ಭಾರತದ ಭೌಗೋಳಿಕ ಸ್ಥಾನಮಾನ
ಭಾರತದ ಭೌಗೋಳಿಕ ಸ್ಥಾನಮಾನ
ಪ್ರಪಂಚದ ಭೂಭಾಗದಲ್ಲಿ ಭಾರತವು 2.4% ಭೂಭಾಗವನ್ನು ಹೊಂದಿದ್ದು ಪ್ರಪಂಚದ ಏಳನೇ ಅತಿದೊಡ್ಡ ದೇಶವಾಗಿದೆ.
ಭಾರತವು ಭೂಮಿಯ ಉತ್ತರ ಗೋಳಾರ್ಧದಲ್ಲಿದ್ದು 6% ಉತ್ತರ ಅಕ್ಷಾಂಶದಿಂದ 37% ಉತ್ತರ ಅಕ್ಷಾಂಶದವರೆಗೆ ಹಾಗೂ 68% ಪೂರ್ವ ರೇಖಾಂಶದಿಂದ 97% ಪೂರ್ವ ರೇಖಾಂಶದವರೆಗೆ ಹಬ್ಬಿದ್ದು ಒಟ್ಟು 32,87,263 ಚದರ ಕಿ.ಮೀ ವಿಸ್ತಾರವಾಗಿದೆ.
ಭಾರತವು ದಕ್ಷಿಣದ ಕನ್ಯಾಕುಮಾರಿ ಭೂಶಿರದಿಂದ ಉತ್ತರದ ಕಾಶ್ಮೀರದವರೆಗೆ 3214 ಕಿ.ಮೀ ಉದ್ದವಾಗಿದೆ ಮತ್ತು ಪೂರ್ವ ಪಶ್ಚಿಮವಾಗಿ 2933 ಕಿ.ಮೀ ಅಗಲವಾಗಿದೆ.
ಭಾರತದ ಭೂ ಗಡಿಯ ಉದ್ದ 15200 ಕಿ.ಮೀ ಮತ್ತು ಜಲಗಡಿಯ ಉದ್ದ 6100 ಕಿ.ಮೀಗಳು (ದ್ವೀಪಗಳನ್ನೂ ಸೇರಿಸಿದರೆ 7516 ಕಿ.ಮೀ)
ಬಾರತವು ಬಾಂಗ್ಲಾದೇಶ, ಚೀನಾ, ಪಾಕಿಸ್ತಾನ, ಬರ್ಮಾ,
ನೇಪಾಳ, ಭೂತಾನ್, ಅಫ್ಘಾನಿಸ್ಥಾನ
ದೇಶಗಳೊಂದಿಗೆ ಭೂಗಡಿಯನ್ನು ಶ್ರೀಲಂಕಾ, ಬಾಂಗ್ಲಾದೇಶ, ಬರ್ಮಾ, ಪಾಕಿಸ್ತಾನ, ಮಾಲ್ಡೀವ್ಸ್,
ಥಾಯ್ಲಾಂಡ್ ಮತ್ತು ಇಂಡೋನೇಷ್ಯಾಗಳೊಂದಿಗೆ ಜಲಗಡಿಯನ್ನು ಹಂಚಿಕೊಂಡಿದೆ. ಭಾರತ
ಅತಿಹೆಚ್ಚು ಗಡಿ ಹಂಚಿಕೊಂಡಿರುವುದು ಬಾಂಗ್ಲಾದೇಶದೊಂದಿಗೆ.
ಭಾರತ ಮತ್ತು ಚೀನಾ ನಡುವಿನ ಗಡಿರೇಖೆಯನ್ನು ಮ್ಯಾಕ್‍ಮೋಹನ್ ರೇಖೆ ಎಂದು ಗುರ್ತಿಸಲಾಗಿದೆ.
ಆದರೆ ಇದನ್ನು ಚೀನಾ ಅಂಗಿಕರಿಸಿಲ್ಲ.
ಬಾರತ ಮತ್ತು ಪಾಕಿಸ್ಥಾನ ನಡುವೆ ಎಳೆಯಲಾದ ಗಡಿರೇಖೆ ರ್ಯಾಡ್‍ಕ್ಲಿಫ್ ರೇಖೆ. 1949 ರಲ್ಲಿ ಪಾಕಿಸ್ಥಾನ ಕಾಶ್ಮೀರದ ಮೇಲೆ ದಾಳಿ ಮಾಡಿದಾಗ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಕದನ
ವಿರಾಮ ಘೋಷಿಸಿತು. ಪಾಕಿಸ್ಥಾನ ಆಕ್ರಮಿಸಿದ ಕಾಶ್ಮೀರದ ಭೂಭಾಗ ಲೈನ್ ಆಫ್ ಕಂಟ್ರೊಲ್ ಎಂದಾಯಿತು.
ಗುಜರಾತ್ ಬಳಿ ಇರುವ ಸರ್ ಕ್ರಿಕ್ (ಸಾಗರದ ಆಳವಾದ ನೀರಿನ ಪ್ರದೇಶದವರೆಗಿನ ಸ್ಥಳ) ಭಾರತಕ್ಕೆ
ಸೇರಿದ್ದಾಗಿದೆ.
ಭಾರತ ಮತ್ತು ಅಫ್ಘಾನಿಸ್ಥಾನ ಮಧ್ಯ ಎಳೆಯಲಾದ ಗಡಿರೇಖೆ ಡ್ಯುರಾಂಡ್ ರೇಖೆ
ಪಾಕ್ ಕೊಲ್ಲಿ ಮತ್ತು ಮನ್ನಾರ್ ಖಾರಿಗಳಿಂದ ಬಾರತವು ಶ್ರೀಲಂಕಾದಿಂದ ಬೇರ್ಪಟ್ಟಿದೆ.
ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಗಡಿರೇಖೆಯನ್ನು ಸ್ಟ್ಯಾಫರ್ಡ್ ರೇಖೆ ಎನ್ನುವರು.
ಇವೆರೆಡು ದೇಶಗಳ ಮಧ್ಯದಲ್ಲಿ ತೀನ್ಬಿಗಾ ಎಂಬ ಪ್ರದೇಶವಿದೆ. ಭಾರತ ಮತ್ತು ಬರ್ಮಾ ದೇಶಗಳನ್ನು
ಇರವಡ್ಡಿ ನದಿಯು ಬೇರ್ಪಡಿಸುತ್ತದೆ.
ಭಾರತದ
ಜಲಗಡಿಯು ತೀರದಿಂದ ಸಮುದ್ರದೊಳಗೆ 12 ನಾಟಿಕಲ್ ಮೈಲುಗಳಷ್ಟಿದೆ. ಅಂದರೆ 22.22 ಕಿ.ಮೀ ಅಥವಾ 13.81
ಮೈಲುಗಳು.
ಭಾರತದ ಭೌಗೋಳಿಕ ತುದಿಗಳು
ಬಾರತದ ಉತ್ತರದ ಭೂತುದಿ ಇಂದಿರಾ ಕೋಲ್ (ಲಡಾಖ್)
ದಕ್ಷಿಣದ ಭೂತುದಿ ಕನ್ಯಾಕುಮಾರಿ (ತಮಿಳುನಾಡು) ಮತ್ತು ಭಾರತದ ಭೂರಾಶಿಯ ದಕ್ಷಿಣ ತುದಿ ಇಂದಿರಾ ಪಾಯಿಂಟ್ / ಪಿಗ್ಮಿಲಿಯನ್ ಪಾಯಿಂಟ್ (ಗ್ರೇಟ್ ನಿಕೋಬಾರ್ ದ್ವೀಪ)
ಭಾರತದ ಪಶ್ಚಿಮ ತುದಿ ಗುಹಾರ್ ಮೋಟಿ (ಗುಜರಾತ್)
ಪೂರ್ವ ತುದಿ ಕಿಬಿತು (ಅರುಣಾಚಲ ಪ್ರದೇಶ)
ಭಾರತದ ಭೌಗೋಳಿಕ ಕೇಂದ್ರಬಿಂದು ಎಂದು ಮಧ್ಯಪ್ರದೇಶದ ಜಬ್ಬಲ್‍ಪುರ್ ನಗರವನ್ನು ಕರಯುತ್ತಾರೆ. ಮಾರ್ಬಲ್ ಸಿಟಿ ಎಂಬುದು ಇದಕ್ಕಿರುವ ಅನ್ವರ್ಥನಾಮ. ಪಶ್ಚಿಮ ಮಧ್ಯ ರೈಲ್ವೆಯ ಕೇಂದ್ರಕಛೇರಿ ಈ ನಗರದಲ್ಲಿದೆ.
82.5% ರೇಖಾಂಶವನ್ನಾಧರಿಸಿ ಭಾರತದ ಪ್ರಮಾಣ ವೇಳೆಯನ್ನು ನಿಗದಿಪಡಿಸಲಾಗಿದೆ. ಈ ರೇಖೆಯು ಉತ್ತರ
ಪ್ರದೇಶ, ಮಧ್ಯ ಪ್ರದೇಶ, ಛತ್ತೀಸಘರ್, ಒಡಿಶಾ ಮತ್ತು ಆಂದ್ರ ಪ್ರದೇಶಗಳ
ಮೂಲಕ ಹಾದು ಹೋಗಿದೆ.
ಭಾರತದ ಮಧ್ಯಭಾಗದಲ್ಲಿ 23.5% ಉತ್ತರ ಅಕ್ಷಾಂಶ ( ಕರ್ಕಾಟಕ ಸಂಕ್ರಂತಿ ವೃತ್ತ) ಹಾಯ್ದು ಹೋಗುತ್ತದೆ. ಈ ರೇಖೆಯು ಗುಜರಾತ್, ರಾಜಸ್ಥಾನ್, ಮಧ್ಯ ಪ್ರದೇಶ, ಝಾರ್ಖಾಂಡ್, ಛತ್ತಿಸ್‍ಘರ್, ಪ.ಬಂಗಾಳ, ತ್ರಿಪುರ ಮತ್ತು ಮಿಝೋರಾಂಗಳ ರಾಜ್ಯಗಳ ಮೇಲೆ ಹಾದು ಹೋಗುತ್ತದೆ.
ಭಾರತದ ಕಾಲಮಾನವು 82.5% ರೇಖಾಂಶವನ್ನು ಆಧರಿಸಿದೆ. ಈ
ರೇಖಾಂಶವು ಉತ್ತರ ಪ್ರದೇಶದ ಪ್ರಯಾಗರಾಜ್ (ಅಲಹಾಬಾದ್) ಮೇಲೆ ಹಾದು ಹೋಗಿದೆ. ಭಾರತೀಯ ಕಾಲಮಾನವು
ಗ್ರೀನ್ವಿಚ್ ಕಾಲಮಾನಕ್ಕಿಂತ +5:30 ಗಂಟೆ ಮುಂದೆ ಇದೆ.
ಭಾರತದ ಪ್ರಾಕೃತಿಕ ವಿಭಾಗಗಳು
ಭಾರತದಲ್ಲಿನ ವಿವಿಧ ರೀತಿಯ ಮೇಲ್ಮೈ ಲಕ್ಷಣಗಳು, ವಾಯುಗುಣ, ಸ್ವಾಭಾವಿಕ ಸಸ್ಯವರ್ಗಗಳು ಹಾಗೂ
ಜನರಲ್ಲಿನ ವೈವಿಧ್ಯತೆಗಳನ್ನು ಗಮನಿಸಿದಾಗ ಇದನ್ನು ಒಂದು ಉಪಖಂಡ ಎಂದು ಕರೆಯಬಹುದಾಗಿದೆ.
ಭಾರತದ ಭೂಸ್ವರೂಪವನ್ನು 4 ಪ್ರಧಾನ ವಿಭಾಗಗಳಾಗಿ
ವಿಂಗಡಿಸಲಾಗಿದೆ.
1. ಹಿಮಾಲಯ ಪರ್ವತಗಳು
2. ಉತ್ತರದ ಮಹಾ ಮೈದಾನಗಳು
3. ಪರ್ಯಾಯ ಪ್ರಸ್ಥ ಭೂಮಿ
4. ಕರಾವಳಿ ಪ್ರದೇಶಗಳು ಮತ್ತು ದ್ವೀಪಗಳು
1. ಹಿಮಾಲಯ ಪರ್ವತಗಳು
ಸು 25 ಕೋಟಿ ವರ್ಷಗಳ ಹಿಂದೆ ಪ್ಯಾಂಜಿಯ
ಭೂಭಾಗ ಒಡೆದು ಅದರಿಂದ ಬೇರೆಯಾದ ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ
ಚಲಿಸಲಾರಂಭಿಸಿತು. ಸು 4-7 ಕೋಟಿ ವರ್ಷಗಳ ಹಿಂದೆ
ಇಂಡೋ-ಆಸ್ಟ್ರೇಲಿಯನ್ ಭೂಭಾಗ ಮತ್ತು ಯೂರೇಷ್ಯನ್ ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ
ಪರ್ವತಗಳು ಸೃಷ್ಟಿಯಾದವು. ಇದರ ಪರಿಣಾಮವಾಗಿ ಈಗ ಭಾರತವಿರುವ ಪ್ರದೇಶದಲ್ಲಿದ್ದ
ಟೆತಿಸ್ ಎಂಬ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು.
ಈ ಹಿಮಾಲಯ ಪರ್ವತ ಶ್ರೇಣಿಯು ಮಡಿಕೆ ಪರ್ವತ ಶ್ರೇಣಿಯಾಗಿದೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿ
ಕಂಡುಬರುವ ಸರೋವರಗಳಲ್ಲಿ ಪ್ಯಾಂಗಾಂಗ್ ತ್ಸೋ ಸರೋವರ ಅತಿ ದೊಡ್ಡದು. ಭಾರತ/ಟಿಬೆಟ್ ಸರಹದ್ದಿನ
ಬಳಿಯಿರುವ ಈ ಸರೋವರವು ಸುಮಾರು 8 ಕಿ.ಮೀ. ಅಗಲ ಹಾಗೂ 134 ಕಿ.ಮೀ. ಉದ್ದವಿದ್ದು, 4600 ಮೀ. ಎತ್ತರದಲ್ಲಿದೆ.
ಸಿಕ್ಕಿಂನಲ್ಲಿರುವ ಗುರುಡೋಗ್ಮಾರ್, ಛಾಂಗು ಸರೋವರ ಇವು ಇತರ ಪ್ರಮುಖ
ಸರೋವರಗಳು.
ಹಿಮನದಿಗಳ ಚಟುವಟಿಕೆಯಿಂದ ಸೃಷ್ಟಿಯಾದ ಸರೋವರಗಳಿಗೆ ಟಾರ್ನ್ ಗಳೆಂದು ಕರೆಯುತ್ತಾರೆ. ಈ
ಟಾರ್ನ್ ಗಳು ಹಿಮಾಲಯದಲ್ಲಿ ಸು 5500 ಮೀ. ಗಿಂತ ಹೆಚ್ಚು ಎತ್ತರದಲ್ಲಿ
ಕಂಡುಬರುತ್ತವೆ.
ಪಶ್ಚಿಮದಲ್ಲಿ ಪಾಮಿರ್ ಗ್ರಂಥಿಯಿಂದ (ಗ್ರಂಥಿ ಎಂದರೆ ಅನೇಕ ಪರ್ವತ ಶ್ರೇಣಿಗಳ ಸಮೂಹ)
ಪ್ರಾರಂಭಗೊಂಡು ಪೂರ್ವದಲ್ಲಿ ನಾಗಾಲ್ಯಾಂಡ್‍ವರೆಗೆ ಸು. 2500 ಕಿ.ಮೀ ಉದ್ದವನ್ನು ಹೊಂದಿದೆ. ಹಿಮಾಲಯ ಪರ್ವತ ಶ್ರೇಣಿಯು ಮಡಿಕೆ ಪರ್ವತ ಶ್ರೇಣಿಯಾಗಿದೆ.
ಇದರಲ್ಲಿ ಮತ್ತೇ 3 ವಿಭಾಗಗಳಿವೆ.
1.ಮಹಾ ಹಿಮಾಲಯ/ಹಿಮಾದ್ರಿ
ಹಿಮಾಲಯದ ಪರ್ವತ ಶ್ರೇಣಿಗಳಲ್ಲಿಯೇ ಇದು ಅತಿ ಎತ್ತರವಾದುದು. ಸಮುದ್ರಮಟ್ಟದಿಂದ ಸು 6000-8000 ಕಿ.ಮೀವರೆಗೂ ಎತ್ತರದಲ್ಲಿದೆ. ಈ ಮಹಾ
ಹಿಮಾಲಯವು ಪಶ್ಚಿಮದಲ್ಲಿ ನಂಗಾಪರ್ವತದಿಂದ ಪೂರ್ವದಲ್ಲಿ ನಾಮ್ಚಾಬರ್ವಾವರೆಗೆ ಹರಡಿಕೊಂಡಿದೆ.
ಪ್ರಪಂಚದಲ್ಲಿಯೇ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ನೇಪಾಳ ಮತ್ತು ಟಿಬೆಟ್ (ಚೀನಾ)ಗಳ
ಮಧ್ಯೆ ಕಂಡುಬರುತ್ತದೆ. ಇದರ ಎತ್ತರ 8848 ಮೀ. ಭಾರತದ ಅತ್ಯುನ್ನತವಾದ ಶಿಖರ ಕೆ2 ಅಥವಾ ಮೌಂಟ್ ಗಾಡ್ವಿನ್ ಅಸ್ಟಿನ್ ಸಹ ಇಲ್ಲಿಯೇ ಕಂಡುಬರುತ್ತದೆ. ಕೆ2 ಪ್ರಪಂಚದ ಎರಡನೇ ಎತ್ತರದ
ಶಿಖರವಾಗಿದ್ದು ಇದರ ಎತ್ತರ 8611 ಮೀ.
ಈ ಹಿಮಾದ್ರಿಯಲ್ಲಿ ಅನೇಕ ಹಿಮನದಿಗಳು ಉಗಮವಾಗುತ್ತವೆ. ಅವುಗಳಲ್ಲಿ ಪ್ರಮುಖವಾದುದು
ಗಂಗೋತ್ರಿ. ಇದು ಗಂಗಾ ನದಿಯ ಉಗಮ ಸ್ಥಾನವೆನಿಸಿದೆ.
ಇಲ್ಲಿ ಕಂಡುಬರುವ ಸಿಯಾಚಿನ್ ಪ್ರದೇಶವನ್ನು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ ಎಂದು
ಕರೆಯುತ್ತಾರೆ
ಕಾಶ್ಮೀರದಲ್ಲಿ ಬುರ್ಜಿಲ್, ಜೋಜಿಲಾ ಮತ್ತು ಹಿಮಾಚಲ
ಪ್ರದೇಶದಲ್ಲಿ ಬಾರಾಲಾಚ್ ಕಣಿವೆ ಮಾರ್ಗಗಳು ಕಂಡುಬರುತ್ತವೆ.
2. ಮಧ್ಯ ಹಿಮಾಲಯ
ಈ ಹಿಮಾಲಯವು ಸಮುದ್ರ ಮಟ್ಟದಿಂದ ಸು 3600 – 4500 ಮೀಗಳಷ್ಟು ಎತ್ತರದಲ್ಲಿದೆ.
ಪ್ರಮುಖ ಪರ್ವತ ಶ್ರೇಣಿಗಳು : ಸಾಲಾಗಿ ಇರುವ ಪರ್ವತಗಳ ಸಮೂಹವನ್ನು ಪರ್ವತಶ್ರೇಣಿ
ಎನ್ನುವರು. ಪೀರ್ ಪಂಜಾಲ್ (ಜಮ್ಮು ಮತ್ತು ಹಿಮಾಚಲ್ ಪ್ರದೇಶ), ಧವಲ್‍ದರ್/ಧೌಲಾಧರ್ (ಹಿಮಾಚಲ ಪ್ರದೇಶ್), ಮಸ್ಸೂರಿ, ನಾಗ್‍ತಿಬ್ಬ (ಉತ್ತರಾಖಂಡ್)
ಪ್ರಮುಖ ಕಣಿವೆಗಳು : ಬೆಟ್ಟ ಅಥವಾ ಪರ್ವತಗಳ ನಡುವಿನ ಪ್ರದೇಶವನ್ನು ಕಣಿವೆ ಎನ್ನುವರು.
ಕಾಂಗ್ರಾ, ಕುಲು, ಲಾಹುಲ್ ಕಣಿವೆಗಳು ಹಿಮಾಚಲ ಪ್ರದೇಶದಲ್ಲಿ ಕಂಡುಬರುತ್ತವೆ, ಕಾಶ್ಮೀರ
ಕಣಿವೆ ಜಮ್ಮುವಿನಲ್ಲಿ ಕಂಡುಬರುತ್ತದೆ.
ಪ್ರಮುಖ ಗಿರಿಧಾಮಗಳು : ಗಿರಿಧಾಮಗಳು ಎಂದರೆ ಪರ್ವತಗಳ ತುದಿಯಲ್ಲಿ ಉಳಿದುಕೊಳ್ಳಲು
ಮಾಡಿಕೊಂಡಿರುವ ನಿವಾಸಗಳು. ಸಿಮ್ಲಾ, ಚಕ್ರಾತ (ಹಿಮಾಚಲ್ ಪ್ರದೇಶ), ರಾಣೀಖೇತ್, ಮಸ್ಸೂರಿ, ನೈನಿತಾಲ್ (ಉತ್ತರಾಖಂಡ್), ಡಾರ್ಜಿಲಿಂಗ್ (ಪ.ಬಂಗಾಳ)
3. ಶಿವಾಲಿಕ್ ಪಾದ ಬೆಟ್ಟಗಳು
ಈ ಹಿಮಾಲಯ ಪರ್ವತ ಶ್ರೇಣಿಯು ಸಮುದ್ರಮಟ್ಟದಿಂದ ಸು 600 - 1300 ಮೀ ಎತ್ತರದಲ್ಲಿದೆ. ಮತ್ತು ಸು 1600 ಕಿ.ಮೀ ಉದ್ದವಾಗಿದೆ.
ಇಲ್ಲಿ ಕಂಡುಬರುವ ಸಮತಟ್ಟಾದ ಪ್ರದೇಶಗಳನ್ನು ಡೂನ್‍ಗಳೆಂದು ಕರೆಯುವರು. ಡೆಹರಾಡೂನ್, ಪಾಟ್ಲಿ, ಚೌಕಾಂಬಾ (ಉತ್ತರಾಖಂಡ), ಉದಾಂಪುರ (ಜಮ್ಮು), ಕೋಟ್ಲಾ (ಹಿಮಾಚಲ್ ಪ್ರದೇಶ) ಮತ್ತು ಕೋಟಾ ಇಲ್ಲಿ ಕಂಡುಬರುವ ಪ್ರಮುಖ ಡೂನ್‍ಗಳು.
ಡೆಹರಾಡೂನ್ ನಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿ ಮತ್ತು ಅರಣ್ಯ ಸಂಶೋಧನಾ
ಸಂಸ್ಥೆ, ಭಾರತೀಯ ಮಿಲಿಟರಿ ಅಕಾಡೆಮಿ, ತೈಲ ಮತ್ತು ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ ಲಿಮಿಟೆಡ್‍ನ ಕೇಂದ್ರ ಕಛೇರಿ ಇದೆ.
ಮಸ್ಸೂರಿಯಲ್ಲಿ ಐ.ಎ.ಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಲಾಲ್ ಬಹಾದ್ದೂರ್ ಶಾಸ್ತ್ರಿ
ಅಡ್ಮಿನಿಸ್ಟ್ರೇಟಿವ್ ಅಕಾಡೆಮಿ ಇದೆ.
ಚಹಾ, ಕೇಸರಿ ಮತ್ತು ಸೇಬು ಹಿಮಾಲಯದ
ಪ್ರಸಿದ್ಧ ಬೆಳೆಗಳಾಗಿವೆ.
2. ಉತ್ತರದ ಮಹಾ ಮೈದಾನಗಳು
ಇದನ್ನು ಗಂಗಾ-ಸಟ್ಲೇಜ್ ಬಯಲು ಪ್ರದೇಶ ಎಂತಲೂ ಕರೆಯುವರು. ಇದರ ಒಟ್ಟು ವಿಸ್ತೀರ್ಣ 6,52,000 ಚ.ಕಿ.ಮೀಗಳು
ಭಾರತದ 40% ಜನರು ಇಲ್ಲಿ ವಾಸ
ಮಾಡುತ್ತಿರುವುದರಿಂದ ಈ ಪ್ರದೇಶವನ್ನು ಭಾರತದ ಹೃದಯ ಭಾಗ ಎನ್ನುವರು.
ಉತ್ತರ ಭಾರತದ ಮೈದಾನವು ಮೆಕ್ಕಲು ಮಣ್ಣಿನಿಂದ ನಿರ್ಮಾಣವಾಗಿದೆ. ಈ ಮೆಕ್ಕಲು ಮಣ್ಣಿನಲ್ಲಿ 3 ವಿಧಗಳಿವೆ ಬಬರ್, ಭಂಗರ್ ಮತ್ತು ಖದರ್.
ಬಬರ್ ಎಂದರೆ ಹಿಮಾಲಯ ಪರ್ವತ ಪ್ರದೇಶಗಳಿಂದ ಹರಿದು ಬರುವ ನದಿಗಳು ಬಯಲು ಪ್ರದೇಶವನ್ನು
ಪ್ರವೇಶಿಸುವಾಗ ತಮ್ಮೊಡನೆ ಹೊತ್ತು ತಂದ ದಪ್ಪನೆಯ ಶಿಲಾಚೂರುಗಳನ್ನು ಹರಡುವ/ಸಂಚಯಿಸುವ ಸ್ಥಳವಾಗಿದೆ.
ಭಂಗರ್ ಎಂಬುದು ಪುರಾತನ ಕಾಲದಲ್ಲಿ ಸಂಚಯನಗೊಂಡ ಮೆಕ್ಕಲು ಮಣ್ಣಿನ ವಲಯವಾಗಿದೆ,
ಖದರ್ ಎಂಬುದು ಇತ್ತೀಚಿಗೆ ಸಂಚಯನಗೊಂಡ ಮೆಕ್ಕಲು ಮಣ್ಣಿನ ವಲಯವಾಗಿದೆ.
3. ಪರ್ಯಾಯ ಪ್ರಸ್ಥ ಭೂಮಿ
ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತಿ ಪುರಾತನವಾದುದು ಮತ್ತು ಅತಿ ವಿಶಾಲವಾದುದು ಈ ಪರ್ಯಾಯ
ಪ್ರಸ್ಥಭೂಮಿ. ಪರ್ಯಾಯ ಪ್ರಸ್ಥಭೂಮಿಯ ಒಟ್ಟು ವಿಸ್ತೀರ್ಣ 16 ಲಕ್ಷ ಚ.ಕಿ.ಮೀಗಳು.
ಪರ್ಯಾಯ ಪ್ರಸ್ಥಭೂಮಿಯಲ್ಲಿ ಮಾಳ್ವ, ದಖನ್, ಛೋಟಾ ನಾಗ್ಪುರ್ ಎಂಬ ಮೂರು ಭಾಗಗಳನ್ನು ಕಾಣುತ್ತೇವೆ. ಈ
ಪ್ರಸ್ಥಭೂಮಿಗಳ ಒಟ್ಟು ವಿಸ್ತೀರ್ಣ 7.05.000 ಚ.ಕಿ.ಮೀಗಳು
1. ಮಾಳ್ವಾ ಪ್ರಸ್ಥಭೂಮಿ
ನೋಡಲು ತ್ರಿಭುಜಾಕಾರವಾಗಿ ಕಾಣುವ ಇದು ರಾಜಸ್ಥಾನದಲ್ಲಿರುವ ಅರಾವಳಿ ಬೆಟ್ಟಗಳಿಂದ ಹಿಡಿದು
ಮಧ್ಯಪ್ರದೇಶದಲ್ಲಿರುವ ವಿಂಧ್ಯಪರ್ವತಗಳವರೆಗೆ ಹರಡಿದೆ. ಗುರುಶಿಖರ ಇಲ್ಲಿ ಕಂಡುಬರುವ ಅತಿ
ಎತ್ತರದ ಶಿಖರವಾಗಿದೆ. ಈ ಶಿಖರವನ್ನು ಪಳೆಯುಳಿಕೆಗಳ ಶಿಖರ ಎನ್ನುವರು.
ಅರಾವಳಿ ಬೆಟ್ಟಗಳಲ್ಲಿ ಕಂಡುಬರುವ ಮೌಂಟ್ ಅಬು ಗಿರಿಧಾಮವು ಇಲ್ಲಿನ ಇನ್ನೊಂದು ಪ್ರಮುಖ
ಆಕರ್ಷಣೆಯಾಗಿದೆ.
2. ದಖನ್ ಪ್ರಸ್ಥಭೂಮಿ
ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು ಹಾಗೂ ಅತಿ ಪುರಾತನವಾದ ಭೂಭಾಗ ಈ ಪರ್ಯಾಯ
ಪ್ರಸ್ಥಭೂಮಿ.
ದಖನ್ ಪ್ರಸ್ಥಭೂಮಿಯು ಮಧ್ಯಪ್ರದೇಶದ ಮಹಾದೇವ ಬೆಟ್ಟಗಳು, ಸಾತ್ಪುರ ಬೆಟ್ಟಗಳು, ಅಮರಕಂಟಕ ಬೆಟ್ಟಗಳು, ಝಾರ್ಖಾಂಡ್ ನ ರಾಜ್‍ಮಹಲ್ ಬೆಟ್ಟಗಳು ಮತ್ತು ಛತ್ತೀಸ್‍ಘರ್ ನ ಮೈಕಲಾ ಪರ್ವತ ಶ್ರೇಣಿ, ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳು, ಪೂರ್ವದಲ್ಲಿ ಪೂರ್ವ ಘಟ್ಟಗಳಿಂದ
ಸುತ್ತುವರಿದಿದೆ.
3. ಛೋಟಾ ನಾಗ್ಪುರ ಪ್ರಸ್ಥಭೂಮಿ
ಈ ಪ್ರಸ್ಥಭೂಮಿಯು ಝಾರ್ಖಾಂಡ್ ರಾಜ್ಯದಲ್ಲಿ ಹೆಚ್ಚಾಗಿ ವ್ಯಾಪಿಸಿದ್ದು ಒಡಿಶಾ, ಪ.ಬಂಗಾಳ, ಬಿಹಾರ ಮತ್ತು ಛತ್ತಿಸ್‍ಘರ್‍ಗಳಲ್ಲಿ
ಸ್ವಲ್ಪಮಟ್ಟಿಗೆ ಕಂಡುಬರುತ್ತದೆ. ಈ ಪ್ರದೇಶವನ್ನು ಭಾರತದ ರ್ಹೂರ್ ಎನ್ನುವರು. ಛೋಟಾ ನಾಗ್ಪುರ
ಪ್ರಸ್ಥಭೂಮಿಯನ್ನು ಜರ್ಮನಿಯಲ್ಲಿರುವ ವಿಶ್ವಪ್ರಸಿದ್ಧ ಕಲ್ಲಿದ್ದಲು ಗಣಿಗಾರಿಕೆಯ ಪ್ರದೇಶವಾದ
ರ್ಹೂರ್ ಪ್ರದೇಶಕ್ಕೆ ಹೋಲಿಸಲಾಗಿದೆ.
ಕರಾವಳಿ ಪ್ರದೇಶಗಳು ಮತ್ತು ದ್ವೀಪಗಳು
ಭಾರತದ ಕರಾವಳಿಯನ್ನು ಪೂರ್ವ ಹಾಗೂ ಪಶ್ಚಿಮ ಕರಾವಳಿ ಎಂದು ಎರಡು ಭಾಗಗಳಾಗಿ
ವಿಂಗಡಿಸುತ್ತೇವೆ.
ಪಶ್ಚಿಮ
ಕರಾವಳಿ
ಪಶ್ಚಿಮ ಕರಾವಳಿಯು ಅರಬ್ಬಿ ಸಮುದ್ರದ ಕಡೆ ಗುಜರಾತ್‍ನಿಂದ ತಮಿಳುನಾಡಿನ
ಕನ್ಯಾಕುಮಾರಿಯವರೆಗೆ ಹರಡಿದೆ. ಇದರ ಒಟ್ಟು ಉದ್ದ 1500 ಕಿ.ಮೀಗಳು. ಪಶ್ಚಿಮ ಕರಾವಳಿಯನ್ನು ಗುಜರಾತ್‍ನಲ್ಲಿ ಕಛ್ ಹಾಗೂ
ಕಾಥೇವಾಡ ತೀರ ಎಂತಲೂ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಕೊಂಕಣ
ತೀರವೆಂತಲೂ, ಕರ್ನಾಟಕದಲ್ಲಿ ಕೆನರಾ ತೀರ ಎಂತಲೂ, ಕೇರಳದಲ್ಲಿ ಮಲಬಾರ್ ತೀರ ಎಂದು ಕರೆಯುವರು. ಪಶ್ಚಿಮ ಕರಾವಳಿಯಲ್ಲಿ ಗುಜರಾತ್ ಅತಿ
ಉದ್ದದ ಕರಾವಳಿ ತೀರವನ್ನು ಹೊಂದಿರುವ ರಾಜ್ಯವಾಗಿದೆ.
ಮಾನ್ಸೂನ್ ಮಾರುತಗಳ ನೇರವಾದ ಹಾವಳಿಯಿಂದ ಇಲ್ಲಿ ಸ್ವಾಭಾವಿಕ ಬಂದರುಗಳ ಪ್ರಮಾಣ ಕಡಿಮೆ.
ಪಶ್ಚಿಮ ತೀರದ ಬಂದರುಗಳು : ಗುಜರಾತ್ - ಕಾಂಡ್ಲಾ, ಮಹಾರಾಷ್ಟ್ರ - ಮುಂಬಯಿ ಬಂದರು (ಭಾರತದ ಹೆಬ್ಬಾಗಿಲು), ಜವಹರಲಾಲ್ ನೆಹರು ಬಂದರು (ನವಶೇವ ಬಂದರು), ಗೋವಾ - ಮರ್ಮಗೋವ
(ಜುವಾರಿ ನದಿಯ ದಂಡೆಯ ಮೇಲಿದೆ), ಕರ್ನಾಟಕ - ನವಮಂಗಳೂರು (ಕರ್ನಾಟಕದ
ಹೆಬ್ಬಾಗಿಲು), ಕೇರಳ - ಕೊಚ್ಚಿ (ಅರಬ್ಬೀ ಸಮುದ್ರದ ರಾಣಿ)
ಪೂರ್ವ ಕರಾವಳಿ
ಈ ಕರಾವಳಿಯು ಪ.ಬಂಗಾಳದಿದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಹರಡಿದೆ. ಈ ಕರಾವಳಿಯು
ಬಹುತೇಕ ಸಮತಟ್ಟಾಗಿದೆ.
ಇಲ್ಲಿ ಗಂಗಾ, ಕೃಷ್ಣಾ, ಮಹಾನದಿ, ಕಾವೇರಿ ನದಿ ಮುಖಜ ಭೂಮಿಗಳು
ಕಂಡುಬರುತ್ತವೆ.
ಪ.ಬಂಗಾಳ ಮತ್ತು ಒಡಿಶಾದ ಕರಾವಳಿ ತೀರವನ್ನು ಉತ್ಕಲ ತೀರವೆಂದು, ಆಂದ್ರಪ್ರದೇಶ ಮತ್ತು ತಮಿಳುನಾಡು ತೀರವನ್ನು ಕೋರಮಂಡಲ ತೀರವೆಂದು ಕರೆಯುವರು.
ಪೂರ್ವ ತೀರದ ಬಂದರುಗಳು : ತಮಿಳುನಾಡು - ತೂತುಕುಡಿ, ಚೆನ್ನೈ, ಎನ್ನೋರ್/ಕಾಮರಾಜ,
ಒಡಿಶಾ – ಪಾರಾದೀಪ್, ಆಂಧ್ರಪ್ರದೇಶ – ವಿಶಾಖಪಟ್ಟಣ, ಪಶ್ಚಿಮ ಬಂಗಾಳ – ಹಾಲ್ಡಿಯ
(ಹೂಗ್ಲಿ ಮತ್ತು ಹಾಲ್ಡಿ ನದಿಗಳ ಸಂಗಮ ಸ್ಥಳದಲ್ಲಿ), ಕೊಲ್ಕತ್ತ, ಅಂಡಮಾನ್ ಮತ್ತು ನಿಕೊಬಾರ್ - ಪೋರ್ಟ್ ಬ್ಲೇರ್
ಪೂರ್ವದ ಘಟ್ಟಗಳ ನಡುವಿನ ಕಣಿವೆಗಳ ಮೂಲಕ ಭೂಭಾಗದೊಳಗೆ ನುಗ್ಗುವ ಬಂಗಾಳ ಕೊಲ್ಲಿಯ ನೀರು
ಸಂಗ್ರಹಗೊಂಡು ನೀರಿನ ದೊಡ್ಡ ಆಕರಗಳಾಗಿ ನಿರ್ಮಾಣವಾಗುತ್ತವೆ. ಇವುಗಳನ್ನು ಲಗೂನ್‍ಗಳು ಎನ್ನುವರು
ಹಾಗೆ ನಿರ್ಮಾಣವಾದವುಗಳೆ ಒರಿಸ್ಸಾದ ಚಿಲ್ಕಾ ಹಾಗೂ ತಮಿಳುನಾಡಿನ ಪುಲಿಕಾಟ್ ಸರೋವರಗಳು. ಇವು
ಉಪ್ಪುನೀರಿನ ಸರೋವರಗಳಾಗಿವೆ.
ದ್ವೀಪಗಳು
ಭಾರತ 247 ದ್ವೀಪಗಳನ್ನು ಒಳಗೊಂಡಿದೆ. ಇವುಗಳಲ್ಲಿ 204 ದ್ವೀಪಗಳು
(ಅಂಡಮಾನ್ ಮತ್ತು ನಿಕೋಬಾರ್) ಬಂಗಾಳ ಕೊಲ್ಲಿಯಲ್ಲಿ ಮತ್ತು 43 ದ್ವೀಪಗಳು
(ಲಕ್ಷದ್ವೀಪ) ಅರಬ್ಬಿ ಸಮುದ್ರದಲ್ಲಿವೆ.
ಅಂಡಮಾನ್ & ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿವೆ. ಬ್ಯಾರನ್
ಮತ್ತು ನಾರ್ಕೊಂಡಾಮ್ ಇಲ್ಲಿ ಕಂಡುಬರುವ ಪ್ರಮುಖ ಜ್ವಾಲಾಮುಖಿ ದ್ವೀಪಗಳು.
ಮಧ್ಯ ಅಂಡಮಾನ್ ಮತ್ತು ಗ್ರೇಟ್ ನಿಕೋಬಾರ್ ದ್ವೀಪಗಳು ಭಾರತದ ಅತಿದೊಡ್ಡ ದ್ವೀಪಗಳೆನಿಸಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 10 ಡಿಗ್ರಿ ಉತ್ತರ ರೇಖಾಂಶವು ಬೇರ್ಪಡಿಸುತ್ತದೆ.
ಲಕ್ಷದ್ವೀಪಗಳು ಅರಬ್ಬಿ ಸಮುದ್ರದಲ್ಲಿ ಕೇರಳದ ಸಮೀಪ ಕಂಡುಬರುತ್ತವೆ. ಲಕ್ಷದ್ವೀಪಗಳು
ಹವಳಗಳಿಂದ ನಿರ್ಮಿತವಾಗಿವೆ ಹಾಗಾಗಿ ಇವುಗಳನ್ನು ಹವಳದ ದ್ವೀಪಗಳೆಂದು ಸಹ ಕರೆಯುವರು. ಅಲ್ಲದೇ
ಇವುಗಳಿಗೆ ಕಣ್ಣಾನೂರ್ ದ್ವೀಪಗಳೆಂಬ ಹೆಸರು ಸಹ ಇದೆ.
ಅಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯ ಮಧ್ಯದಲ್ಲಿ ಕಂಡುಬರುವ ಮಜೌಲಿ ದ್ವೀಪವು ಭಾರತದ ಅತಿದೊಡ್ಡ ನದಿದ್ವೀಪವಾಗಿದೆ. ಇದರ ವಿಸ್ತೀರ್ಣ 1250 ಚ.ಕಿ.ಮೀಗಳು. ಈ ದ್ವೀಪವನ್ನು ದೇಶದ ಮೊದಲ ದ್ವೀಪ ಜಿಲ್ಲೆಯಾಗಿ ಘೋಷಿಸಲಾಗಿದೆ.







ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ