ಬ್ರೇಕ್ ಲೈನಿಂಗ್‌ಗಳು ಹಾಗೂ ಎರಕಾಗಾರದಲ್ಲಿ ಬಳಸಲಾಗುವ ಲೂಬ್ರಿಕಂಟ್ ಗಳಲ್ಲಿ, ಪೆನ್ಸಿಲ್‌ಗಳಲ್ಲಿ, ಝಿಂಕ್-ಇಂಗಾಲ ಬ್ಯಾಟರಿಗಳು, ವಿದ್ಯುತ್ ಮೋಟಾರ್ ಬ್ರಷ್‌ಗಳು ಮುಂತಾದವುಗಳಲ್ಲಿ ಬಳಸಲಾಗುತ್ತದೆ.
ಗ್ರಾಫಿನ್
ಗ್ರಾಫೈಟ್ ನಿಂದ ನೈಸರ್ಗಿಕವಾಗಿ ದೊರೆಯುವ ಉತ್ಪನ್ನ ಗ್ರಾಫಿನ್. ಕಾರ್ಬನ್ ನ ಒಂದೇ ಅಣುವಿನಿಂದ ರಚನೆಯಾಗಿದ್ದರೂ ಇದನ್ನು ವಜ್ರಕ್ಕಿಂತಲೂ ಅತಿ ಕಠಿಣ ವಸ್ತು ಎನ್ನುವರು.
ಹಗುರ, ಕಠಿಣ ಮತ್ತು ಅತ್ಯುತ್ತಮ ವಿದ್ಯುದ್ವಾಹಕ ಗುಣ ಹೊಂದಿರುವ ಇದನ್ನು ಬಾಹ್ಯಾಕಾಶ ನೌಕೆಗಳು, ವಿದ್ಯುತ್ ಉಪಕರಣಗಳು, ರಕ್ಷಣಾ ಕವಚಗಳು, ಗಟ್ಟಿ ಕೈಚೀಲಗಳು ಹೀಗೆ ಅನೇಕ ಕೆಲಸಗಳಿಗೆ ಉಪಯೋಗಿಸಿಕೊಳ್ಳುವ ಸಾಧ್ಯತೆಯಿದೆ.
ಅಭ್ರಕ
ಮೈಕಾ ಎಂಬುದು ಅಭ್ರಕದ ಅದಿರಾಗಿದೆ. ಮೈಕಾ ಎಂದರೆ ಲ್ಯಾಟಿನ್ ನಲ್ಲಿ ಹೊಳೆಯುವುದು ಎಂದರ್ಥ. ಅಭ್ರಕವನ್ನು ಕಾಗೆಬಂಗಾರ ಎನ್ನುವರು
ಅಭ್ರಕದಲ್ಲಿ ಶ್ವೇತ ಅಭ್ರಕ (ಪೊಟ್ಯಾಷ್ ಅಭ್ರಕ), ಕಪ್ಪು ಅಭ್ರಕ (ಮೆಗ್ನೀಷಿಯಾ ಅಭ್ರಕ), ಲಿಪಿಡೋಟೈಟ್ ಅಭ್ರಕ, ಪ್ಲೋಗೋಟೈಟ್ ಅಭ್ರಕ (ಶಿಲಾರಾಳ ಅಭ್ರಕ), ಕ್ಲಿಂಟೊನೈಟ್, ಬಯೊಟೈಟ್, ಜಿನ್ವಾಲ್ಡೈಟ್, ಮುಸ್ಕೊವೈಟ್, ಪೆಗ್ಮಾಟೈಟ್ ಎಂಬ ವಿಧಗಳಿವೆ.
ಅಭ್ರಕವು ಷಡ್ಭುಜಾಕೃತಿಯ ಅಣು ರಚನೆಯನ್ನು ಹೊಂದಿದೆ. ಅಭ್ರಕಗಳನ್ನು ಡೈಯೊಕ್ಟಹೆಡ್ರಲ್ (Y = 4) ಮತ್ತು ಟ್ರೈಯೊಕ್ಟಾಹೆಡ್ರಲ್ (Y = 6) ಎಂದು ವರ್ಗೀಕರಿಸಲಾಗಿದೆ.
ಅಭ್ರಕವು ಅಗ್ನಿಶಿಲೆ, ಪದರು ಶಿಲೆ ಮತ್ತು ರೂಪಾಂತರ ಶಿಲೆ ಗಳಲ್ಲೆ ಕಂಡು ಬರುತ್ತದೆ.
ಅಭ್ರಕದ ಮುಖ್ಯ ಗುಣಗಳು ಶಾಖ ನಿರೋಧಕತೆ ಮತ್ತು ಸ್ಥಿತಿ ಸ್ಥಾಪಕತ್ವತೆ
ಭಾರತದಲ್ಲಿ ಶ್ವೇತ ಅಭ್ರಕವು ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಫಲಕ ರೂಪದಲ್ಲಿ ದೊರೆಯುತ್ತದೆ.
ಆಂಧ್ರಪ್ರದೇಶ ಅತಿಹೆಚ್ಚು ಅಭ್ರಕವವನ್ನು ಉತ್ಪಾದಿಸುತ್ತದೆ. ನಂತರದ ಸ್ಥಾನದಲ್ಲಿ ರಾಜಸ್ತಾನ, ಝಾರ್ಖಂಡ್ ಮತ್ತು ಬಿಹಾರ ರಾಜ್ಯಗಳಿವೆ.
ಆಂಧ್ರಪ್ರದೇಶ - ವರಂಗಲ್, ವಿಶಾಖ ಪಟ್ಟಣ, ಅನಂತಪುರ
ಝಾರ್ಖಾಂಡ್ – ಕೋಡರ್ಮ, ಗಿರಿದ್ಹಿ
ಬಿಹಾರ - ನವಾಡ
ರಾಜಸ್ತಾನ – ಜೈಪುರ, ಉದಯಪುರ
ಪ್ರಪಂಚ
ಭಾರತದಲ್ಲಿ ಅಭ್ರಕದ ನಿಕ್ಷೇಪವು ಅನೇಕ ರಾಜ್ಯಗಳಲ್ಲಿ ಹಂಚಿಕೆಯಾಗಿದೆ, ಭಾರತವು ಪ್ರಪಂಚದಲ್ಲಿ ಅಭ್ರಕದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ನಿಕ್ಷೇಪದಲ್ಲಿ 2ನೇ ಸ್ಥಾನದಲ್ಲಿದೆ. ಪ್ರಪಂಚದ ಒಟ್ಟು ಉತ್ಪಾದನೆಯ ಶೇ.60 ರಷ್ಟು ಉತ್ಪಾದಿಸುತ್ತದೆ.
ಚೀನಾ, ಬ್ರೆಜಿಲ್ ಮತ್ತು ಬೆಲ್ಜಿಯಂಗಳು ಅಪಾರ ಪ್ರಮಾಣದ ಅಭ್ರಕದ ನಿಕ್ಷೇಪ ಹೊಂದಿರುವ ಮತ್ತು ಉತ್ಪಾದನೆಯ ದೇಶಗಳಾಗಿವೆ.
ಅಭ್ರಕವನ್ನು ಸೌಂದರ್ಯ ವರ್ಧಕಗಳು, ಆಭರಣಗಳ ತಯಾರಿಕೆ, ಪೇಂಟ್, ಕೃತಕ ರಬ್ಬರ್, ಔಷಧಿಗಳ ತಯಾರಿಕೆಯಲ್ಲಿ ಬಳಸುವರು.
ಅಭ್ರಕವು ಅತಿಹೆಚ್ಚು ಡೈ ಎಲೆಕ್ಟ್ರಿಕ್ ಬಲ ಮತ್ತು ಉತ್ತಮ ರಾಸಾಯನಿಕ ಸ್ಥಿರತೆಯನ್ನು ಹೊಂದಿದ್ದು, ಕೆಪಾಸಿಟರ್ ಗಳು ಮತ್ತು ರೇಡಿಯೋ ಆವೃತ್ತಿಗಳಲ್ಲಿ ಬಳಸುತ್ತಾರೆ.
ವಿದ್ಯುತ್ ಉಪಕರಣಗಳಲ್ಲಿ, ಕಮ್ಯುಟೇಟರ್ ಗಳ ಮಧ್ಯದಲ್ಲಿ, ನೇರ ವಿದ್ಯುತ್ ಮೋಟಾರ್ ಗಳಲ್ಲಿ ಇನ್ನೂ ಮುಂತಾದವುಗಳಲ್ಲಿ ಬಳಸುವರು.
ಅಭ್ರಕದ ಪಾರದರ್ಶಕ ಹಾಳೆಗಳನ್ನು ಐಸಿಂಗ್ ಗಾಜು ಎನ್ನುವರು. ಇದನ್ನು ಬಾಯ್ಲರ್ ಗಳಲ್ಲಿ ಮತ್ತು ಲಾಟೀನುಗಳಲ್ಲಿ ಬಳಸಲಾಗುತ್ತಿತ್ತು, ಏಕೆಂದರೆ ಹೆಚ್ಚಿನ ಉಷ್ಣತೆ ಇದ್ದಾಗ ಗಾಜಿನಂತೆ ಅಭ್ರಕ ಒಡೆಯುವುದಿಲ್ಲ.
ಅಭ್ರಕವನ್ನು ತೆಳುವಾದ ಹಾಳೆಯಾಗಿ ಮಾಡಲು ಸಾಧ್ಯವಿರುವುದರಿಂದ ಇದನ್ನು ಅತಿ ಕಡಿಮೆ ಹಾಯುವ ಆಲ್ಫಾ ಕಣಗಳ ಪತ್ತೆ ಹಚ್ಚುವಿಕೆಯಲ್ಲಿ ಉಪಯೋಗಿಸುತ್ತಾರೆ.
ಕೆಲವು ಟೂತ್ಪೇಸ್ಟ್ ಗಳಲ್ಲಿ ಪುಡಿಮಾಡಿದ ಬಿಳಿ ಅಭ್ರಕವನ್ನು ಬಳಸುತ್ತಾರೆ. ಇದು ಹಲ್ಲುಗಳ ಮೇಲ್ಮೈಗೆ ಹೊಳಪನ್ನು ನೀಡುವುದಕ್ಕೆ ಸಹಾಯ ಮಾಡುತ್ತದೆ.
ಅಭ್ರಕದ ಹೊಳಪು, ವೇಷ ಭೂಷಣಗಳಲ್ಲಿ ಬಳಕೆಯಾಗುವುದರ ಮೂಲಕ ಚರ್ಮಕ್ಕೆ ಪಾರದರ್ಶಕ ಹೊಳಪನ್ನು ನೀಡಿ ನೈಜತೆಯನ್ನು ಮಸುಕು ಮಾಡುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ