ವಿಶ್ವ
ವಿಶ್ವ
ಸೌರವ್ಯೂಹ
ಸೂರ್ಯ ಶೇ 71 ರಷ್ಟು ಜಲಜನಕ ಮತ್ತು ಶೇ 26.5 ರಷ್ಟು ಹೀಲಿಯಂನಿಂದಾಗಿರುವ ಒಂದು ಮಧ್ಯಮ ಗಾತ್ರದ ನಕ್ಷತ್ರವಾಗಿದೆ. ಸೂರ್ಯನಲ್ಲಿ ಬೈಜಿಕ
ಸಮ್ಮಿಲನ ಕ್ರಿಯೆಯಿಂದ ಉಷ್ಣ ಮತ್ತು ಶಕ್ತಿ ಉತ್ಪತ್ತಿಯಾಗುತ್ತದೆ.
ಕ್ಷುದ್ರಗ್ರಹಗಳು
ಕ್ರಿ.ಪೂ 276-194 ರಲ್ಲಿ ಜೀವಿಸಿದ್ದ ಎರಟಾಸ್ತನಿಸ್ ಜಿಯೊಗ್ರಫಿ ಎಂಬ ಪದವನ್ನು
ಮೊದಲಿಗೆ ಬಳಸಿದನು, ಆದ್ದರಿಂದ ಈತನನ್ನು
ಭೂಗೋಳಶಾಸ್ತ್ರದ ಪಿತಾಮಹಾ ಎನ್ನುವರು. ಆಧುನಿಕ ಭೂಗೋಳಶಾಸ್ತ್ರದ ಪಿತಾಮಹಾ ಎಂದು ಹರ್ಮ್ ಬೋಲ್ಟ್
ನನ್ನು ಕರೆಯುತ್ತಾರೆ.
ವಿಶ್ವದ ಉಗಮದ ಸಿದ್ಧಾಂತಗಳು
ಜ್ಯೋತಿರ್ಮೇಘ
ಸಿದ್ಧಾಂತ - ಇಮ್ಯಾನುಯೆಲ್ ಕ್ಯಾಂಟ್ ಮತ್ತು
ಲ್ಯಾಪ್ಲೆಸ್
ಗ್ರಹಕಣ
ಸಿದ್ಧಾಂತ - ಫಾರೆಸ್ಟಾಯ್ ಮತ್ತು
ಚೇಂಬರ್ಲಿನ್
ಉಬ್ಬರವಿಳಿತ
ಸಿದ್ಧಾಂತ - ಹೆರಾಲ್ಡ್ ಜೆಫ್ರೀಸ್ ಮತ್ತು
ಜೇಮ್ಸ್ ಜೀನ್ಸ್
ಮಹಾಸ್ಫೋಟ
ಸಿದ್ಧಾಂತ - ಅಬ್ಬೆಜಾರ್ಜಸ್ ಲಿಮೈತ್ರಿ
ರಾತ್ರಿಯಲ್ಲಿ
ಅತಿ ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರ ಸಿರಿಯಸ್
ಯು.ವೈ
ಸ್ಕಟಿ ಎಂಬುದು ವಿಶ್ವದ ಅತಿ ದೊಡ್ಡ ನಕ್ಷತ್ರವಾಗಿದೆ.
ವಿಶ್ವದಲ್ಲಿನ
ಕಣ್ಣಿಗೆ ಕಾಣದ ಅಗೋಚರ ವಸ್ತುಗಳನ್ನು ಡಾರ್ಕ್ ಮ್ಯಾಟರ್ಸ್ ಎನ್ನುವರು
ಸೌರವ್ಯೂಹ
ಸೌರವ್ಯೂಹವು
ಸೂರ್ಯ ಮತ್ತು ಸೂರ್ಯನ ಸುತ್ತ ಸುತ್ತುತ್ತಿರುವ ಗ್ರಹಗಳು ಮತ್ತು ಇತರ ಆಕಾಶ ಕಾಯಗಳನ್ನು ಒಳಗೊಂಡ ಒಂದು ವ್ಯವಸ್ಥೆ. ನಮ್ಮ
ಸೌರವ್ಯೂಹವು ಪಿನ್ ವ್ಹೀಲ್ (ಆಕಾಶಗಂಗೆ) ಗ್ಯಾಲಕ್ಸಿಯಲ್ಲಿ ಕಂಡುಬರುತ್ತದೆ.
ಸೌರವ್ಯೂಹವು
ಒಂದು ದೊಡ್ಡ ಜ್ಯೋತಿರ್ಮೇಘದ ಗುರುತ್ವ ಕುಸಿತದಿಂದ 4.6 ಶತಕೋಟಿ ವರ್ಷಗಳ ಹಿಂದೆ (4.568 ಶತಕೋಟಿ ವರ್ಷಗಳು)
ರೂಪುಗೊಂಡಿತು ಎಂದು ಭಾವಿಸಲಾಗಿದೆ. ಸೌರ ವ್ಯವಸ್ಥೆಯ ಸಮೂಹದ 99% ದ್ರವ್ಯರಾಶಿ ಸೂರ್ಯನಲ್ಲಿದೆ.
ಸೂರ್ಯ
ಸೂರ್ಯನ
ಒಳಭಾಗವನ್ನು ಕ್ರೋಮೊಸ್ಪಿಯರ್ ಎಂದು ಕರೆದರೆ ಅದರ ಹೊರಭಾಗವನ್ನು ಫೋಟೋಸ್ಪಿಯರ್ ಎನ್ನುವರು.
ಸೂರ್ಯನ ಅತ್ಯಂತ ಹೊರಕವಚವನ್ನು ಕರೋನಾ ಎನ್ನುವರು
ಸೂರ್ಯನು
ಆಕಾಶಗಂಗೆ ಕ್ಷೀರಪಥವನ್ನು ಒಂದು ಬಾರಿಗೆ ಸುತ್ತು ಹಾಕಲು 250 ಮಿಲಿಯನ್ ವರ್ಷಗಳು ತೆಗೆದುಕೊಳ್ಳುತ್ತದೆ. ಇದನ್ನು ಕಾಸ್ಮಿಕ್ ಇಯರ್ ಎನ್ನುವರು.
ಕೊಪರ್ನಿಕಸ್‍ನು
ಸೂರ್ಯಕೇಂದ್ರಿಯ ಸಿದ್ಧಾಂತವನ್ನು ಮಂಡಿಸಿದನು, ಮುಂದೆ ಜೊಹಾನಸ್ ಕೆಪ್ಲರ್ ಗ್ರಹಗಳು ಸೂರ್ಯನ ಸುತ್ತ ವೃತ್ತಾಕಾರವಾಗಿ / ಅಂಡಾಕಾರವಾಗಿ
ಸುತ್ತುತ್ತವೆಂದು ಪ್ರತಿಪಾದಿಸಿದನು.
ಇಂಗಾಲ ಸಾರಜನಕ ಬೀಜ ಕ್ರಿಯಾಚಕ್ರ
ಸೂರ್ಯ ಒಂದು
ಮಧ್ಯಮ ಗಾತ್ರದ ನಕ್ಷತ್ರ. ಸೂರ್ಯನಲ್ಲಿರುವ ಪ್ರಮುಖ ಧಾತುಗಳು ಜಲಜನಕ ಮತ್ತು ಹೀಲಿಯಂ. ಉಳಿದಂತೆ
ಇಂಗಾಲ ಸಾರಜನಕಗಳನ್ನು ಕಾಣುತ್ತೇವೆ. ಇಂಗಾಲವು ಜಲಜನಕದ ಬೀಜವನ್ನು ಹೀರಿ ಸಾರಜನಕವಾಗಿ ಅನೇಕ
ಪ್ರಕ್ರಿಯೆಗಳ ನಂತರ ಮತ್ತೇ ಇಂಗಾಲವೇ ಆಗುವುದು. ಇದಕ್ಕೆ ಇಂಗಾಲ ಸಾರಜನಕ ಬೀಜ
ಕ್ರಿಯಾಚಕ್ರವೆನ್ನುವರು.
ಈ
ಕ್ರಿಯೆಯಿಂದ ಸೂರ್ಯನಲ್ಲಿರುವ ಸ್ವಲ್ಪ ವಸ್ತು ನಾಶವಾಗಿ ಅದರಿಂದ ಅಗಾಧ ಶಕ್ತಿ
ಬಿಡುಗಡೆಯಾಗುವುದು. ಈ ಶಕ್ತಿಯೇ ಸೂರ್ಯನ ವಿಸರಣ ಶಕ್ತಿ. ಅದರಿಂದಲೇ ಭೂಮಿಯ ಮೇಲಿನ ಜೀವಿಗಳು
ತಮಗೆ ಬೇಕಾದ ಶಾಖ ಮತ್ತು ಬೆಳಕನ್ನು ಪಡೆಯುತ್ತದೆ.
ಧೂಮಕೇತು
ಧೂಮಕೇತುಗಳು
ಧೂಳಿನ ಕಣಗಳು ಮತ್ತು ಹಿಮದಿಂದ ಕೂಡಿರುತ್ತವೆ. ಪ್ರಮುಖವಾದ ಧೂಮಕೇತುಗಳು ಹ್ಯಾಲಿ (76 ವರ್ಷಗಳಿಗೊಮ್ಮೆ ಗೋಚರಿಸುತ್ತದೆ), ಬಾಕ್ಸಸ್ (7 ವರ್ಷಗಳಿಗೊಮ್ಮೆ
ಗೋಚರಿಸುತ್ತದೆ), ವಿಲ್ಟಾ-2 (2 ವರ್ಷಗಳಿಗೊಮ್ಮೆ ಗೋಚರಿಸುತ್ತದೆ).
ಮಂಗಳ ಮತ್ತು
ಗುರುಗ್ರಹಗಳ ಕಕ್ಷೆಯ ನಡುವಿನಲ್ಲಿ ಕಂಡುಬರುವ ಅತಿ ಸಣ್ಣ ಆಕಾಶಕಾಯಗಳ ಪಟ್ಟಿ. ಅವು ಘನರೂಪಿ
ಗ್ರಹಗಳ ಹಾಗೆ ಹೆಚ್ಚಾಗಿ ಕಲ್ಲುಬಂಡೆ ಮತ್ತು ಲೋಹದ ವಸ್ತುಗಳ ಸಂಯೋಜನೆ ಹೊಂದಿವೆ.
ಅತ್ಯಂತ
ದೊಡ್ಡ ಕ್ಷುದ್ರಗ್ರಹವಾದ ಸೆರೆಸ್ ಅನ್ನು 1801 ರಲ್ಲಿ ಕಂಡುಹಿಡಿಯಲಾಯಿತು. ವೆಸ್ಟಾ ಎಂಬುದು ಅತಿ ಪ್ರಕಾಶಮಾನವಾದ ಕ್ಷುದ್ರಗ್ರಹವಾಗಿದೆ.
ಹೆಲಿಯೋಸ್ಪೆರಿಕ್ ಪ್ರವಾಹದ ಹಾಳೆ
ಸೂರ್ಯ
ಬೆಳಕಿನ ಜೊತೆಗೆ ಸೌರ ಮಾರುತವನ್ನು (ವಿದ್ಯತ್ ಆವೇಶ ಕಣಗಳುಳ್ಳ ಪ್ಲಾಸ್ಮಾ) ಹೊರಸೂಸುತ್ತದೆ. ಈ
ಸೌರ ಮಾರುತ ಗಂಟೆಗೆ ಸರಿಸುಮಾರು 1.5 ದಶಲಕ್ಷ ಕಿಲೋಮೀಟರ್
ವೇಗದಲ್ಲಿ ಹೊರಕ್ಕೆ ಚಿಮ್ಮುತ್ತದೆ. ಇದನ್ನೇ ಹೆಲಿಯೋಸ್ಪೆರಿಕ್ ಹಾಳೆ ಎನ್ನುವರು. ಈ
ಹೆಲಿಯೋಸ್ಪೆರಿಕ್ ಪ್ರವಾಹ ಹಾಳೆ ಎಂಬುದು ಸೂರ್ಯನನ್ನು ಸುತ್ತುತ್ತಿರುವ ಅಯಸ್ಕಾಂತೀಯ ಶಕ್ತಿಯಿಂದ
ಸೃಷ್ಟಿಯಾದ ಸುರುಳಿಯಾಕಾರದ ರೂಪ.
ಸೂರ್ಯನ
ಮೇಲ್ಮೈ ಸ್ಫೋಟದ ಜ್ವಾಲೆ (ಕರೋನಲ್ ಮಾಸ್) ಸೂರ್ಯನ ಮೇಲ್ಮೈಯಿಂದ ಆಯಸ್ಕಾಂತೀಯ ಕ್ಷೇತ್ರವನ್ನು
ಭೂಮಿಯ ಕಡೆ ತಳ್ಳುತ್ತದೆ. ಸೂರ್ಯನಿಂದ ಚಿಮ್ಮುವ ಸೌರ ಮಾರುತ ಭೂಮಿಯ ವಾತಾವರಣವನ್ನು
ಚದುರಿಸುವುದನ್ನು ಭೂಮಿಯ ಕಾಂತಕ್ಷೇತ್ರವು ತಡೆದು ತನ್ನ ವಾತಾವರಣವನ್ನು ಉಳಿಸಿಕೊಳ್ಳುತ್ತದೆ.
ಸೂರ್ಯನ
ಕಾಂತಕ್ಷೇತ್ರ ಮತ್ತು ಭೂಮಿಯ ಕಾಂತಕ್ಷೇತ್ರ ವಸ್ತುಗಳು ಪರಸ್ಪರ ಘರ್ಷಿಸಿ ಕಾಂತೀಯ ಧ್ರುವಗಳ ಬಳಿ
ಅರೋರಾ ಉಂಟಾಗುತ್ತದೆ.
ಉಲ್ಕೆಗಳು
ಆಕಾಶದಲ್ಲಿ
ಇವು ಸೂರ್ಯನ ಸುತ್ತ ಸುತ್ತುವಾಗ ಕೆಲವೊಮ್ಮೆ ಭೂಮಿಯ ಆಕರ್ಷಣೆಗೆ ಒಳಗಾಗಿ ನುಗ್ಗಿಬಂದು ಭೂಮಿಗೆ
ಅಪ್ಪಳಿಸುತ್ತವೆ. ಇವು ನಿಕ್ಕಲ್ ಮತ್ತು ಫೆರಸ್‍ಗಳಿಂದ ಕೂಡಿರುತ್ತವೆ.
ಗ್ರಹಗಳು
ಗ್ರಹಗಳನ್ನು
ಎರಡು ವಿಧಗಳಾಗಿ ವಿಂಗಡಿಸಬಹುದು. ಬುಧ, ಶುಕ್ರ, ಭೂಮಿ, ಮಂಗಳ ಇವುಗಳನ್ನು ಒಳ
ಗ್ರಹಗಳು ಅಥವಾ ಘನರೂಪೀ ಗ್ರಹಗಳು ಎನ್ನುವರು. ಇವು ಗಾತ್ರದಲ್ಲೂ ಭಾರದಲ್ಲೂ ಚಿಕ್ಕವು ಆದರೆ
ಇವುಗಳ ಸಾಂದ್ರತೆ ಅಧಿಕ.
ಗುರು, ಶನಿ, ಯುರೇನಸ್ ಮತ್ತು
ನೆಪ್ಚೂನ್ ಗಳನ್ನು ಹೊರಗ್ರಹಗಳು ಅಥವಾ ದೈತ್ಯ ಗ್ರಹಗಳು ಎನ್ನುವರು. ಇವು ಅಲ್ಪ ಸಾಂದ್ರತೆಯ ಆದರೆ
ಅಧಿಕ ಭ್ರಮಣವೇಗದ ಭಾರಗ್ರಹಗಳು. ಗುರು ಮತ್ತು ಶನಿ ಅನಿಲ ದೈತ್ಯಗಳೆಂದೆನಿಸಿದ್ದು ಜಲಜನಕ ಮತ್ತು
ಹೀಲಿಯಂನಿಂದ ತುಂಬಿಕೊಂಡಿವೆ.
ಯುರೇನಸ್
ಮತ್ತು ನೆಪ್ಚೂನ್‍ಗಳು ಹಿಮ ದೈತ್ಯಗಳೆಂದು ಪ್ರಸಿದ್ಧಿಯಾಗಿವೆ. ಅವು ಬಹುತೇಕ ಜಲಜನಕ, ಹೀಲಿಯಂ, ಅಮೋನಿಯ ಮತ್ತು
ಮೀಥೇನ್ ಮಂಜಿನಿಂದ ತುಂಬಿದ್ದು ಉಳಿದ ಗ್ರಹಗಳಿಗೆ ಹೋಲಿಸಿದರೆ ಹೆಚ್ಚು ಕರಗುವ ಬಿಂದುವುಳ್ಳ
ವಸ್ತುಗಳಿಂದಾಗಿವೆ.
ಬುಧ
ಇದು
ಸೂರ್ಯನಿಗೆ ಅತಿಸಮೀಪದ ಗ್ರಹ ಮತ್ತು ಸೌರವ್ಯೂಹದ ಚಿಕ್ಕ ಗ್ರಹವಾಗಿದ್ದು ತನ್ನ ಮೇಲ್ಮೈಯಲ್ಲಿ
ಯಾವುದೇ ವಾತಾವರಣವನ್ನು ಹೊಂದಿಲ್ಲ.
ಬುಧಗ್ರಹದ
ಮೇಲ್ಪದರದಲ್ಲಿ ಹೈಡ್ರೋಜನ್, ಹೀಲಿಯಂ, ಸೋಡಿಯಂ, ಪೊಟ್ಯಾಷಿಯಂ, ಕ್ಯಾಲ್ಸಿಯಂ ಮತ್ತು
ಮೆಗ್ನೇಷಿಯಂಗಳು ಕಂಡುಬರುತ್ತವೆ.
ಬುಧ
ಗ್ರಹಕ್ಕೆ ಯಾವುದೇ ನೈಸರ್ಗಿಕ ಉಪಗ್ರಹಗಳಿಲ್ಲ
ಇದರ ಭ್ರಮಣದ
(ತನ್ನ ಸುತ್ತ ಸುತ್ತಲು) ಅವಧಿ 58 ದಿನಗಳು.
ಪರಿಭ್ರಮಣದ (ಸೂರ್ಯನ ಸುತ್ತ ಸುತ್ತಲು) ಅವಧಿ 87 ದಿನಗಳು
ಶುಕ್ರ
ಶುಕ್ರಗ್ರಹ
ಸೌರವ್ಯೂಹದ 6ನೇ ಅತಿದೊಡ್ಡ ಗ್ರಹವಾಗಿದೆ. ಶುಕ್ರಗ್ರಹದ
ವಾಯುಮಂಡಲ ಭೂಮಿಯ ತೊಂಬತ್ತು ಪಟ್ಟು ಸಾಂದ್ರವಾಗಿದ್ದು ಇದರ ವಾತಾವರಣದಲ್ಲಿ 98% ಇಂಗಾಲದ ಡೈ ಆಕ್ಸೈಡ್ ತುಂಬಿಕೊಂಡಿದೆ ಹಾಗಾಗಿ ಇದರ ಮೇಲ್ಮೈ ತಾಪಮಾನ 400 ಡಿಗ್ರಿ ಸೆಲ್ಸಿಯಸ್ (752 ಫ್ಯಾರನ್ ಹೀಟ್) ಇದೆ. ಈ ತಾಪಮಾನವು ಶುಕ್ರಗ್ರಹವನ್ನು ಸೌರವ್ಯೂಹದಲ್ಲಿಯೇ ಅತೀ ಹೆಚ್ಚಿನ
ಉಷ್ಣಗ್ರಹವಾಗಿಸಿದೆ.
ಶುಕ್ರ ಗ್ರಹ
ಅತಿ ಹೆಚ್ಚಿನ ಭ್ರಮಣ ಅವಧಿ ಹೊಂದಿರುವ ಗ್ರಹವಾಗಿದ್ದು ಇದರ ಭ್ರಮಣ ಅವಧಿ 243 ದಿನಗಳು. ಶುಕ್ರಗ್ರಹದ ಪರಿಭ್ರಮಣ ಅವಧಿಯು 224 ದಿನಗಳಾಗಿದೆ.
ಶುಕ್ರಗ್ರಹವು
ಪೂರ್ವದಿಂದ ಪಶ್ಚಿಮಕ್ಕೆ ಭ್ರಮಿಸುವುದರಿಂದ ಇಲ್ಲಿ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ
ಮುಳುಗಿದಂತೆ ಭಾಸವಾಗುತ್ತದೆ.
ಶುಕ್ರನನ್ನು
ಭೂಮಿಯ ಅವಳಿ ಗ್ರಹ, ಹಸಿರುಮನೆ ಗ್ರಹ, ಬೆಳ್ಳಿ ಚುಕ್ಕಿ, ಸಂಜೆಯ ನಕ್ಷತ್ರ, ಮುಂಜಾನೆಯ ನಕ್ಷತ್ರ
ಎಂದೆಲ್ಲಾ ಕರೆಯುವರು. ಶುಕ್ರ ಯಾವುದೇ ನೈಸರ್ಗಿಕ ಉಪಗ್ರಹಗಳನ್ನು ಹೊಂದಿಲ್ಲ.
ಇಡೀ
ಸೌರವ್ಯೂಹದಲ್ಲಿಯೇ ಅತಿ ದೊಡ್ಡ ಪರ್ವತ ಶ್ರೇಣಿಯಾದ ಮ್ಯಾಕ್ಸ್ವೆಲ್ ಪರ್ವತ ಶ್ರೇಣಿಯು
ಶುಕ್ರಗ್ರಹದಲ್ಲಿದೆ.
ಭೂಮಿ
ಸೂರ್ಯನಿಂದ
ಭೂಮಿಗಿರುವ ದೂರವನ್ನು 1 ಖಗೋಳ ಮಾನ
(ಆಸ್ಟ್ರೋನಾಮಿಕಲ್ ಯುನಿಟ್) ಎನ್ನುವರು. ಸೂರ್ಯನಿಂದ ಭೂಮಿ 15 ಕೋಟಿ ಕಿ.ಮೀ (149,598,023 ಕಿಮೀ)
ದೂರದಲ್ಲಿದೆ. ಭೂಮಿಯ ವಯಸ್ಸು 454 ಕೋಟಿ ವರ್ಷ.
ಭೂಮಿಯ
ಸರಾಸರಿ ತ್ರಿಜ್ಯ 6371 ಕಿಮೀ.
ಭೂಮಧ್ಯರೇಖೆಯಲ್ಲಿ ಸುತ್ತಳತೆ (ವ್ಯಾಸ) 40,075 ಕಿ.ಮೀ ಇದ್ದು ಅದರ ಧ್ರುವೀಯ ಸುತ್ತಳತೆ 40,009 ಕಿ.ಮೀ ಇದೆ. ಭೂಮಿಯ ಸಾಂದ್ರತೆ 5.515 g/cm3 ಆಗಿದ್ದು
ಇದು ಸೌರವ್ಯೂಹದ 5ನೇ ಅತೀದೊಡ್ಡ ಗ್ರಹವಾಗಿದೆ.
ಭೂಮಿಯ
ಪರಿಭ್ರಮಣದ ಅವಧಿ 365 ದಿನ 6 ಘಂಟೆ ಮತ್ತು ಭ್ರಮಣದ ಅವಧಿ 24 ಘಂಟೆ. ಒಂದು ಸೆಕೆಂಡಿಗೆ 29.78 ಕಿ.ಮೀ ವೇಗದಲ್ಲಿ
ಭೂಮಿಯು ಸೂರ್ಯನನ್ನು ಸುತ್ತುತ್ತದೆ. ಭೂಮಿ ತನ್ನ ಅಕ್ಷದ ಮೇಲೆ ತಿರುಗುವಾಗ ಸಮಭಾಜಕ
ಪ್ರದೇಶದಲ್ಲಿ ಅದರ ವೇಗ 1,674.4 ಕಿಮೀ/ಗಂಟೆ
ಇರುತ್ತದೆ. ಭೂಮಿಯು ತನ್ನ
ಅಕ್ಷದಲ್ಲಿ 23.4% ಬಾಗಿದೆ. ಭೂಮಿಯಿಂದ ಚಂದ್ರ 3,84,000 ಕಿ.ಮೀ ದೂರದಲ್ಲಿದೆ.
ಪಶ್ಚಿಮ
ಆಸ್ಟ್ರೇಲಿಯಾದಲ್ಲಿ 4.1 ಶತಕೋಟಿ ವರ್ಷದ
ಜೈವಿಕ ಅವಶೇಷಗಳು ಕಂಡು ಬಂದಿದೆ. ಇವು ಭೂಮಿಯ ಮೇಲಿನ ಜೀವದ ಮೊದಲ ಪಳೆಯುಳಿಕೆ ಪುರಾವೆಗಳಾಗಿವೆ.
ಮಂಗಳ
ಭೂಮಿಯನ್ನು
ಹೊರತುಪಡಿಸಿ ಋತುಮಾನಗಳು ಉಂಟಾಗುವ ಏಕೈಕ ಗ್ರಹವಾಗಿದೆ.
ವಾತಾವರಣದಲ್ಲಿ
ಹೆಚ್ಚಾಗಿ ಇಂಗಾಲದ ಡೈಆಕ್ಸೈಡ್, ನೈಟ್ರೋಜನ್ ಮತ್ತು
ಆರ್ಗಾನ್‍ಗಳು ತಂಬಿವೆ.
ಇದರ
ಪರಿಭ್ರಮಣ ಅವಧಿ 686 ದಿನಗಳು ಮತ್ತು ಭ್ರಮಣದ ಅವಧಿ 24 ಗಂಟೆ 37 ನಿಮಿಷಗಳು
ಮಂಗಳ ಗ್ರಹ
ಕೆಂಪಾಗಿ ಕಾಣಲು ಕಾರಣ ಅದರ ಮಣ್ಣಿನಲ್ಲಿರುವ ಕಬ್ಬಿಣದ ಆಕ್ಸೈಡ್.
ಕುಜದ
ಉಪಗ್ರಹಗಳು ಡೈಮೋಸ್ ಮತ್ತು ಫೋಬೋಸ್
ಮಂಗಳ ಗ್ರಹದ
ಅಧ್ಯಯನಕ್ಕೆ ತೆರಳಿದ ಮೊದಲ ಉಪಗ್ರಹ ಮರಿನಾರ್ 4. ಮಂಗಳ ಗ್ರಹದ ಅನ್ವೇಷಣೆ ಕೈಗೊಂಡ ಬಾಹ್ಯಾಕಾಶ ನೌಕೆಗಳು ಬೀಗರ್ 2 ಮತ್ತು ಕ್ಯೂರಿಯಾಸಿಟಿ ರೋವರ್
ಗುರು
ಗುರುಗ್ರಹ
ಹೆಚ್ಚಾಗಿ ಜಲಜನಕ ಮತ್ತು ಹೀಲಿಯಂನಿಂದ ಕೂಡಿದೆ
ಬೃಹತ್
ಕೆಂಪು ಚುಕ್ಕೆ ಗುರುಗ್ರಹದ ನೈಸರ್ಗಿಕ ವೈಶಿಷ್ಟ್ಯತೆ.
ಗುರುವಿನ
ಪರಿಭ್ರಮಣದ ಅವಧಿ 11.85 ವರ್ಷಗಳು ಮತ್ತು
ಭ್ರಮಣದ ಅವಧಿ 9 ಘಂಟೆ 57 ನಿಮಿಷಗಳು. ಗುರು ಅತಿ ಕಡಿಮೆ ಭ್ರಮಣ ಅವಧಿ ಹೊಂದಿರುವ ಗ್ರಹವಾಗಿದೆ.
ಗುರು 79 ಉಪಗ್ರಹಗಳನ್ನು ಹೊಂದಿದೆ. ಮುಖ್ಯವಾದವುಗಳು ಗ್ಯಾನಿಮೇಡ್, ಕ್ಯಾಲ್ಲಿಸ್ಟೊ, ಐಓ ಮತ್ತು ಯುರೋಪಾ. ಇವುಗಳನ್ನು 1610ರಲ್ಲಿ ಗೆಲಿಲಿಯೊ
ಕಂಡುಹಿಡಿದನಾದ್ದರಿಂದ ಇವುಗಳನ್ನು ಗೆಲಿಲಿಯೊ ಪ್ಲಾನೆಟ್ಸ್ ಎನ್ನುವರು.
ಗ್ಯಾನಿಮೇಡ್
ಸೌರವ್ಯೂಹದಲ್ಲಿಯೇ ಅತ್ಯಂತ ದೊಡ್ಡ ಉಪಗ್ರಹವೆನಿಸಿದೆ. ಗ್ಯಾನಿಮೇಡ್ ಅನ್ನು ವಾಯೇಜರ್ 1 ಉಪಗ್ರಹ ಗುರುತಿಸಿತು.
1994 ರಲ್ಲಿ ಶೋ ಮೇಕರ್ ಎಂಬ ಧೂಮಕೇತು ಗುರುಗ್ರಹವನ್ನು ಅಪ್ಪಳಿಸಿತು
ಶನಿ
ಗುರುಗ್ರದಂತೆಯೇ
ಶನಿಯು ಸಹ ತನ್ನ ವಾತಾವರಣದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೈಡ್ರೊಜನ್ ಹಾಗೂ ಹೀಲಿಯಂಗಳನ್ನು
ಹೊಂದಿದೆ.
ಶನಿ
ನೀರಿಗಿಂತ ಕಡಿಮೆ ಸಾಂದ್ರತೆ ಹೊಂದಿರುವ ಸೌರವ್ಯೂಹದ ಏಕಮಾತ್ರ ಗ್ರಹ.
ಶನಿಯ
ಪರಿಭ್ರಮಣ ಅವಧಿ 29 ವರ್ಷಗಳು, ಭ್ರಮಣ ಅವಧಿ 10 ಘಂಟೆ 25 ನಿಮಿಷ
ಶನಿಯ 82 ಉಪಗ್ರಹಗಳನ್ನು ಹೊಂದಿದೆ. ಅವುಗಳಲ್ಲಿ ಟೈಟಾನ್ ಹಾಗೂ ಎನ್ಸೀಲಾಡಸ್
ಮುಖ್ಯವಾದವು. ಟೈಟಾನ್ ಸೌರಮಂಡಲದಲ್ಲಿ ಎರಡನೇ ಅತಿ ದೊಡ್ಡ ಉಪಗ್ರಹವಾಗಿದ್ದು ಸೌರವ್ಯೂಹದಲ್ಲಿಯೇ
ವಾತಾವರಣವನ್ನು ಹೊಂದಿರುವ ಏಕೈಕ ಉಪಗ್ರಹವೆನಿಸಿದೆ.
ಕ್ಯಾಸನಿ
ಎಂಬ ಉಪಗ್ರಹವು ಶನಿ ಗ್ರಹದ ಅಧ್ಯಯನ ನಡೆಸಿತ್ತಿದೆ.
ಯುರೇನಸ್
ಯುರೇನಸ್‌ನ
ವಾತಾವರಣವು ಸಹ ಹೈಡ್ರೋಜನ್ ಮತ್ತು ಹೀಲಿಯಂಗಳಿಂದಾಗಿದೆ ಜೊತೆಗೆ ಹೆಚ್ಚಾಗಿ ಮೀಥೇನ್ ಇಂದ
ಕೂಡಿರುವುದರಿಂದ ಅದರ ಬಣ್ಣ ನೀಲಿಯಾಗಿ ಕಾಣುತ್ತದೆ.
ಯುರೇನಸ್
ಅನ್ನು 1781ರಲ್ಲಿ ವಿಲಿಯಂ ಹರ್ಷಲ್ ಎಂಬ ವಿಜ್ಞಾನಿ ಕಂಡುಹಿಡಿದನು
ಈ ಗ್ರಹದ
ವೈಶಿಷ್ಟ್ಯವೆಂದರೆ ಅದರ ಅಕ್ಷ 98 ಡಿಗ್ರಿ
ಓರೆಯಾಗಿದೆ. ಇದರ ಪರಿಣಾಮವಾಗಿ ಯುರೇನಸ್‌ನ ಒಂದು ಧ್ರುವವು ಸೂರ್ಯನತ್ತ ಮುಖ ಮಾಡಿರುತ್ತದೆ
ಇನ್ನೊಂದು ಧ್ರುವವು ಕತ್ತಲಲ್ಲಿರುತ್ತದೆ. ಇದರಿಂದ ಪ್ರತಿ ಧ್ರುವವು 42 ವರ್ಷಗಳ ಕಾಲ ಬೆಳಕಿನಲ್ಲಿ ಮತ್ತು 42 ವರ್ಷಗಳ ಕಾಲ ಕತ್ತಲಲ್ಲಿ ಇರುತ್ತದೆ
ಶುಕ್ರನಂತೆ
ಯುರೇನಸ್ ಸಹ ಪ್ರದಕ್ಷಿಣಾಕಾರದ ಭ್ರಮಣೆಯನ್ನು ಹೊಂದಿದೆ.
ಯುರೆನಸ್‍ನ
ಪರಿಭ್ರಮಣ ಅವಧಿ 84 ವರ್ಷಗಳು, ಭ್ರಮಣ ಅವಧಿ 10 ಘಂಟೆ 45 ನಿಮಿಷಗಳು
ಯುರೇನಸ್ 27 ಉಪಗ್ರಹಗಳನ್ನು ಹೊಂದಿದೆ, ಅವುಗಳಲ್ಲಿ ಮುಖ್ಯವಾದವು ಟೈಟಾನಿಯ, ಓಬೆರಾನ್, ಅಂಬ್ರಿಯಲ್, ಏರಿಯಲ್, ಮಿರಾಂಡಾ ಮುಂತಾದವು
ನೆಪ್ಚೂನ್
ನೆಪ್ಚೂನ್‍ನ
ವಾತಾವರಣದಲ್ಲಿ ಹೈಡ್ರೋಜನ್, ಹೀಲಿಯಂ ಮತ್ತು
ಮೀಥೇನ್‍ಗಳು ಯಥೇಚ್ಚವಾಗಿವೆ.
1846 ರಲ್ಲಿ ಜೋಹಾನ್ ಗಾಲೆ ಎಂಬ ವಿಜ್ಞಾನಿ ನೆಪ್ಚೂನ್ ಅನ್ನು ಕಂಡಿಹಿಡಿದನು
ನೆಪ್ಚೂನ್‍ನ
ಪರಿಭ್ರಮಣ ಅವಧಿ 165 ವರ್ಷಗಳು, ಭ್ರಮಣ ಅವಧಿ 16 ಘಂಟೆ 11 ನಿಮಿಷಗಳು.
ನೆಪ್ಚೂನ್ 14 ಉಪಗ್ರಹಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾದವು ಟ್ರೈಟಾನ್
ಮತ್ತು ನೆರಿಡ್. ಅತ್ಯಂತ ದೊಡ್ಡ ಉಪಗ್ರಹವಾದ ಟ್ರೈಟಾನ್ ದ್ರವ ಸಾರಜನಕದ ಬಿಸಿನೀರಿನ
ಬುಗ್ಗೆಗಳಿಂದ ಕೂಡಿದೆ.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ