ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳು
ದ್ವಿದಳ ಧಾನ್ಯಗಳು
ದ್ವಿದಳ ಧಾನ್ಯಗಳು ವಾತಾವರಣದಲ್ಲಿರುವ ಸಾರಜನಕವನ್ನು ಭೂಮಿಗೆ ಸೇರಿಸುವುದರಿಂದ ಇವುಗಳನ್ನು ಭೂಮಿಯ ಗೊಬ್ಬರ ಕಾರ್ಖಾನೆಗಳೆನ್ನುವರು
ಉತ್ತರ ಪ್ರದೇಶದ ಕಾನ್ಪುರದಲ್ಲಿ ದ್ವಿದಳ ಧಾನ್ಯಗಳ ಸಂಶೋಧನಾ ಕೇಂದ್ರವಿದೆ.
ಭಾರತವು ಅತಿ ಹೆಚ್ಚು ದ್ವಿದಳ ಧಾನ್ಯಗಳನ್ನು ಬೆಳೆಯುವ ದೇಶವಾಗಿದ್ದರೂ ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತದೆ
ತೊಗರಿ
ತೊಗರಿಯ ವೈಜ್ಞಾನಿಕ ಹೆಸರು ಕ್ಯಾಜನಸ್ ಕ್ಯಾಜನ್
ತೊಗರಿ ಉಷ್ಣವಲಯದ ಬೆಳೆಯಗಿದ್ದು, ಇದನ್ನು ಬೆಳೆಯಲು ಸು. 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು ವಾರ್ಷಿಕವಾಗಿ 40-80 ಸೆಂ.ಮೀ ಮಳೆ ಅವಶ್ಯಕವಾಗಿದೆ.
ಕಲುಬುರ್ಗಿಯಲ್ಲಿ ತೊಗರಿ ಸಂಶೋಧನಾ ಕೇಂದ್ರವಿದೆ
ಭಾರತದಲ್ಲಿ ದ್ವಿದಳ ಧಾನ್ಯಗಳಲ್ಲಿ ತೊಗರಿಯನ್ನೇ ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ತೊಗರಿಯು ಖಾರಿಫ್ (ಮುಂಗಾರು) ಮತ್ತು ರಬಿ (ಹಿಂಗಾರು) ಎರಡು ಬೆಳೆಯೂ ಆಗಿದೆ
ಮಹಾರಾಷ್ಟ್ರ ತೊಗರಿ ಬೆಳೆಯುವಲ್ಲಿ ಮೊದಲ ಸ್ಥಾನದಲ್ಲಿದ್ದು ನಂತರದಲ್ಲಿ ಮಧ್ಯಪ್ರದೇಶ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಿವೆ
ಪ್ರಪಂಚದಲ್ಲಿ ಭಾರತವು ಅತಿ ಹೆಚ್ಚು ತೊಗರಿಯನ್ನು ಉತ್ಪಾದನೆ ಮಾಡುತ್ತದೆ.
ಕಡಲೆ
ಸಿಸೆರ್ ಏರಿಯೇಟಿನಮ್ ಕಡಲೆಯ ವೈಜ್ಞಾನಿಕ ಹೆಸರಾಗಿದೆ
ಕಡಲೆಯು ರಬಿ ಬೆಳೆಯಾಗಿದ್ದು. ಇದನ್ನು ಬೆಳೆಯಲು 20-25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 35-50 ಸೆಂ.ಮೀ ವಾರ್ಷಿಕ ಮಳೆ ಬೇಕಾಗುತ್ತದೆ.
ಕಡಲೆಯನ್ನು ಬೆಳೆಯಲು ಮೆಕ್ಕಲು ಮಣ್ಣು ಸೂಕ್ತವಾದುದಾಗಿದೆ
ಮಧ್ಯಪ್ರದೇಶವು ಅತಿ ಹೆಚ್ಚು ಕಡಲೆಯನ್ನು ಬೆಳೆಯುತ್ತದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕಗಳು ನಂತರದ ಸ್ಥಾನದಲ್ಲಿವೆ
ಹೆಸರು
ಹೆಸರಿನ ವೈಜ್ಞಾನಿಕ ಹೆಸರು ವಿಗ್ನಾ ರೇಡಿಯೇಟಾ
ಹೆಸರು ಸಮಶಿತೋಷ್ಣ ವಲಯದ ಬೆಳೆಯಾಗಿದ್ದು ಖಾರಿಫ್ (ಮುಂಗಾರು) ಮತ್ತು ರಬಿ (ಹಿಂಗಾರು) ಎರಡೂ ಬೆಳೆಯಾಗಿದೆ.
ಆಂದ್ರಪ್ರದೇಶ ಅತಿ ಹೆಚ್ಚು ಹೆಸರು ಬೆಳೆಯುವ ರಾಜ್ಯವಾಗಿದ್ದು, ಬಿಹಾರ್, ಗುಜರಾತ್ ಕರ್ನಾಟಕ ನಂತರದ ಸ್ಥಾನದಲ್ಲಿವೆ
ಅವರೆ
ಅವರೆಯ ವೈಜ್ಞಾನಿಕ ಹೆಸರು ಲೆನ್ಸ್ ಕ್ಯೂರಿನೇರಿಸ್
ಅವರೆ ಸಮಶೀತೋಷ್ಣ ವಲಯದ ಬೆಳೆಯಾಗಿದು, ಇದು ರಬಿ (ಹಿಂಗಾರು) ಬೆಳೆಯಾಗಿದೆ
ಉತ್ತರ ಪ್ರದೇಶ ಅತಿ ಹೆಚ್ಚು ಅವರೆ ಬೆಳೆಯುವ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಬಿಹಾರ ಮತ್ತು ಪ.ಬಂಗಾಳಗಳಿವೆ.
ಪ್ರಪಂಚದಲ್ಲೆಲ್ಲಾ ಭಾರತವೇ ಅತಿ ಹೆಚ್ಚು ಅವರೆ ಬೆಳೆಯುವ ದೇಶವಾಗಿದೆ
ಉದ್ದು
ಉದ್ದಿನ ವೈಜ್ಞಾನಿಕ ಹೆಸರು ವಿಗ್ನಾ ಮುಂಗೋ
ಇದನ್ನು ಸಾಮಾನ್ಯವಾಗಿ ಮಿಶ್ರಬೆಳೆಯಾಗಿ ಬೆಳೆಯುತ್ತಾರೆ
ಉದ್ದು ಖಾರಿಫ್ (ಮುಂಗಾರು) ಬೆಳೆಯಾಗಿದೆ.
ಉದ್ದು ಬೆಳೆಯುವಲ್ಲಿ ಆಂದ್ರಪ್ರದೇಶ ಮೊದಲ ಸ್ಥಾನದಲ್ಲಿದ್ದು ನಂತರದಲ್ಲಿ ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿವೆ.
ಎಣ್ಣೆಕಾಳುಗಳು
ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ.
ತೆಲಂಗಾಣದ ಹೈದ್ರಾಬಾದಿನಲ್ಲಿ ಎಣ್ಣೆಕಾಳುಗಳ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಯಿಲ್ ರಿಸರ್ಚ್ (ಐ.ಐ.ಐ.ಆರ್) ಸಂಶೋಧನಾ ಕೇಂದ್ರವಿದೆ.
9ನೇ ಪಂಚವಾರ್ಷಿಕ ಯೋಜನೆಯಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಹಳದಿ ಕ್ರಾಂತಿಯನ್ನು ಜಾರಿಗೆ ತರಲಾಯಿತು.
ಎಣ್ಣೆಕಾಳುಗಳ ಉತ್ಪಾದನೆಗೆ ಸಂಬಂಧಿಸಿದಂತೆ 1986 ರಲ್ಲಿ ಟೆಕ್ನಾಲಜಿ ಮಿಷನ್ ಫರ್ ಆಯಿಲ್ ಸೀಡ್ಸ್ ಪ್ರೊಡಕ್ಷನ್ ಯೋಜನೆಯನ್ನು ಹಾಕಿಕೊಳ್ಳಲಾಯಿತು.
ಸೋಯಾಬೀನ್
ಸೋಯಾಬೀನ್ ನ ವೈಜ್ಞಾನಿಕ ಹೆಸರು ಗ್ಲೈಸಿನ್ ಮ್ಯಾಕ್ಸ್.
ಸೋಯಾ ಬೀಜವನ್ನು ಉತ್ತರ ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಮತ್ತು ಅದರ ಎಣ್ಣೆಯನ್ನು ಉತ್ತರ ಭಾರತದಲ್ಲಿ ಹೆಚ್ಚಾಗಿ ಬಳಸುತ್ತಾರೆ.
ಸೋಯಾವನ್ನು ಮುಖ್ಯವಾಗಿ ಖಾರಿಫ್ ಬೆಳೆಯಾಗಿ ಬೆಳೆಯಲಾಗುತ್ತದೆ.
15-25 ಉಷ್ಣಾಂಶ ಹಾಗೂ ವಾರ್ಷಿಕವಾಗಿ ಕನಿಷ್ಟ 50-80 ಸೆಂ.ಮೀ ಮಳೆಯು ಸೋಯಾಬೀನ್ ಬೆಳೆಯಲು ಅನುಕೂಲಕರವಾದ ವಾತಾವರಣವಾಗಿದೆ.
ಸಾಧಾರಣವಾಗಿ ಮೆಕ್ಕಲು ಮಣ್ಣು ಸೋಯಾಬೀನ್ ಬೆಳೆಯಲು ಸೂಕ್ತವಾದುದಾದರೂ ಕಪ್ಪು ಮತ್ತು ಕೆಂಪುಮಣ್ಣಿನಲ್ಲಿಯೂ ಅದನ್ನು ಬೆಳೆಯಲಾಗುತ್ತದೆ.
ಮಧ್ಯಪ್ರದೇಶ ಅತಿ ಹೆಚ್ಚು ಸೋಯಾಬೀನ್ ಬೆಳೆಯುವ ರಾಜ್ಯವಾಗಿದ್ದು, ಮಹಾರಾಷ್ಟ್ರ, ರಾಜಸ್ತಾನ, ಆಂದ್ರಪ್ರದೇಶ ಮತ್ತು ಕರ್ನಾಟಕಗಳು ನಂತರದ ಸ್ಥಾನದಲ್ಲಿವೆ.
ಪ್ರಮುಖ ಸೋಯಾಬೀನ್ ಬೆಳೆಯುವ ದೇಶಗಳು : ಅಮೆರಿಕಾ ಸಂಯುಕ್ತ ಸಂಸ್ಥಾನ, ಬ್ರೆಜಿಲ್, ಅರ್ಜೆಂಟೈನಾ, ಚೀನಾ , ಭಾರತ
ಶೇಂಗಾ (ಕಡಲೆಕಾಯಿ)
ಬಡವರ ಬಾದಾಮಿ ಎಂದು ಪ್ರಸಿದ್ಧಿಯಾದ ಶೇಂಗಾದ ವೈಜ್ಞಾನಿಕ ಹೆಸರು ಅರಾಕಿಸ್ ಹೈಪೋಗಾಯಿ
20-30 ಉಷ್ಣಾಂಶ ಹಾಗೂ ವಾರ್ಷಿಕವಾಗಿ 50-100 ಸೆಂ.ಮೀ ಮಳೆಯು ಶೇಂಗಾ ಬೆಳೆಯಲು ಅನುಕೂಲಕರವಾದ ವಾತಾವರಣವಾಗಿದೆ.
ಶೇಂಗಾವನ್ನು ಖಾರಿಫ್ (ಮುಂಗಾರು) ಮತ್ತು ರಬಿ (ಹಿಂಗಾರು) 2 ಕಾಲಗಳ ಬೆಳೆಯಾಗಿ ಬೆಳೆಯಲಾಗುತ್ತದೆ.
ಶೇಂಗಾವನ್ನು ಬೆಳೆಯಲು ಕಪ್ಪುಮಣ್ಣು ಸೂಕ್ತವಾಗಿದ್ದು, ಮೆಕ್ಕಲು ಮತ್ತು ಕೆಂಪುಮಣ್ಣಿನಲ್ಲಿಯೂ ಬೆಳೆಯಬಹುದಾಗಿದೆ
ಗುಜರಾತ್ ಶೇಂಗಾ ಬೆಳೆಯುವಲ್ಲಿ ಮೊದಲ ಸ್ಥಾನದಲ್ಲಿದ್ದರೆ ನಂತರದಲ್ಲಿ ಆಂಧ್ರಪ್ರದೇಶ, ತಮಿಳನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಿವೆ
ಪ್ರಮುಖ ಶೇಂಗಾ ಬೆಳೆಯುವ ದೇಶಗಳು : ಭಾರತ, ಚೀನಾ, ನೈಜೀರಿಯಾ, ಅಮೆರಿಕಾ ಸಂಯುಕ್ತ ಸಂಸ್ಥಾನ
ಸೂರ್ಯಕಾಂತಿ
ಸೂರ್ಯಕಾಂತಿಯ ವೈಜ್ಞಾನಿಕ ಹೆಸರು ಹೀಲಿಯಂತಸ್. ಇದರ ಮೂಲಸ್ಥಾನ ಉತ್ತರ ಅಮೆರಿಕಾ
ಸೂರ್ಯಕಾಂತಿ ಖಾರಿಫ್ (ಮುಂಗಾರು) ಮತ್ತು ರಬಿ (ಹಿಂಗಾರು) 2 ಬೆಳೆಯೂ ಆಗಿದೆ.
15-25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು ವಾರ್ಷಿಕವಾಗಿ 50-70 ಸೆಂ.ಮೀ ಮಳೆ ಈ ಬೆಳೆ ಬೆಳೆಯಲು ಸೂಕ್ತವಾದ ವಾತಾವರಣವಾಗಿದೆ.
ಸೂರ್ಯಕಾಂತಿಯನ್ನು ಖಾರಿಫ್ ಮತ್ತು ರಬಿ ಎರಡೂ ಬೆಳೆಗಳಾಗಿ ಬೆಳೆಯಬಹುದಾಗಿದೆ
ಕರ್ನಾಟಕ ಅತಿಹೆಚ್ಚು ಸೂರ್ಯಕಾಂತಿ ಬೆಳೆಯುವ ರಾಜ್ಯವಾಗಿದೆ. ಮಹಾರಾಷ್ಟ್ರ, ಆಂದ್ರಪ್ರದೇಶ ಮತ್ತು ಹರಿಯಾಣ ನಂತರದ ಸ್ಥಾನದಲ್ಲಿವೆ
ಪ್ರಮುಖ ಸೂರ್ಯಕಾಂತಿ ಬೆಳೆಯುವ ದೇಶಗಳು : ರಷ್ಯಾ, ಚೀನಾ ಮತ್ತು ಅರ್ಜೆಂಟೈನಾ
ಹರಳು/ಔಡಲ
ರೆಸಿನಸ್ ಕಮ್ಯೂನಿಸ್ ಔಡಲದ ವೈಜ್ಞಾನಿಕ ಹೆಸರು
ಉಷ್ಣವಲಯ ಮತ್ತು ಉಪಉಷ್ಣವಲಯಗಳೆರಡರಲ್ಲೂ ಈ ಬೆಳೆಯನ್ನು ಬೆಳೆಯಲಾಗುತ್ತದೆ. 20-25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು ವಾರ್ಷಿಕವಾಗಿ 50-75 ಸೆಂ.ಮೀ ಮಳೆ ಈ ಬೆಳೆಗೆ ಸೂಕ್ತವಾದ ವಾತಾವರಣವಾಗಿದೆ.
ಇದನ್ನು ಉತ್ತರ ಭಾರತದಲ್ಲಿ ರಬಿ (ಹಿಂಗಾರು) ಬೆಳೆಯಾಗಿ ಮತ್ತು ದಕ್ಷಿಣ ಭಾರತದಲ್ಲಿ ಖಾರಿಫ್ (ಮುಂಗಾರು) ಬೆಳೆಯಾಗಿ ಬೆಳೆಯುವರು.
ಔಡಲ ಬೆಳೆಯುವಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳು ನಂತರದ ಸ್ಥಾನದಲ್ಲಿವೆ
ಸಾಸಿವೆ ಮತ್ತು ರ್ಯಾಪ್ ಬೀಜಗಳು
ಸಾಸಿವೆಯ ವೈಜ್ಞಾನಿಕ ಹೆಸರು ಬ್ರಾಸಿಕ ಮತ್ತು ರ್ಯಾಪ್ ನ ವೈಜ್ಞಾನಿಕ ಹೆಸರು ಬ್ರಾಸಿಕ ನೇಪಸ್. ಇವೆರೆಡು ಬೀಜಗಳು ಬ್ರಾಸಿಕ ಜೀನಸ್ ಕುಟುಂಬಕ್ಕೆ ಸೇರಿದ ಸಸ್ಯಗಳಾಗಿವೆ.
ಈ ಬೀಜಗಳ ಎಣ್ಣೆಯನ್ನು ಉತ್ತರ ಭಾರತದಲ್ಲಿ ಹೆಚ್ಚಾಗಿ ಬಳಸುತ್ತಾರೆ
ಸಾಸಿವೆ ಮತ್ತು ರ್ಯಾಪ್ ಗಳೆರಡು ರಬಿ (ಹಿಂಗಾರು) ಬೆಳೆಗಳಾಗಿವೆ.
10-20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು ವಾರ್ಷಿಕವಾಗಿ 50-80 ಸೆಂ.ಮೀ ಮಳೆಯು ಈ ಬೆಳೆಗಳು ಬೆಳೆಯಲು ಸೂಕ್ತವಾತಾವರಣವಾಗಿದೆ.
ರಾಜಸ್ಥಾನ ಈ ಬೆಳೆಗಳನ್ನು ಬೆಳೆಯುವಲ್ಲಿ ಮೊದಲ ಸ್ಥಾನದಲ್ಲಿದ್ದರೆ. ಹರ್ಯಾಣ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳು ನಂತರದ ಸ್ಥಾನದಲ್ಲಿವೆ.
ಎಳ್ಳು
ಎಳ್ಳಿನ ವೈಜ್ಞಾನಿಕ ಹೆಸರು ಸೀಸನಮ್ ಇಂಡಿಕಮ್
ಎಳ್ಳು ಖಾರಿಫ್ (ಮುಂಗಾರು) ಬೆಳೆಯಾಗಿದೆ. ಸು 20-25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು ವಾರ್ಷಿಕವಾಗಿ 40-60 ಸೆಂ.ಮೀ ಮಳೆ ಎಳ್ಳು ಬೆಳೆಯಲು ಅನುಕೂಲಕರವಾದ ವಾತಾವರಣವಾಗಿದೆ.
ಎಳ್ಳು ಬೆಳೆಯುವಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಧ್ಯಪ್ರದೇಶಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ಚೀನಾ ಅತಿ ಹೆಚ್ಚು ಎಳ್ಳು ಬೆಳೆಯುವ ದೇಶವಾಗಿದೆ. ಭಾರತ 2ನೇ ಸ್ಥಾನದಲ್ಲಿದೆ
ಕುಸುಬೆ
ಕುಸುಬೆಯ ವೈಜ್ಞಾನಿಕ ಹೆಸರು ಕಾರ್ಥಮಸ್ ಟಿಂಕ್ಟೋರಿಯಸ್
ಸಮಶೀತೋಷ್ಣ ವಲಯದ ಬೆಳೆಯಾಗಿದ್ದು 15-25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 50-80 ಸೆಂ.ಮೀ ಮಳೆ ಬೀಳುವ ವಾತಾವರಣ ಇದಕ್ಕೆ ಸೂಕ್ತವಾಗಿರುತ್ತದೆ.
ಮಹಾರಾಷ್ಟ್ರವು ಅತಿ ಹೆಚ್ಚು ಕುಸುಬೆ ಬೆಳೆಯುವ ರಾಜ್ಯವಾಗಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶಗಳು ನಂತರದ ಸ್ಥಾನದಲ್ಲಿವೆ.
ಪ್ರಪಂಚದ ಪ್ರಮುಖ ಕುಸುಬೆ ಬೆಳೆಯುವ ದೇಶಗಳು : ಭಾರತ, ಚೀನಾ, ಇರಾನ್, ಈಜಿಪ್ಟ್, ಇಟಲಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ