ಆಹಾರ ಬೆಳೆಗಳು

 ಆಹಾರ ಬೆಳೆಗಳು

ಗೋಧಿ

ಪ್ರಪಂಚದಲ್ಲೇ ಅತಿ ಹೆಚ್ಚು ಬೆಳೆಯಲ್ಪಡುವ ಆಹಾರ ಧಾನ್ಯವಾಗಿದೆ. ಭಾರತದಲ್ಲಿ ಗೋಧಿ ಭತ್ತದ ನಂತರ 2ನೇ ಪ್ರಮುಖ ಆಹಾರ ಬೆಳೆಯಾಗಿದೆ. ಗೋಧಿಯು ಪೋಯೆಸಿ ಎಂಬ ಸಸ್ಯವರ್ಗಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು ಟ್ರಿಟಿಕಮ್.

ಭಾರತದಲ್ಲಿ ಗೋಧಿಯನ್ನು ಪ್ರಮುಖ ರಾಬಿ ಬೆಳೆಯಾಗಿ ಬೆಳೆಯುವರು. 1966 ರ ಹಸಿರು ಕ್ರಾಂತಿ ಸಮಯದಲ್ಲಿ ಗೋಧಿಯನ್ನು ಈ ಪ್ರಯೋಗಕ್ಕೆ ಒಳಪಡಿಸಿ ಇಳುವರಿಯನ್ನು ಹೆಚ್ಚಿಸಲಾಯಿತು.

ಗೋಧಿಯು ಸಮಶೀತೋಷ್ಣ ವಲಯದಲ್ಲಿ ಬೆಳೆಯುವ ಬೆಳೆಯಾಗಿದೆ. ಈ ಬೆಳೆಗೆ 1018 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕು. 50-100 ಸೆಂ.ಮೀ ವಾರ್ಷಿಕ ಮಳೆ ಬೀಳಬೇಕು.

ಈ ಸಸ್ಯಕ್ಕೆ ಮೊಳಕೆ ಬರುವಾಗ ತಂಪಾದ ವಾಯುಗುಣ ಹಾಗೂ ತೆನೆ ಬಿಡುವಾಗ ಬಿಸಿಲಿನ ವಾತಾವರಣವಿರಬೇಕು

ಮರಳು ಮಿಶ್ರಿತ ಜೇಡಿಮಣ್ಣು ಇದಕ್ಕೆ ಸೂಕ್ತವಾಗಿದ್ದುಮೆಕ್ಕಲು ಮತ್ತು ಕಪ್ಪು ಮಣ್ಣಿನಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತದೆ.

ಹರ್ಯಾಣದ ಕರ್ನಾಲ್‍ನ ಗಹೂನ್ ವಿಹಾರ್ ನಲ್ಲಿ ಗೋಧಿ ಸಂಶೋಧನಾ ನಿರ್ದೇಶನಾಲಯವಿದೆ.

ಉತ್ತರ ಭಾರತದಲ್ಲಿ ಟ್ರಿಟಿಕಮ್ ಏಸ್ಟಿವಮ್ಮಧ್ಯ ಭಾರತದಲ್ಲಿ ಟ್ರಿಟಿಕಮ್ ಡ್ಯೂರಮ್ ಮತ್ತು ದಕ್ಷಿಣ ಭಾರತದಲ್ಲಿ ಟ್ರಿಟಿಕಮ್ ಡೈಕೋಕಮ್ ಎಂಬ ಗೋಧಿಯ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಕೌಸಂಬಿಪೂಸ ವಿಶೇಷ್ಪೂಸ ಗೋಲ್ಡ್ಪೂಸ ಬಹರ್ಪೂಸ ನವಗಿರಿ ಮುಂತಾದವು ಗೋಧಿಯ ಇತರ ಪ್ರಮುಖ ತಳಿಗಳಾಗಿವೆ

ಗೋಧಿ ಬೆಳೆಯುವಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆಪಂಜಾಬ್ ಮತ್ತು ಹರ್ಯಾಣಗಳು ನಂತರದ ಸ್ಥಾನದಲ್ಲಿವೆ

ಅತಿ ಹೆಚ್ಚು ಗೋಧಿ ಇಳುವರಿ ನೀಡುವ ಪೈಕಿ ಕ್ರಮವಾಗಿ ಪಂಜಾಬ್ಹರ್ಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಿವೆ

ಪಂಜಾಬನ್ನು ಗೋಧಿಯ ಕಣಜ ಎನ್ನುವರು.

ಪ್ರಮುಖ ಗೋಧಿ ಬೆಳೆಯುವ ದೇಶಗಳು : ಚೀನಾ, ಭಾರತ, ರಷ್ಯಾ, ಅಮೇರಿಕಾ ಸಂಯುಕ್ತ ಸಂಸ್ಥಾನ

ಪ್ರಮುಖ ರಫ್ತು ದೇಶಗಳು : ಅಮೇರಿಕಾ ಸಂಯುಕ್ತ ಸಂಸ್ಥಾನ, ಆಸ್ಟ್ರೇಲಿಯಾ, ಕೆನಡಾ

ಭತ್ತ

ಭತ್ತದ ವೈಜ್ಞಾನಿಕ ಹೆಸರು ಒರೈಸಾ ಸಟೈವಾ

ಇದನ್ನು ಬೆಳೆಯಲು ಹೆಚ್ಚು ಉಷ್ಣಾಂಶ ಮತ್ತು ಮಳೆ ಅಗತ್ಯವಿದ್ದು 2124 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 100150 ಸೆಂ.ಮೀ ವಾರ್ಷಿಕ ಮಳೆ ಬೇಕಾಗುತ್ತದೆ.

ಭತ್ತ ಬೆಳೆಯಲು ಮೆಕ್ಕಲು ಮಣ್ಣು ಮತ್ತು ಮರಳು ಮಿಶ್ರಿತ ಜೇಡಿ ಮಣ್ಣು ಹೆಚ್ಚು ಸೂಕ್ತವಾದವುಗಳು

ಪ್ರಪಂಚದಲ್ಲೇ ಭಾರತ ಭತ್ತ ಬೆಳೆಯುವ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಇಳುವರಿಯಲ್ಲಿ 2ನೇ ಸ್ಥಾನದಲ್ಲಿದೆ. ಭತ್ತವು ಪ್ರಪಂಚದಲ್ಲೇ 2ನೇ ಅತಿ ಹೆಚ್ಚು ಬೆಳೆಯಲ್ಪಡುವ ಆಹಾರ ಧಾನ್ಯವಾಗಿದೆ.

ದಕ್ಷಿಣ ಭಾರತದಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಇದನ್ನು ಮೊದಲ ದರ್ಜೆಯ ಬೆಳೆ ಎನ್ನುವರು. ಭಾರತದಲ್ಲಿ ಭತ್ತ ಪ್ರಮುಖ ಖಾರಿಫ್ (ಮುಂಗಾರು) ಬೆಳೆಯಾಗಿದೆ. ಕೆಲವೆಡೆ ಇದನ್ನು ರಬಿ (ಹಿಂಗಾರು) ಬೆಳೆಯಾಗಿಯೂ ಬೆಳೆಯುವರು

ಭಾರತದಲ್ಲಿ ಭತ್ತದ ಇಳುವರಿಯನ್ನು ಹೆಚ್ಚಿಸಲು ರಾಷ್ಟ್ರೀಯ ಆಹಾರ ಧಾನ್ಯ ಭದ್ರತಾ ಯೋಜನೆ (ನ್ಯಾಷನಲ್ ಫುಡ್ ಸೆಕ್ಯುರಿಟಿ ಮಿಷನ್) ಅನ್ನು ಸ್ಥಾಪಿಸಲಾಗಿದೆ.

ಭಾರತದಲ್ಲಿ ಕೇಂದ್ರೀಯ ಭತ್ತದ ಸಂಶೋಧನಾ ಕೇಂದ್ರವು ಒಡಿಶಾದ ಕಟಕ್ ನಲ್ಲಿದೆ. (ಸೆಂಟ್ರಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್-ಸಿ.ಆರ್.ಆರ್.ಐ)

ಹೈದ್ರಾಬಾದಿನಲ್ಲಿ ಭತ್ತದ ಸಂಶೋಧನಾ ನಿರ್ದೇಶನಾಲಯವಿದೆ (ಡೈರಕ್ಟರೇಟ್ ಆಫ್ ರೈಸ್ ರಿಸರ್ಚ್).

ಪ್ರಮುಖ ಭತ್ತದ ತಳಿಗಳು: ಸೂಪರ್, ಡ್ರೀಮ್, ಏರೊಬಿಕ್, ಸ್ವರ್ಣ, ಹರ್ಷ, ವಿಜಯ್, ವೇಕ್ ಧನ್, ಜವಹಾರ್-3, ಪೂಸ ಆರ್.ಎಚ್-10, ಪೂಸಾ ಸುಗಂಧ, ಪೂಸಾ ಬಾಸುಮತಿ ಮುಂತಾದವು.

ಪ.ಬಂಗಾಳವು ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯವಾಗಿದ್ದು ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶಆಂಧ್ರ ಪ್ರದೇಶಪಂಜಾಬ್ ಮತ್ತು ತಮಿಳುನಾಡುಗಳಿವೆ. ಪಂಜಾಬ್ ಅತಿ ಹೆಚ್ಚು ಭತ್ತದ ಇಳುವರಿ ಹೊಂದಿರುವ ರಾಜ್ಯವಾಗಿದೆ.

ಅಂತರರಾಷ್ಟ್ರೀಯ ಭತ್ತದ ವಿಧಗಳು

ಭತ್ತದಲ್ಲಿ ಜಪಾನಿಕ ಹಾಗೂ ಇಂಡಿಕ ಎಂಬ 2  ವಿಧಗಳಿವೆ. ಜಪಾನಿಕ ಭತ್ತವನ್ನು ಜಪಾನ್, ಚೀನಾ, ಕೊರಿಯಾ ದೇಶಗಳಲ್ಲಿ ಬೆಳೆಯುತ್ತಾರೆ. ಇಂಡಿಕ ಭತ್ತವನ್ನು ಭಾರತ, ಬಾಂಗ್ಲಾದೇಶ, ಬರ್ಮಾ, ಇಂಡೋನೇಷಿಯಾ, ಮಲೇಷಿಯಾ ಮುಂತಾದ ದೇಶಗಳಲ್ಲಿ ಬೆಳೆಯುತ್ತಾರೆ.

ಪ್ರಮುಖ ಭತ್ತ ಬೆಳೆಯುವ ದೇಶಗಳು : ಚೀನಾ, ಭಾರತ, ಇಂಡೋನೇಷಿಯಾ

ಪ್ರಮುಖ ರಫ್ತು ದೇಶಗಳು : ಥಾಯ್ಲ್ಯಾಂಡ್, ಭಾರತ, ಬರ್ಮಾ, ಇಟಲಿ, ಅಮೇರಿಕಾ ಸಂಯುಕ್ತ ಸಂಸ್ಥಾನ

ಇಂಟರ್ ನ್ಯಾಷನಲ್ ರೈಸ್ ರಿಸರ್ಚ್ ಸೆಂಟರ್ (ಐ.ಆರ್.ಆರ್.ಐ) ನ ಕೇಂದ್ರ ಕಛೇರಿ ಫಿಲಿಫ್ಫೈನ್ಸ್ ನ ಮನೀಲಾದಲ್ಲಿದೆ.

ಭಾಸುಮತಿ ಅಕ್ಕಿಯನ್ನು ಉತ್ಪಾದಿಸುವುದರಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.

ಹರಿಯಾಣಪಂಜಾಬ್ ಮತ್ತು ಉತ್ತರ ಪ್ರದೇಶ ಭಾಸುಮತಿ ಅಕ್ಕಿ ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ.

ಬಾರ್ಲಿ

ಹಾರ್ಡಿಯಂ ವಲ್ಗರೆ ಎಂಬುದು ಬಾರ್ಲಿಯ ವೈಜ್ಞಾನಿಕ ಹೆಸರು.

ಬಾರ್ಲಿ ಸಮಶೀತೋಷ್ಣ ವಲಯದಲ್ಲಿ ಬೆಳೆಯುವ ಬೆಳೆಯಾಗಿದ್ದು ಈ ಬೆಳೆ ಬೆಳೆಯಲು ವಾರ್ಷಿಕವಾಗಿ 25-50 ಸೆಂ.ಮೀ ಮಳೆ ಮತ್ತು 10 ರಿಂದ 20 ಡಿಗ್ರಿ ಉಷ್ಣಾಂಶವಿರಬೇಕು.

ಗೋಧಿಯಂತೆಯೆ ಮರಳು ಮಿಶ್ರಿತ ಜೇಡಿಮಣ್ಣು ಇದಕ್ಕೆ ಸೂಕ್ತವಾಗಿದ್ದುಮೆಕ್ಕಲು ಮತ್ತು ಕಪ್ಪು ಮಣ್ಣಿನಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತದೆ.

ಬೀರ್ವ್ಹಿಸ್ಕಿಆಲ್ಕೋಹಾಲ್ ತಯಾರಿಸಲು ಈ ಧಾನ್ಯವನ್ನು ಹೆಚ್ಚಾಗಿ ಬಳಸುತ್ತಾರೆ.

ರಾಜಸ್ತಾನ ಮತ್ತು ಉತ್ತರ ಪ್ರದೇಶಗಳಲ್ಲಿ ಬಾರ್ಲಿಯಿಂದ ಮಿಸ್ಸಿರೊಟ್ಟಿ ತಯಾರಿಸುತ್ತಾರೆ

ಉತ್ತರಪ್ರದೇಶ ಅತಿ ಹೆಚ್ಚು ಬಾರ್ಲಿ ಬೆಳೆಯುವ ರಾಜ್ಯವಾಗಿದ್ದುನಂತರದ ಸ್ಥಾನದಲ್ಲಿ ಕ್ರಮವಾಗಿ ರಾಜಸ್ತಾನಮಧ್ಯಪ್ರದೇಶ ಮತ್ತು ಹರಿಯಾಣಗಳಿವೆ.

ಹರ್ಯಾಣದ ಕರ್ನಾಲ್‍ನ ಗಹೂನ್ ವಿಹಾರ್ ನಲ್ಲಿ ಬಾರ್ಲಿ ಸಂಶೋಧನಾ ನಿರ್ದೇಶನಾಲಯವಿದೆ.

ಪ್ರಮುಖ ಬಾರ್ಲಿ ಬೆಳೆಯುವ ದೇಶಗಳು : ರಷ್ಯಾ, ಕೆನಡಾ, ಜರ್ಮನಿ, ಫ್ರಾನ್ಸ್, ಅಮೇರಿಕಾ ಸಂಯುಕ್ತ ಸಂಸ್ಥಾನ

ಪ್ರಮುಖ ರಫ್ತು ದೇಶಗಳು : ಫ್ರಾನ್ಸ್, ರಷ್ಯಾ, ಆಸ್ಟ್ರೇಲಿಯಾ, ಅರ್ಜೆಂಟೈನಾ, ಕೆನಡಾ

ಮೆಕ್ಕೆಜೋಳ

ಝೀ ಮೇಯ್ಸ್ ಎಂಬುದು ಮೆಕ್ಕೆಜೋಳದ ವೈಜ್ಞಾನಿಕ ಹೆಸರು. ಈ ಬೆಳೆಯ ಮೂಲಸ್ಥಾನ ದಕ್ಷಿಣ ಅಮೆರಿಕಾ ಖಂಡ. 17 ನೇ ಶತಮಾನದಲ್ಲಿ ಭಾರತಕ್ಕೆ ಪರಿಚಯವಾಯಿತು.

ಈ ಬೆಳೆಯು ಉಷ್ಣವಲಯ ಹಾಗೂ ಉಪ ಉಷ್ಣವಲಯಗಳೆರೆಡರಲ್ಲೂ ಚೆನ್ನಾಗಿ ಬೆಳೆಯುತ್ತದೆ. ಈ ಬೆಳೆ ಬೆಳೆಯಲು 18-27 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು ವಾರ್ಷಿಕವಾಗಿ 60-125 ಸೆಂ.ಮೀ ಮಳೆಯ ಅವಶ್ಯವಿದೆ.

ಕೆಂಪು ಮಣ್ಣು ಮತ್ತು ಜೇಡಿ ಮಿಶ್ರಿತ ಕೆಂಪು ಮಣ್ಣು ಎರಡರಲ್ಲೂ ಮೆಕ್ಕೆಜೋಳ ಚೆನ್ನಾಗಿ ಬೆಳೆಯುತ್ತದೆ.

ಮೆಕ್ಕೆಜೋಳವನ್ನು ಮುಂಗಾರು ಹಾಗೂ ಹಿಂಗಾರು 2 ಕಾಲಗಳಲ್ಲಿಯೂ ಬೆಳೆಯುವುದರಿಂದ ಇದನ್ನು ಖಾರಿಫ್ ಮತ್ತು ರಬಿ ಬೆಳೆ ಎಂದು ಕರೆಯುವರು.

ಕರ್ನಾಟಕವು ಮೆಕ್ಕೆಜೋಳ ಬೆಳೆಯುವಲ್ಲಿ ಮೊದಲ ಸ್ಥಾನದಲಿದ್ದರೆನಂತರದ ಸ್ಥಾನದಲ್ಲಿ ಕ್ರಮವಾಗಿ ಮಹಾರಾಷ್ಟ್ರ ಮತ್ತು ರಾಜಸ್ತಾನಗಳಿವೆ.

ತೆಲಂಗಾಣದ ಹೈದ್ರಾಬಾದಿನಲ್ಲಿ ಡೈರಕ್ಟರೇಟ್ ಆಫ್ ಸೊರ್ಗುಹಂ ರಿಸರ್ಚ್ ನ ಮೈಝೆ ರಿಸರ್ಚ್ ಸೆಂಟರ್ ಸಂಶೋಧನಾಲಯವಿದೆ.

ಪ್ರಮುಖ ಮೆಕ್ಕೆಜೋಳ ಬೆಳೆಯುವ ದೇಶಗಳು : ಅಮೇರಿಕಾ ಸಂಯುಕ್ತ ಸಂಸ್ಥಾನ, ಚೀನಾ, ಅರ್ಜೆಂಟೈನಾ, ಬ್ರೆಜಿಲ್, ಮೆಕ್ಸಿಕೋ

ಪ್ರಮುಖ ರಫ್ತು ದೇಶಗಳು : ಅಮೇರಿಕಾ ಸಂಯುಕ್ತ ಸಂಸ್ಥಾನ, ಚೀನಾ, ದ.ಆಫ್ರಿಕಾ, ಫ್ರಾನ್ಸ್, ಅರ್ಜೆಂಟೈನಾ

ಜೋಳ

ಜೋಳದ ವೈಜ್ಞಾನಿಕ ಹೆಸರು ಸೊರ್ಗ್ಯಾಮ್ ವಲ್ಗರೆ. ಈ ಬೆಳೆಯ ಮೂಲಸ್ಥಾನ ಆಸ್ಟ್ರೇಲಿಯಾ

ಜೋಳವನ್ನು ಬೆಳೆಯಲು 25-30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 30-100 ಸೆಂ.ಮೀ ಮಳೆ ಅವಶ್ಯಕವಾಗಿದೆ.

ಕಪ್ಪು ಮಣ್ಣು ಅಥವಾ ಕೆಂಪು ಮಣ್ಣು ಎರಡರಲ್ಲಿಯೂ ಈ ಬೆಳೆಯನ್ನು ಬೆಳೆಯಬಹುದು.

ಜೋಳ ಖಾರಿಫ್ (ಮುಂಗಾರು) ಮತ್ತು ರಬಿ (ಹಿಂಗಾರು) ಎರಡು ಕಾಲದಲ್ಲಿಯೂ ಬೆಳೆಯಬಹುದಾದ ಬೆಳೆಯಾಗಿದೆ.

ಮಹಾರಾಷ್ಟ್ರ ಜೋಳ ಬೆಳೆಯುವಲ್ಲಿ ಮೊದಲ ಸ್ಥಾನದಲ್ಲಿದ್ದರೆನಂತರದ ಸ್ಥಾನದಲ್ಲಿ ಕ್ರಮವಾಗಿ ಕರ್ನಾಟಕಮಧ್ಯ ಪ್ರದೇಶ ಮತ್ತು ಆಂಧ್ರ ಪ್ರದೇಶಗಳಿವೆ.

ಜೋಳದ ಸಂಶೋಧನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಸೆಂಟರ್ ಫರ್ ರಬಿ ಸೊರ್ಗ್ಯಾಮ್ ಮತ್ತು ತೆಲಂಗಾಣದ ಹೈದ್ರಾಬಾದಿನಲ್ಲಿ ಡೈರಕ್ಟರೇಟ್ ಆಫ್ ಸೊರ್ಗ್ಯಾಮ್ ರಿಸರ್ಚ್ ಸಂಶೋಧನಾಲಯಗಳಿವೆ

ಪ್ರಮುಖ ಜೋಳ ಬೆಳೆಯುವ ದೇಶಗಳು : ಅಮೇರಿಕಾ ಸಂಯುಕ್ತ ಸಂಸ್ಥಾನಭಾರತಮೆಕ್ಸಿಕೊಚೀನಾ

ಸಜ್ಜೆ

ಪೆನ್ನಿಸೆಟಮ್ ಗ್ಲಾಕಮ್ ಎಂಬುದು ಸಜ್ಜೆಯ ವೈಜ್ಞಾನಿಕ ಹೆಸರು.

ಸಜ್ಜೆಯನ್ನು ಬೆಳೆಯಲು 25-35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕು. ಮತ್ತು ವಾರ್ಷಿಕ ಮಳೆಯು 40-50 ಸೆಂ.ಮೀ ನಷ್ಟಾದರು ಇರಬೇಕು

ಸಜ್ಜೆ ಬೆಳೆಯಲು ಮರಳು ಮಿಶ್ರಿತ ಮಣ್ಣು ಸೂಕ್ತವಾಗಿರುತ್ತದೆ. ಆದರೂ ಯಾವುದೇ ಮಣ್ಣಿನಲ್ಲೂ ಈ ಬೆಳೆಯನ್ನು ಬೆಳೆಯಬಹುದಾಗಿದೆ.

ರಾಜಸ್ತಾನವು ಅತಿ ಹೆಚು ಸಜ್ಜೆ ಬೆಳೆಯುವ ರಾಜ್ಯವಾಗಿದ್ದು ನಂತರದ ಸ್ಥಾನದಲ್ಲಿ ಕ್ರಮವಾಗಿ ಉತ್ತರ ಪ್ರದೇಶಹರ್ಯಾಣ ಮತ್ತು ಗುಜರಾತ್ ರಾಜ್ಯಗಳಾಗಿವೆ

ಜಮ್ಮು ಕಾಶ್ಮೀರದ ಪರ್ಲ್ ಮಿಲೆಟ್ ರಿಸರ್ಚ್ ಸ್ಟೇಷನ್ ಮತ್ತು ತೆಲಂಗಾಣದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ ಗಳು ಸಜ್ಜೆಯ ಕುರಿತಾದ ಸಂಶೋಧನಾ ಕೇಂದ್ರಗಳಾಗಿವೆ.

ಭಾರತವು ಅತಿಹೆಚ್ಚು ಸಜ್ಜೆ ಬೆಳೆಯುವ ದೇಶವಾಗಿದೆ. ಉಳಿದಂತೆ ಆಫ್ರಿಕಾ ಖಂಡದ ಸಹೇಲ್ನಮೀಬಿಯಾ ಮತ್ತು ಜಿಂಬಾಂಬ್ವೆ ದೇಶಗಳಲ್ಲಿ ಸಜ್ಜೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ರಾಗಿ

ರಾಗಿಯ ವೈಜ್ಞಾನಿಕ ಹೆಸರು ಎಲ್ಯೂಸಿನ್ ಕೊರಕಾನ.

ರಾಗಿ ಬೆಳೆಯಲು 20-30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 50-100 ಸೆಂ.ಮೀ ವಾಷಿಕ ಮಳೆ ಬೇಕಾಗುತ್ತದೆ.

ಕೆಂಪು ಮಣ್ಣುಕಪ್ಪು ಮಣ್ಣು ಮತ್ತು ಮರಳು ಮಿಶ್ರಿತ ಮಣ್ಣುಗಳಲ್ಲಿ ರಾಗಿಯನ್ನು ಬೆಳೆಯಬಹುದು.

ರಾಗಿಯನ್ನು ಖಾರಿಫ್ (ಮುಂಗಾರು) ಮತ್ತು ರಬಿ (ಹಿಂಗಾರು) 2 ಕಾಲಗಳ ಬೆಳೆಯಾಗಿ ಬೆಳೆಯುತ್ತಾರೆ.

ಕರ್ನಾಟಕವು ಅತಿ ಹೆಚ್ಚು ರಾಗಿ ಬೆಳೆಯುವ ರಾಜ್ಯವಾಗಿದ್ದುನಂತರದ ಸ್ಥಾನದಲ್ಲಿ ಕ್ರಮವಾಗಿ ತಮಿಳುನಾಡುಉತ್ತರಾಖಂಡ ಮತ್ತು ಮಹಾರಾಷ್ಟ್ರ ರಾಜ್ಯಗಳಿವೆ

ತೆಲಂಗಾಣದ ಹೈದ್ರಾಬಾದಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ ರಾಗಿ ಸಂಶೋಧನಾ ಕೇಂದ್ರವಾಗಿದೆ.

ಪ್ರಪಂಚದಲ್ಲಿ ಭಾರತವೇ ಅತಿ ಹೆಚ್ಚು ರಾಗಿ ಬೆಳೆಯುವ ದೇಶವಾಗಿದೆ.

ನವಣೆ

ನವಣೆಯ ವೈಜ್ಞಾನಿಕ ಹೆಸರು ಸೆಟಾರಿಯ ಇಟಾಲಿಕ

ಸಮಶೀತೋಷ್ಣ ವಲಯದಲ್ಲಿ ಬೆಳೆಯುವ ಬೆಳೆಯಾಗಿದ್ದು 20-30 ಡಿಗ್ರಿ ಉಷ್ಣಾಂಶ ಹಾಗೂ ವಾರ್ಷಿಕವಾಗಿ 20-40 ಸೆಂ.ಮೀ ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯುತ್ತದೆ.

ನವಣೆಯನ್ನು ಖಾರಿಫ್ (ಮುಂಗಾರು) ಮತ್ತು ರಬಿ (ಹಿಂಗಾರು) ಎರಡು ಸಂದರ್ಭಗಳಲ್ಲಿಯೂ ಬೆಳೆಯಬಹುದು

ನವಣೆ ಬೆಳೆಯುವಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ ನಂತರದ ಸ್ಥಾನದಲ್ಲಿ ಕ್ರಮವಾಗಿ ಗುಜರಾತ್, ಮಹಾರಾಷ್ಟ್ರ, ರಾಜಸ್ತಾನ ಮತ್ತು ತಮಿಳನಾಡು ರಾಜ್ಯಗಳಿವೆ

ತೆಲಂಗಾಣದ ಹೈದ್ರಾಬಾದಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ ನವಣೆ ಸಂಶೋಧನಾ ಕೇಂದ್ರವಾಗಿದೆ

ಪ್ರಮುಖ ನವಣೆ ಬೆಳೆಯುವ ದೇಶಗಳು : ಚೀನಾ, ಭಾರತ, ನೇಪಾಳ, ಜಪಾನ್, ಯುರೇಷಿಯಾ ಮತ್ತು ಆಫ್ರಿಕಾದ ಇಥಿಯೋಪಿಯಾ, ಜಿಂಬಾಂಬ್ವೆ ದೇಶಗಳು

ಕಾಮೆಂಟ್‌ಗಳು