ಖನಿಜ ಸಂಪನ್ಮೂಲಗಳು - ಲೋಹ ಖನಿಜಗಳು 1

 ಖನಿಜ ಸಂಪನ್ಮೂಲಗಳು

ಲೋಹ ಖನಿಜಗಳು - ಕಬ್ಬಿಣ ಖನಿಜಗಳು

ಆಯಸ್ಕಾಂತದಿಂದ ಆಕರ್ಷಿಸಲ್ಪಡುವ ಗುಣವುಳ್ಳ ಲೋಹದ ಖನಿಜಗಳನ್ನು ಕಬ್ಬಿಣದ ಅದಿರಿನ ಖನಿಜಗಳು ಎನ್ನುವರು.

ಕಬ್ಬಿಣ

ಭೂಮಿಯ ಮೇಲ್ಪದರದಲ್ಲಿ ಬಾಕ್ಸೈಟ್ (ಅಲ್ಯೂಮಿನಿಯಂ) ಅದಿರಿನ ನಂತರ ಅತೀ ಹೆಚ್ಚು ಪ್ರಮಾಣದಲ್ಲಿ ಸಿಗುವುದು ಕಬ್ಬಿಣದ ಅದಿರು. ಭೂಮಿಯ ಮೇಲ್ಪದರದಲ್ಲಿ ಸಿಗುವ ಖನಿಜಗಳ ಪೈಕಿ ಕಬ್ಬಿಣದ ಅದಿರಿನ ಪ್ರಮಾಣ 4%.

ಕಬ್ಬಿಣದ ಅದಿರು ಕಲ್ಲುಸಿಲಿಕೇಟ್ಮಣ್ಣುಕ್ಯಾಲ್ಷಿಯಂ ಕಾರ್ಬೋನೇಟ್ಫಾಸ್ಪೇಟ್ಸಲ್ಫರ್ ಮುಂತಾದ ಅಶುದ್ಧ ವಸ್ತುಗಳಿಂದ ಕೂಡಿರುತ್ತದೆ.

ಪ್ರಪಂಚದಲ್ಲಿ ಕಬ್ಬಿಣ ನಿಕ್ಷೇಪದಲ್ಲಿ ರಷ್ಯಾದ ನಂತರ ಭಾರತವು 2ನೇ ಸ್ಥಾನದಲ್ಲಿದೆ. ಆದರೆ ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದೆ.

ಕಬ್ಬಿಣದ ಅದಿರುಗಳು

ಭಾರತದಲ್ಲಿ ಕರ್ನಾಟಕವು ಮೊದಲ ಮತ್ತು ಝಾರ್ಖಂಡ್ ಎರಡನೇ ಸ್ಥಾನದಲ್ಲಿದ್ದು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಅದಿರಿನ ನಿಕ್ಷೇಪವನ್ನು ಒಳಗೊಂಡಿವೆ.

ಕರ್ನಾಟಕ - ಸಂಡೂರುಕುದುರೆಮುಖಹೊಸಪೇಟೆ

ಝಾರ್ಖಂಡ್ - ಸಿಂಗಭೂಮ್, ಹಜಾರಿಬಾಗ್, ಪಲಮಾವು, ರಾಂಚಿ

ಒಡಿಶಾ  ಕಿಯೋಂಜಾರ್ಮಯೂರ್ ಭಂಜ್ಸುಂದರ್ ಘಡ್ಕಟಕ್

ಛತ್ತಿಸ್ ಘರ್ - ಬಸ್ತಾರ್ದುರ್ಗ್ರಾಯಪುರ್

ಪ್ರಪಂಚದಲ್ಲಿ ಕಬ್ಬಿಣದ ಅದಿರಿನ ಹಂಚಿಕೆ

ಚೀನಾ, ಭಾರತ, ಯು.ಎಸ್.ಎ, ಆಸ್ಟ್ರೇಲಿಯಾ, ರಷ್ಯಾ ದೇಶಗಳು ಅತಿ ಹೆಚ್ಚು ಕಬ್ಬಿಣವನ್ನು ಉತ್ಪಾದಿಸುವ ದೇಶಗಳಾಗಿವೆ

ಯು.ಎಸ್.ಎ (ಪ್ರಪಂಚದಲ್ಲಿಯೇ ಅತ್ಯಂತ ಶುಭ್ರವಾದ ಕಬ್ಬಿಣ ಅದಿರು ಇಲ್ಲಿ ಹೆಚ್ಚಾಗಿ ದೊರೆಯುತ್ತದೆ) - ವ್ಯೋಮಿಂಗ್ವೆಸ್ಟ್ ವರ್ಜಿನಿಯಾಪೆನ್ಸಿಲ್ವೇನಿಯಾಇಲಿನೊಯಿಸ್ಕೆಂಟಕಿ

ಚೀನಾ - ಲಿಯೋನಿಂಗ್, ಕಿಯಾಂಗ್ಸಿ, ಅನ್ವೇಯಿ, ಶಾಂಟುಂಗ್, ಕ್ವಾಂಗ್ಸು, ಹೋನಾನ್, ಚಿಕಿಯಾಂಗ್

ರಷ್ಯಾ  ಮ್ಯಾಗ್ನಿಟೋರಾಸ್ಕ್, ಯೂರಲ್ಸ್ ಪರ್ವತ, ಬೈಕಲ್ ಪ್ರದೇಶ, ಕರ್ಸ್ಕ್, ಕುಲ್ತಾನಾಯ್, ವೋಲ್ಗಾಗ್ರೇಡ್

ಆಸ್ಟ್ರೇಲಿಯಾ  ಮೌಂಟ್ ಗೋಲ್ಡ್ವರ್ಥಿ, ಮೌಂಟ್ ವೇಲ್ಬ್ಯಾಕ್, ಮೌಂಟ್ ಬ್ರೂಸ್, ಮೌಂಟ್ ಟಾಮ್ ಪ್ರೈಸ್

ಸ್ವೀಡನ್  ಕಿರುನ (ಪ್ರಪಂಚದಲ್ಲಿಯೆ ಅತಿ ಹೆಚ್ಚು ಕಬ್ಬಿಣದ ಅದಿರು ಹೊಂದಿರುವ ಪ್ರದೇಶ), ಗಲ್ಲಿವರೆ, ಡೆನ್ನೆಮೊರಾ

ಮ್ಯಾಗ್ನಟೈಟ್

ಕಬ್ಬಿಣದ ಅದಿರುಗಳಲ್ಲಿ ಅತ್ಯುತ್ತಮವಾದುದುಕಪ್ಪು ಅಥವಾ ಕಂದು ಬಣ್ಣದಲ್ಲಿರುವ ಈ ಅದಿರಿನಲ್ಲಿ 75%  ಗಿಂತಲೂ ಅಧಿಕ ಕಬ್ಬಿಣಾಂಶವಿರುತ್ತದೆ.

ಈ ಅದಿರಿನಲ್ಲಿ ವೆನೆಡಿಯಂ, ಕ್ರೋಮಿಯಂ ಮತ್ತು ಬಿಟಾನಿಯಂಗಳು ಅತಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

ಸ್ವಾಭಾವಿಕವಾಗಿ ಅತ್ಯಧಿಕ ಅಯಸ್ಕಾಂತಿಯ ಶಕ್ತಿ ಹೊಂದಿರುವ ಈ ಅದಿರನ್ನು ಲೋಡ್ ಸ್ಟೋನ್ ಎನ್ನುವರು.

ಭಾರತದಲ್ಲಿ ಸಿಗುವ ಎಲ್ಲಾ ಕಬ್ಬಿಣದ ಅದಿರುಗಳ ಪೈಕಿ ಮ್ಯಾಗ್ನಟೈಟ್ ನ ಪ್ರಮಾಣ 14%. ಮತ್ತು ದೇಶದಲ್ಲಿರುವ ಒಟ್ಟು ಮ್ಯಾಗ್ನಟೈಟ್ ಪ್ರಮಾಣದಲ್ಲಿ 90% ಮ್ಯಾಗ್ನಟೈಟ್ ಅದಿರಿನ ನಿಕ್ಷೇಪ ಕರ್ನಾಟಕದಲ್ಲಿಯೇ ದೊರೆಯುತ್ತದೆ.

ಅತಿ ಹೆಚ್ಚು ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿರುವ ರಾಜ್ಯಗಳು ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಕೇರಳ

ಸ್ವೀಡನ್ರಷ್ಯಾಯು.ಎಸ್.ಎಉಕ್ರೈನ್ ಅತಿ ಹೆಚ್ಚು ಮ್ಯಾಗ್ನಟೈಟ್ ಅದಿರು ಹೊಂದಿರುವ ದೇಶಗಳಾಗಿವೆ.

ಹೆಮಟೈಟ್

ಹೆಮಟೈಟ್ ಪ್ರಪಂಚದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ದೊರೆಯುವ ಕಲ್ಲಿದ್ದಲಾಗಿದೆ. ಭಾರತದಲ್ಲಿ ದೊರೆಯುವ ಕಬ್ಬಿಣದ ಅದಿರುಗಳಲ್ಲಿ ಹೆಮಟೈಟ್ ಸು. 80% ಪ್ರಮಾಣದಲ್ಲಿ ದೊರೆಯುತ್ತದೆ. ಉಳಿದ ಅದಿರುಗಳು ಕೇವಲ 20% ಪ್ರಮಾಣದಲ್ಲಿವೆ

ಸು 70% ಕಬ್ಬಿಣಾಂಶವಿರುವ ಈ ಅದಿರನ್ನು ಕೈಗಾರಿಕಾ ಕಬ್ಬಿಣ ಎನ್ನುವರು.

ಕೆಂಪು ಬಣ್ಣದಲ್ಲಿ ದೊರೆಯುವ ಈ ಅದಿರು ಪುಡಿ ಅಥವಾ ಹರಳು ರೂಪದಲ್ಲಿರುತ್ತದೆ. ಹಾಗಾಗಿ ಇದನ್ನು ಕೆಂಪು ಅದಿರು ಎನ್ನುವರು.

ಇತರೇ ಕಬ್ಬಿಣದ ಅದಿರುಗಳಿಗಿಂತ ಹೆಮಟೈಟ್ ಬೇಗ ಕರಗುತ್ತದೆ. ಆದ್ದರಿಂದ ಇದು ಅತಿಹೆಚ್ಚು ಲಾಭದಾಯಕ ಅದಿರಾಗಿದೆ.

ಈ ಅದಿರು ಟೈಟಾನಿಯಂ, ರಂಜಕ, ಸಿಲಿಕಾನ್ ಮತ್ತು ಅಲ್ಯೂಮಿನಿಯಂ ಲೋಹಗಳನ್ನು ಒಳಗೊಂಡಿದೆ

ಒಡಿಶಾ, ಝಾರ್ಖಂಡ್, ಛತ್ತೀಸ್ ಘರ್, ಕರ್ನಾಟಕ ರಾಜ್ಯಗಳಲ್ಲಿ ಹೆಮಟೈಟ್ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ.

ಲಿಮೋನೈಟ್

ಬೂದುಬಣ್ಣದಲ್ಲಿ ದೊರೆಯುವ ಲಿಮೋನೈಟ್ ಸು. 60% ಕಬ್ಬಿಣಾಂಶವನ್ನು ಹೊಂದಿರುತ್ತದೆ

ಅಶುದ್ಧ ವಸ್ತುಗಳ ಪ್ರಮಾಣ ಹೆಚಾಗಿದ್ದು ಅಧಿಕ ತೇವಾಂಶದಿಂದ ಕೂಡಿರುವುದರಿಂದ ಈ ಅದಿರಿನಿಂದ ಕಬ್ಬಿಣ ತೆಗೆಯಲು ಹೆಚ್ಚು ಖರ್ಚಾಗುತ್ತದೆ.

ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶಗಳು ಲಿಮೋನೈಟ್ ನ ಅಧಿಕ ನಿಕ್ಷೇಪವನ್ನು ಒಳಗೊಂಡಿವೆ.

ಸಿಡರೈಟ್

40% ಕಿಂತಲೂ ಕಡಿಮೆ ಪ್ರಮಾಣದ ಕಬ್ಬಿಣಾಂಶ ಹೊಂದಿರುವ ಸಿಡರೈಟ್ ಹಳದಿ ಅಥವಾ ಕಂದುಬಣ್ಣಗಳಲ್ಲಿ ದೊರೆಯುತ್ತದೆ.

ಈ ಅಧಿರು ಕಾರ್ಬೋನಿಯಸ್ ಶಿಲೆಗಳಲ್ಲಿ ದೊರೆಯುತ್ತದೆ.

ಮ್ಯಾಗ್ನಟೈಟ್ ಮತ್ತು ಹೆಮಟೈಟ್ ಗಳೊಂದಿಗೆ ಮಿಶ್ರಣ ಮಾಡಲು ಸಿಡರೈಟ್ ಅನ್ನು ಬಳಸಲಾಗುತ್ತದೆ.

ಕರ್ನಾಟಕ, ಆಂಧ್ರಪ್ರದೇಶ, ರಾಜಸ್ತಾನ ಮತ್ತು ತಮಿಳುನಾಡುಗಳಲ್ಲಿ ಈ ಅದಿರು ಹೆಚ್ಚಾಗಿ ದೊರೆಯುತ್ತದೆ.

ಬ್ರಿಟನ್ ನ ಲಿಂಕರ್ ಷೈರ್ಫ್ರಾನ್ಸ್ ನ ಲೋರೈನ್ಲಕ್ಸಂಬರ್ಗ್ ಮುಂತಾದ ಪ್ರದೇಶಗಳಲ್ಲಿ ಸಿಡರೈಟ್ ಅದಿರು ದೊರೆಯುತ್ತದೆ.

ಮ್ಯಾಂಗನೀಸ್

ಮ್ಯಾಂಗನೀಸ್ ಪ್ರಮುಖ ಮಿಶ್ರ ಖನಿಜವಾಗಿದೆ. ಇದನ್ನು ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳಲ್ಲಿ ಬಳಸುವರು. ಉಕ್ಕಿನ ಗಡಸುತನವು ಮ್ಯಾಂಗನೀಸ್ ಪ್ರಮಾಣದ ಮೇಲೆ ನಿರ್ಧಾರಿತವಾಗುತ್ತದೆ.

ಶುಷ್ಕ ವಿದ್ಯುತ್ ಕೋಶ (ಬ್ಯಾಟರಿ)ಪೋರ್ಸಲೈನ್ ವಸ್ತುಗಳುಬಣ್ಣ ಮತ್ತು ವಾರ್ನಿಷ್ ಗಳ ತಯಾರಿಕೆಯಲ್ಲಿ ಸಹ ಮ್ಯಾಂಗನೀಸ್ ಅನ್ನು ಬಳಸುವರು.

ಭಾರತದಲ್ಲಿ ಅತ್ಯುತ್ತಮ ದರ್ಜೆಯ ಮ್ಯಾಂಗನೀಸ್ ದೊರೆಯುತ್ತದೆ. ಮ್ಯಾಂಗನೀಸ್ ಅದಿರಿನ ನಿಕ್ಷೇಪದಲ್ಲಿ ಚೀನಾ, ಆಸ್ಟ್ರೇಲಿಯಾ ನಂತರ ಭಾರತ ಪ್ರಪಂಚದಲ್ಲಿಯೇ 3ನೇ ಸ್ಥಾನದಲ್ಲಿದೆ.

ಒಡಿಶಾಮಧ್ಯಪ್ರದೇಶಮಹಾರಾಷ್ಟ್ರ ಮತ್ತು ಕರ್ನಾಟಕಗಳು ಮ್ಯಾಂಗನೀಸ್ ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ.

ಮ್ಯಾಂಗನೀಸ್ ಅದಿರುಗಳು

ಸೈಲೋಮೆಲೇನ್ಪೈರೋಲೋಸೈಟ್ಮ್ಯಾಗ್ನಟೈಟ್ಹೋಲ್ಯಾಂಡೈಟ್ ಮತ್ತು ಬ್ರಾನೈಟ್ ಪ್ರಮುಖ ಮ್ಯಾಂಗನೀಸ್ ಅದಿರುಗಳಾಗಿವೆ.

ರಾಸಾಯನಿಕವಿದ್ಯುತ್ ಉಪಕರಣಬಣ್ಣದ ಗಾಜುಗಳ ತಯಾರಿಕೆ ಇನ್ನು ಅನೇಕ ಕೆಲಸಗಳಿಗೆ ಮ್ಯಾಂಗನೀಸ್ ಅನ್ನು ಉಪಯೊಗಿಸುವುದರಿಂದ ಇದನ್ನು ಬಹುಪಯೋಗಿ ಖನಿಜ ಎನ್ನುವರು.

ದಕ್ಷಿಣ ಆಫ್ರಿಕಾ (ಅತಿ ಹೆಚ್ಚು ಮ್ಯಾಂಗನೀಸ್ ಉತ್ಪಾದಿಸುವ ದೇಶ)

ಚೀನಾ  ಕಿಯಾಂಗ್ಸುಕಾನ್ಸುಕ್ವಾಂಗ್ಸಿಹುನಾನ್ಯುನಾನ್

ಜಪಾನ್  ಕಿಯೋಟೊಹೊಕೈಡೊಹೊನ್ಸು

ಭಾರತ

ಒಡಿಶಾ - ಸುಂದರ್ ಘರ್ಕಿಯೊಂಜಾರ್ಕೋರಾಪಟ್

ಕರ್ನಾಟಕ - ಶಿವಮೊಗ್ಗಬಳ್ಳಾರಿತುಮಕೂರುಉತ್ತರ ಕನ್ನಡ

ಮಧ್ಯಪ್ರದೇಶ - ಬಾಲಾಘಾಟ್ಚಿಂದ್ವಾರ

ಮಹಾರಾಷ್ಟ್ರ - ಭಂಡಾರನಾಗ್ಪುರ

ಹಾಸ್ಮನೈಟ್

ಆಮ್ಲ ಅಗ್ನಿಶಿಲೆಗಳಲ್ಲಿ ದೊರೆಯುವ ಈ ಅದಿರು ಕಪ್ಪುಬಣ್ಣದ್ದಾಗಿರುತ್ತದೆ. ಸು. 72% ಕ್ಕಿಂತ ಹೆಚ್ಚಿನ ಮ್ಯಾಂಗನೀಸ್ ಅಂಶವನ್ನು ಒಳಗೊಂಡಿರುವ ಹಾಸ್ಮನೈಟ್ ಅದಿರು ಮ್ಯಾಂಗನೀಸ್ ಆಕ್ಸೈಡ್ ನ ರಾಸಾಯನಿಕ ಸಂಯೋಜನೆಯಾಗಿದೆ.

ಬ್ರಾನೈಟ್

ಬ್ರಾನೈಟ್ ಸಹ ಮ್ಯಾಂಗನೀಸ್ ಆಕ್ಸೈಡ್ ನ ರಾಸಾಯನಿಕ ಸಂಯೋಜನೆಯಾಗಿದ್ದು ಸು 60-65% ಮ್ಯಾಂಗನೀಸ್ ಪ್ರಮಾಣವನ್ನು ಒಳಗೊಂಡಿರುತ್ತದೆ. ಮ್ಯಾಂಗನೀಸ್ ಜೊತೆಗೆ 10% ಸಿಲಿಕಾ ಸಹ ಈ ಅದಿರಿನಲ್ಲಿರುತ್ತದೆ.

ಪೈರೋಲ್ಯುಸೈಟ್

ಭಾರತದೆಲ್ಲೆಡೆ ಅತ್ಯಧಿಕ ಪ್ರಮಾಣದಲ್ಲಿ ದೊರೆಯುವ ಪೈರೋಲ್ಯುಸೈಟ್ ಬೂದು ಬಣ್ಣದ್ದಾಗಿದ್ದು ಇತರೇ ಮ್ಯಾಂಗನೀಸ್ ಅದಿರುಗಳಿಗಿಂತ ಮೃದುವಾಗಿರುತ್ತದೆ.  ಈ ಅದಿರು ಮ್ಯಾಂಗನೀಸ್ ಡೈ ಆಕ್ಸೈಡ್ ನ ರಾಸಾಯನಿಕ ಸಂಯೋಜನೆಯಾಗಿದ್ದು ಸು 60%-65% ಮ್ಯಾಂಗನೀಸ್ ಪ್ರಮಾಣವನ್ನು ಒಳಗೊಂಡಿರುತ್ತದೆ.

ಸೈಲೋಮೆಲೇನ್

ಸೈಲೋಮೆಲೇನ್ ಅದಿರು ಸು 45%-60% ರಷ್ಟು ಮ್ಯಾಂಗನೀಸ್ ಅನ್ನು ಹೊಂದಿರುತ್ತದೆ. ಹೊಳೆಯುವ ಕಪ್ಪು ಬಣ್ಣದ ಈ ಅದಿರು ಮ್ಯಾಂಗನೀಸ್ ಹೈಡ್ರಾಹೈಟ್ ಆಕ್ಸೈಡ್ ನಿಂದಾಗಿದೆ.

ಮ್ಯಾಗ್ನಟೈಟ್

ಕಾಂತತ್ವ ಗುಣ ಹೊಂದಿರುವ ಮ್ಯಾಗ್ನಟೈಟ್ ಅದಿರು ಸು 35%-40% ಕಬ್ಬಿಣದ ಅದಿರನ್ನು ಒಳಗೊಂಡಿರುತ್ತದೆ.

ಟಂಗ್ಸ್ಟನ್

ಟಂಗ್ಸ್ಟನ್ ಲೋಹಗಳಲ್ಲಿಯೇ ಅತಿ ಕಠಿಣವಾದುದಾಗಿದೆ. ಇತರ ಲೋಹಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಆಮ್ಲಗಳ ಪ್ರಭಾವಕ್ಕೆ ಒಳಗಾಗುತ್ತದೆ. ಇತರ ಲೋಹಗಳಿಗಿಂತ ಹೆಚ್ಚಿನ ತುಕ್ಕು ನಿರೋಧಕ ಗುಣ ಹೊಂದಿದೆ.

ಸ್ಕೀಲೈಟ್ವೊಲ್ಫ್ರಮೈಟ್ಹ್ಯೂಬ್ನೆರ್ಟಿ ಮತ್ತು ಫೆರ್ಬರೈಟ್ ಟಂಗ್ಸ್ಟನ್ ನ ಪ್ರಮುಖ ಅದಿರುಗಳಾಗಿವೆ.

ಕರ್ನಾಟಕವು ಅತಿ ಹೆಚ್ಚು ಟಂಗ್ಸ್ಟನ್ ಅದಿರನ್ನು ಒಳಗೊಂಡಿದೆ. ನಂತರದ ಸ್ಥಾನದಲ್ಲಿ ರಾಜಸ್ತಾನ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿವೆ

ಪ್ರಪಂಚದಲ್ಲಿ ಚೀನಾವು ಟಂಗ್ಸ್ಟನ್ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಯೆಟ್ನಾಂ ಮತ್ತು ರಷ್ಯಾ ನಂತರದ ಸ್ಥಾನದಲ್ಲಿವೆ.

ಟಂಗ್ಸ್ಟನ್ ಅನ್ನು ವಿದ್ಯುತ್ ದೀಪಗಳಲ್ಲಿ ಫಿಲ್ಮೆಂಟ್ ಆಗಿ ಬಳಸುತ್ತಾರೆ.

ಪೆಟ್ರೋಲಿಯಂ ಉದ್ಯಮಗಳಲ್ಲಿ ಟಂಗ್ಸ್ಟನ್ ಕಾರ್ಬೈಡ್ ಅನ್ನು ಬಳಸುವರು. ಟಂಗ್ಸ್ಟನ್ ಕಂಚು ಮತ್ತು ಇತರ ಟಂಗ್ಸ್ಟನ್ ಸಂಯುಕ್ತಗಳನ್ನು ಬಣ್ಣಗಳಲ್ಲಿ ಬಳಸುವರು.

ಟಂಗ್ಸ್ಟನ್ ಡೈ ಸಲ್ಫೈಡ್ ಅನ್ನು ಅಧಿಕ ತಾಪಮಾನದ ಸಂದರ್ಭದಲ್ಲಿ ಲೋಹಗಳನ್ನು ಕಾಪಾಡಲು ಲ್ಯೂಬ್ರಿಕಂಟ್ ಆಗಿ ಬಳಸುವರು.

ಕ್ರೋಮಿಯಂ

ಕಬ್ಬಿಣಕ್ರೋಮಿಯಂ ಮತ್ತು ಆಮ್ಲಜನಕಗಳನ್ನು ಒಳಗೊಂಡಿರುವ ಸಂಯುಕ್ತ ವಸ್ತುವಾದ ಕ್ರೋಮೈಟ್ ಎಂಬ ಅದಿರಿನಲ್ಲಿ ಕ್ರೋಮಿಯಂ ದೊರೆಯುತ್ತದೆ.

ಭಾರತದಲ್ಲಿ ಒಡಿಶಾ ಅತಿ ಹೆಚ್ಚು ಕ್ರೋಮಿಯಂ ಅನ್ನು ಉತ್ಪಾದಿಸುತ್ತದೆ. ನಂತರದ ಸ್ಥಾನದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿವೆ.

ದಕ್ಷಿಣ ಆಫ್ರಿಕಾ ಅತಿ ಹೆಚ್ಚು ಕ್ರೋಮಿಯಂ ಉತ್ಪಾದಿಸುವ ದೇಶವಾಗಿದ್ದು, ಟರ್ಕಿ, ಕಝಖ್ ಸ್ತಾನ್, ಭಾರತ ಮತ್ತು ಫಿನ್ಲೆಂಡ್ ಗಳು ನಂತರದ ಸ್ಥಾನದಲ್ಲಿವೆ.

ಹೊಳಪುಳ್ಳ ಲೋಹವಾದ ಕ್ರೋಮಿಯಂ ಅನ್ನು ಇತರ ಲೋಹಗಳಿಗೆ ಹೊಳಪು ಕೊಡಲು ಉಪಯೋಗಿಸುವರು.

ಕ್ರೋಮಿಯಂ ತುಕ್ಕು ನಿರೋಧಕ ಲೋಹವಾಗಿರುವುದರಿಂದ, ಕಬ್ಬಿಣ ತುಕ್ಕು ಹಿಡಿಯದಂತೆ ಅದರೊಂದಿಗೆ ಸೇರಿಸಿ ಉಕ್ಕನ್ನು ತಯಾರಿಸುತ್ತಾರೆ. ಅಲ್ಲದೇ ಉಕ್ಕನ್ನು ಇನ್ನಷ್ಟು ಗಟ್ಟಿಗೊಳಿಸಲು ಸಹ ಕ್ರೋಮಿಯಂ ಅನ್ನು ಬಳಸುವರು.

ನಿಕಲ್

ಲಿಮೋನೈಟ್ ಮತ್ತು ಗಾರ್ನಿಟೈಟ್ ನಿಕಲ್ ನ ಪ್ರಮುಖ ಅದಿರುಗಳಾಗಿವೆ.

ಭಾರತದಲ್ಲಿ ನಿಕಲ್ ಉತ್ಪಾದನೆಯಲ್ಲಿ ಒಡಿಶಾ ಮೊದಲ ಸ್ಥಾನದಲ್ಲಿದೆ. ಝಾರ್ಖಾಂಡ್ ಕರ್ನಾಟಕ ಮತ್ತು ಕೇರಳ ರಾಜ್ಯಗಳು ನಂತರದ ಸ್ಥಾನದಲ್ಲಿವೆ.

ಇಂಡೋನೇಷಿಯಾ ನಿಕಲ್ ಲೋಹದ ನಿಕ್ಷೇಪದಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ಮತ್ತು ಬ್ರೆಜಿಲ್ ದೇಶಗಳಿವೆ. ಇನ್ನು ಉತ್ಪಾದನೆಯಲ್ಲಿ ಸಹ ಇಂಡೋನೇಷಿಯಾ ಪ್ರಥಮ ಸ್ಥಾನದಲ್ಲಿದ್ದರೆ ಫಿಲಿಪ್ಪೈನ್ಸ್, ರಷ್ಯಾ ದೇಶಗಳು ನಂತರದ ಸ್ಥಾನದಲ್ಲಿವೆ.

ಉಕ್ಕನ್ನು ತಯಾರಿಸುವಾಗ ಬಹಳ ಹೊಳಪುಳ್ಳ ನಿಕಲ್ ಲೋಹವನ್ನು ಇತರ ಲೋಹಗಳಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಮುದ್ರಣಾಲಯಗಳಲ್ಲಿ, ನಾಣ್ಯಗಳನ್ನು ತಯಾರಿಸಲು, ಕೈಗಾರಿಕೆಗಳಲ್ಲಿ ರಾಸಾಯನಿಕ ವೇಗವರ್ಧಕವಾಗಿ, ಇತರ ಲೋಹಗಳಿಗೆ ಲೇಪನ ನೀಡಲು, ಶುಷ್ಕಕೋಶಗಳಲ್ಲಿ, ಮಿಶ್ರಲೋಹಗಳನ್ನು ತಯಾರಿಸಲು, ಶಸ್ತ್ರ ಚಿಕಿತ್ಸೆಯ ಉಪಕರಣಗಳಾಗಿ, ಎಲೆಕ್ಟ್ರಾನಿಕ್ ಸಾಧನಗಳಾಗಿ, ಹೀಗೆ ಅನೇಕ ಕೆಲಸಗಳಿಗೆ ನಿಕಲ್ ಲೋಹವನ್ನು ಬಳಸಿಕೊಳ್ಳಲಾಗುತ್ತದೆ

ಕಾಮೆಂಟ್‌ಗಳು